ನಮ್ಮ ವಿರುದ್ಧ ಯುದ್ಧ ಮಾಡುವುದಕ್ಕಾಗಿ ನೇರ ಯುದ್ಧ ಭೂಮಿಗೆ ಇಳಿಯರಿ ! – ಪಾಶ್ಚಾತ್ಯ ದೇಶಗಳಿಗೆ ಪುತಿನ್ ಸವಾಲು

ಮಾಸ್ಕೋ – ನಮ್ಮ ವಿರುದ್ಧ ಯುದ್ಧ ಮಾಡುವುದಕ್ಕಾಗಿ ನೇರವಾಗಿ ಯುದ್ಧ ಭೂಮಿಗೆ ಇಳಿಯರಿ, ಎಂದು ರಷ್ಯಾ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಪಾಶ್ಚಾತ್ಯ ದೇಶಗಳಿಗೆ ಸವಾಲು ಹಾಕಿದ್ದಾರೆ. ಕಳೆದ ೪ ತಿಂಗಳುಗಳಿಂದ ರಷ್ಯಾ ಯುಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಅನೇಕ ಪಾಶ್ಚಾತ್ಯ ದೇಶಗಳು ಪ್ರತ್ಯಕ್ಷವಾಗಿ ಯುದ್ಧದಲ್ಲಿ ಭಾಗವಹಿಸದೆ ಯುಕ್ರೇನಿ ಪರ ಬೆಂಬಲ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಪುತಿನ ಇವರು ಯುಕ್ರೇನ್ ಗೆ ಬೆಂಬಲ ನೀಡುವುದಾದರೆ, ನೇರ ನಮ್ಮ ವಿರುದ್ಧ ಯುದ್ಧಕ್ಕಿಳಿಯರಿ ಎಂದು ಸವಾಲ ಹಾಕಿದ್ದಾರೆ.

ಪುತಿನ ಇವರು ಜುಲೈ ೭ ರಂದು ಮಾಸ್ಕೋದಲ್ಲಿ ಶಾಸಕರ ಬೈಠಕ್ ನಡೆಸಿದರು. ಅದರಲ್ಲಿ ಯುದ್ಧದ ವರದಿ ತೆಗೆದುಕೊಳ್ಳಲಾಯಿತು. ಪುತಿನ್ ಇವರು ಯುಕ್ರೇನಿನ ಜನತೆಯ ಬಗ್ಗೆ ಕಾಳಜಿ ತೋರಿಸಿದರು. ಅವರು ‘ಪಾಶ್ಚಾತ್ಯ ದೇಶಗಳು ಸ್ವತಃ ಯುದ್ಧದಲ್ಲಿ ಭಾಗವಹಿಸದೆ ಯುಕ್ರೇನಿನ ಜನರಿಗೆ ಯುದ್ಧಕ್ಕಾಗಿ ಮುಂದೆ ತಳ್ಳುತ್ತಿದೆ. ನಾವು ಶಾಂತಿಯ ವಿರೋಧಕರಲ್ಲ. ಆದರೆ ಕೆಲವು ದೇಶಗಳ ಹಸ್ತಕ್ಷೇಪದಿಂದ ಶಾಂತಿ ಸ್ಥಾಪಿಸಲು ಕಷ್ಟವಾಗುತ್ತಿದೆ’ ಎಂದು ಹೇಳಿದರು.