ಸೈನ್ಯದಳದಿಂದ ಹಿಂದೂ ಭಕ್ತರ ಅಪಹರಣ !
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಶಿಬಚರನಲ್ಲಿರುವ `ಇಸ್ಕಾನ್’ ಕೇಂದ್ರವನ್ನು ಇಸ್ಲಾಮಿಕ್ ಕಟ್ಟರವಾದಿಗಳು ಬಲವಂತವಾಗಿ ಮುಚ್ಚಿದರು. ಈ ಹಿಂದೆ ಬಾಂಗ್ಲಾದೇಶದ `ಇಸ್ಕಾನ್’ನ ಧಾರ್ಮಿಕ ಮುಖಂಡರಾದ ಚಿನ್ಮಯ ಕೃಷ್ಣ ದಾಸರನ್ನು ಬಂಧಿಸಲಾಗಿತ್ತು. ಕೇಂದ್ರವನ್ನು ಮುಚ್ಚಿದ ನಂತರ ಬಾಂಗ್ಲಾದೇಶ ಸೇನೆಯು ಇಸ್ಕಾನಿನ ಹಿಂದೂ ಭಕ್ತರನ್ನು ಅಪಹರಿಸಿರುವ ವರದಿಗಳು ಬೆಳಕಿಗೆ ಬಂದಿವೆ. ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರರಾದ ರಾಧಾರಮಣ ದಾಸ ರವರು ‘ಎಕ್ಸ್’ ನಲ್ಲಿ ಪ್ರಕಟಿಸಿರುವ ಪೋಸ್ಟ್ನಲ್ಲಿ ‘ಬಾಂಗ್ಲಾದೇಶದ ಇಸ್ಕಾನ್ ಕೇಂದ್ರವನ್ನು ಮುಸಲ್ಮಾನರು ಬಲವಂತವಾಗಿ ಮುಚ್ಚಿದ್ದಾರೆ. ಸೈನಿಕರು ಬಂದರು ಮತ್ತು ಇಸ್ಕಾನಿನ ಭಕ್ತರನ್ನು ಒಂದು ವಾಹನದಲ್ಲಿ ತುಂಬಿಕೊಂಡು ಹೋದರು’ ಎಂದು ಹೇಳಿದ್ದಾರೆ.
ದಾಸ ರವರು ಒಂದು ವಿಡಿಯೋ ಕೂಡ ಪ್ರಸಾರ ಮಾಡಿದ್ದಾರೆ, ಅದರಲ್ಲಿ ಸ್ಥಳೀಯ ಇಸ್ಲಾಮೀ ಕಟ್ಟರತಾವಾದಿ ಗುಂಪಿನ ನಾಯಕನೋರ್ವನು ಶಿಬಚರನ `ಇಸ್ಕಾನ’ ಕೇಂದ್ರ ಮುಚ್ಚುವಂತೆ ಒತ್ತಾಯಿಸುತ್ತಿರುವುದು ಕಾಣಿಸುತ್ತಿದೆ. `ಇಸ್ಕಾನ’ ದೇವಸ್ಥಾನದ ಫಲಕವನ್ನು ಕೆಲವು ಜನರು ತೆಗೆದು ಹಾಕುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬಂದಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದ ‘ಇಸ್ಕಾನ್’ ಮೇಲಿನ ಈ ಅರಿಷ್ಟವು ಹಿಂದೂ ಧರ್ಮಕ್ಕೆ ಅರಿಷ್ಟವಾಗಿದೆ. ಈ ವಿಷಯದಲ್ಲಿ ಈಗ ಜಾಗತಿಕ ಮಟ್ಟದಲ್ಲಿ ಹಿಂದೂಗಳು ಸಂಘಟಿತವಾಗಿ ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವಂತೆ ಮಾಡಬೇಕು. |