ಬಾಂಗ್ಲಾದೇಶದ ಮೇಲೆ ನಿರ್ಬಂಧ ಹೇರಲು ಹಿಂದೂ-ಅಮೇರಿಕನ ಗುಂಪಿನ ಆಗ್ರಹ !
ವಾಷಿಂಗ್ಟನ – ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಇಸ್ಲಾಮಿಕ್ ಕಟ್ಟಾವಾದಿಗಳಿಂದ ಹಿಂದೂ ದೇವಸ್ಥಾನಗಳು ಮತ್ತು ಹಿಂದೂಗಳ ಮನೆಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಇತ್ತೀಚೆಗೆ ಪ್ರಸಿದ್ಧ ಹಿಂದೂ ನಾಯಕ ಚಿನ್ಮಯ ಕೃಷ್ಣ ದಾಸ ಅವರನ್ನು ಬಂಧಿಸಲಾಗಿತ್ತು. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಅಮೇರಿಕದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಂಗ್ಲಾದೇಶದ ಮೇಲೆ ನಿರ್ಬಂಧಗಳನ್ನು ಹೇರಬೇಕು ಎಂದು ಹಿಂದೂ-ಅಮೇರಿಕ ಗುಂಪು ಒತ್ತಾಯಿಸಿದೆ. ಆಗಸ್ಟ್ 5 ರಿಂದ, ಬಾಂಗ್ಲಾದೇಶದ 50 ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇತ್ತೀಚೆಗೆ ಬಾಂಗ್ಲಾದೇಶದ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಲಾಯಿತು. ಇದರಿಂದಾಗಿ ರಾಜಧಾನಿ ಢಾಕಾ ಸೇರಿದಂತೆ ವಿವಿಧೆಡೆ ಹಿಂದೂ ಸಮುದಾಯದವರು ಪ್ರತಿಭಟನೆ ನಡೆಸಿದರು.
1. ಅಮೇರಿಕಾದ ವಿಶ್ವ ಹಿಂದೂ ಪರಿಷತ್ತು (ವಿ.ಎಚ್.ಪಿ.ಎ.ಯ) ಅಧ್ಯಕ್ಷ ಅಜಯ್ ಶಾ ಮಾತನಾಡಿ, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಕಳವಳಕಾರಿಯಾಗಿದೆ. ‘ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆಯು ವ್ಯಕ್ತವಾಗದೇ ಇರುವುದು ಅಪರಾಧಿಗಳಿಗೆ ಉತ್ತೇಜನ ನೀಡುತ್ತದೆ’, ಎಂದು ಹೇಳಿದರು.
2. ವಿಶ್ವ ಹಿಂದೂ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಅಮಿತಾಬ ಮಿತ್ತಲ್ ಮಾತನಾಡಿ, “ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ವಿಶ್ವ ಮಾಧ್ಯಮಗಳ ಮೌನವು ಆಘಾತಕಾರಿಯಾಗಿದೆ’, ಎಂದು ಹೇಳಿದ್ದಾರೆ.
3. ‘ಹಿಂದೂ ಫಾರ್ ಅಮೇರಿಕಾ ಫಸ್ಟ್’ (ಎಚ್.ಎಫ್.ಎ.ಎಫ್.) ಹೊಸದಾಗಿ ಚುನಾಯಿತರಾದ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬರೆದ ಬಹಿರಂಗ ಪತ್ರದಲ್ಲಿ, ಬಾಂಗ್ಲಾದೇಶದಲ್ಲಿ ಹಿಂದೂ, ಬೌದ್ಧ ಮತ್ತು ಕ್ರೈಸ್ತ ಸಮುದಾಯಗಳು ಹಿಂಸಾಚಾರ ಮತ್ತು ತಾರತಮ್ಯವನ್ನು ಎದುರಿಸುತ್ತಿವೆ. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರ ರಕ್ಷಣೆಗೆ ಅಮೇರಿಕಾವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಅಮೇರಿಕದಲ್ಲಿರುವ ಹಿಂದೂಗಳು ಕೃತಿ ಮಾಡುತ್ತಾರೆ; ಆದರೆ ಭಾರತದ ಮೂಲ ಹಿಂದೂಗಳು ಏನನ್ನೂ ಮಾಡುತ್ತಿಲ್ಲ, ಇದು ವಿಷಾದದ ಸಂಗತಿ ! |