Belarus President Kashmir Issue : ಪಾಕಿಸ್ತಾನಕ್ಕೆ ಭೇಟಿ ನೀಡಿದ ಬೆಲಾರಸ್ ಅಧ್ಯಕ್ಷರು ಕಾಶ್ಮೀರದ ಬಗ್ಗೆ ಹೇಳಿಕೆ ನೀಡಲು ನಿರಾಕರಣೆ !

ಪಾಕಿಸ್ತಾನಕ್ಕೆ ಕಪಾಳಮೋಕ್ಷ !

ಇಸ್ಲಾಮಾಬಾದ್ (ಪಾಕಿಸ್ತಾನ) – ಬೆಲಾರಸ್ ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಭೇಟಿಯಾದರು. ಲುಕಾಶೆಂಕೋ ಅವರು ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆ ಮಾಡಬೇಕೆಂದು ಪ್ರಧಾನಿ ಷರೀಫ್ ಅವರ ಇಚ್ಛೆ ಇತ್ತು; ಆದರೆ ಅವರು ಹಾಗೆ ಮಾಡಲು ಸ್ಪಷ್ಟವಾಗಿ ನಿರಾಕರಿಸಿದರು. ಬೆಲಾರಸ್ ರಷ್ಯಾದ ನೆರೆಯ ಮಿತ್ರರಾಷ್ಟ್ರವಾಗಿದೆ.

ಈ ಸಂದರ್ಭದಲ್ಲಿ ಪಾಕಿಸ್ತಾನಿ ಪತ್ರಕರ್ತನು, ಪ್ರಧಾನಿ ಷರೀಫ್ ಅವರು ಕಾಶ್ಮೀರದ ಸೂತ್ರವನ್ನು ಲುಕಾಶೆಂಕೊಗೆ ಪ್ರಸ್ತುತಪಡಿಸಿದರು; ಆದರೆ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಲುಕಾಶೆಂಕೊ ಹೇಳಿದ್ದಾರೆ. ಅವರು, ‘ನಾನು ಕೇವಲ 2 ದೇಶಗಳ ಮಧ್ಯೆ ವ್ಯಾಪಾರವನ್ನು ಹೇಗೆ ಬೆಳೆಸಬೇಕು’, ಎಂಬ ಸೂತ್ರವನ್ನು ಚರ್ಚಿಸಲು ಬಂದಿದ್ದೇನೆ ಎಂದು ಹೇಳಿದರು. ಬೆಲಾರಸ್ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಹೇಗೆ ಸುಧಾರಿಸಬಹುದು, ಎಂಬುದರ ಕುರಿತು ಮಾತ್ರ ನಾನು ಮಾತನಾಡುತ್ತೇನೆ. “ಕಾಶ್ಮೀರ ಅಥವಾ ಇತರ ಯಾವುದೇ ರಾಜಕೀಯ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ” ಎಂದು ಸ್ಪಷ್ಟ ನಿಲುವನ್ನು ತಾಳಿದರು.

ಸಂಪಾದಕೀಯ ನಿಲುವು

ಹೀಗೆ ಎಷ್ಟೇ ಅವಮಾನ ಆದರೂ ಪಾಕಿಸ್ತಾನದ ಬಾಲ ಡೊಂಕಾಗಿಯೇ ಇರುತ್ತದೆ !