ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧಪ್ರಾಂತದಲ್ಲಿ ಪಿಸ್ತೂಲಿನ ಭಯ ತೋರಿಸಿ ೧೬ ವರ್ಷದ ಓರ್ವ ಅಪ್ರಾಪ್ತ ಹಿಂದೂ ಹುಡುಗಿಯ ಅಪಹರಣ ಮಾಡಲಾಗಿದೆ. ಸಂತ್ರಸ್ತ ಹುಡುಗಿಗೆ ತಕ್ಷಣವೇ ಬಿಡುಗಡೆ ಮಾಡದೇ ಇದ್ದಲ್ಲಿ ಆಕೆಯನ್ನು ಬಲವಂತವಾಗಿ ಮತಾಂತರ ಮಾಡಿ ಅಪಹರಣ ಮಾಡಿದವನ ಜೋತೆ ನಿಕಾಹ ಮಾಡಲಾಗುವುದು, ಎಂಬ ಸಾಧ್ಯತೆಯನ್ನು ‘ವಾಯ್ಸ್ ಆಫ್ ಪಾಕಿಸ್ತಾನ ಮೈನಾರಿಟಿ’ಯು ಟ್ವೀಟ್ ಮಾಡಿದೆ.