ಢಾಕಾ – ಬಾಂಗ್ಲಾದೇಶದ ‘ಇಸ್ಕಾನ್‌ನ ಸದಸ್ಯ ಶ್ರೀ ಚಿನ್ಮಯ ಕೃಷ್ಣ ದಾಸ ಪ್ರಭು ಅವರ ಬಿಡುಗಡೆಗಾಗಿ ಶಾಂತಿಯುತವಾಗಿ ಆಂದೋಲನ ಮಾಡುತ್ತಿದ್ದ 47 ಹಿಂದೂಗಳನ್ನು ಪೊಲೀಸರು ಠಾಕೂರಗಾಂವ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಈ ಆಂದೋಲನಕಾರರು ನಿಯಮಗಳನ್ನು ಉಲ್ಲಂಘಿಸಿ ರಾಜ್ಯದ ವಿರುದ್ಧ ಅಪರಾಧ ಮಾಡಿದ್ದಾರೆ ಎಂದು ಪೊಲೀಸರು ದಾವೆ ಮಾಡಿದ್ದಾರೆ. ‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಮಾನವ ಹಕ್ಕುಗಳ ಸ್ವಯಂಸೇವಕರು ‘ಸನಾತನ ಪ್ರಭಾತ್’ಗೆ, ಹಿಂದೂ ಆಂದೋಲನಕಾರರಿಂದ ಯಾವುದೇ ಹಿಂಸಾಚಾರ ನಡೆದಿಲ್ಲ; ಆದರೆ ಶಾಂತಿಯುತವಾಗಿ ಆಂದೋಲನ ಮಾಡುತ್ತಿದ್ದ ಹಿಂದೂಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.
‘ಬಾಂಗ್ಲಾದೇಶ ಮೈನಾರಿಟಿ ವಾಚ್’ನ ಅಧ್ಯಕ್ಷ ಪೂ. ರವೀಂದ್ರ ಘೋಷ್ ಅವರು ಈ ಪ್ರಕರಣದ ಬಗ್ಗೆ ಪೊಲೀಸ್ ಅಧೀಕ್ಷಕರು ಮತ್ತು ಉಪಾಯುಕ್ತರು ಅವರನ್ನು ಸಂಪರ್ಕಿಸಿ ವಿಚಾರಿಸಿದರು. ಯಾವುದೇ ಕಾನೂನು ಅಧಿಕಾರವಿಲ್ಲದೆ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಸುಳ್ಳು ಪ್ರಕರಣಗಳು ಮತ್ತು ಬಂಧನಗಳ ಬಗ್ಗೆ ನನಗೆ ತುಂಬಾ ಕಾಳಜಿ ಇದೆ, ಎಂದು ಘೋಷ್ ಹೇಳಿದ್ದಾರೆ. ಅಲ್ಪಸಂಖ್ಯಾತ ಹಿಂದೂ ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸರಕಾರ ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಭಾರತ ಸರಕಾರವು ಬಾಂಗ್ಲಾದೇಶದ ಮೇಲೆ ಒತ್ತಡ ಹೇರಬೇಕು ಎಂದು ಭಾರತೀಯರು ಅಪೇಕ್ಷಿಸುತ್ತಾರೆ ! |