ಆಬೆ ಶಿಂಜೋ ಇವರು ಒಂದು ಧಾರ್ಮಿಕ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದರಿಂದ ಹತ್ಯೆ ಮಾಡಲಾಯಿತು

ಕೊಲೆಗಾರನು ಆ ಧಾರ್ಮಿಕ ಸಂಘಟನೆಯನ್ನು ದ್ವೇಷಿಸುತ್ತಿದ್ದ !

ಜಪಾನಿನ ಮಾಜಿ ಪ್ರಧಾನಿ ಆಬೆ ಶಿಂಜೋ

ಟೋಕಿಯೋ (ಜಪಾನ) – ಜಪಾನಿನ ಮಾಜಿ ಪ್ರಧಾನಿ ಆಬೆ ಶಿಂಜೋ ಇವರ ಹತ್ಯೆಯ ಹಿಂದಿನ ಕಾರಣ ಸ್ಪಷ್ಟವಾಗಿದೆ. ಹಂತಕ ತೇತ್ಸುಯಾ ಯಾಮಾಗಾಮಿಯು, ‘ನಾನು ಅಬೆ ಇವರನ್ನು ಕೊಲ್ಲುವ ಸಂಚು ರೂಪಿಸಿದ್ದೆ; ಏಕೆಂದರೆ ನಾನು ಯಾವ ಧಾರ್ಮಿಕ ಸಂಘಟನೆಯನ್ನು ದ್ವೇಷಿಸುತ್ತೇನೆ ಆ ಸಂಘಟನೆಯ ಜೊತೆ ಆಬೆ ಸಂಬಂಧ ಹೋಮದಿರುವ ವದಂತಿ ನಾನು ಕೇಳಿದೆ ಮತ್ತು ಅದರ ಮೇಲೆ ವಿಶ್ವಾಸವಿಟ್ಟೆ.’ ಎಂದುನು.