Nuclear Missile Test Successful: ಭಾರತದಿಂದ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಯ ಯಶಸ್ವಿ ಪರೀಕ್ಷೆ


ನವ ದೆಹಲಿ – ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಪರಮಾಣು ಜಲಾಂತರ್ಗಾಮಿ ‘ಅರಿಘಾಟ್‌’ನಿಂದ ಅಣ್ವಸ್ತ್ರವನ್ನು ಪ್ರಯೋಗಿಸುವ ಬ್ಯಾಲೆಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಕ್ಷಿಪಣಾಸ್ತ್ರದ ಗರಿಷ್ಠ ಸಾಮರ್ಥ್ಯ 3 ಸಾವಿರದ 500 ಕಿ.ಮೀ. ಆಗಿದೆ. ಒಂದು ವೇಳೆ ಭೂಮಿಯಿಂದ ದಾಳಿ ಮಾಡಲು ಪರಿಸ್ಥಿತಿ ಸಾಧ್ಯವಾಗದಿದ್ದರೆ, ನೀರಿನಿಂದಲೇ ಶತ್ರು ದೇಶದ ಮೇಲೆ ಅಣ್ವಸ್ತ್ರದ ದಾಳಿ ನಡೆಸುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

ಭಾರತವು ಯಾರ ಮೇಲೂ ಮೊದಲಬಾರಿ ಅಣ್ವಸ್ತ್ರದ ದಾಳಿ ಮಾಡುವುದಿಲ್ಲ, ಎಂದು ಭಾರತದ ಧೋರಣೆ ಇದೆ; ಆದರೆ ಭಾರತದ ಮೇಲೆ ಯಾರಾದರೂ ಅಣ್ವಸ್ತ್ರಗಳಿಂದ ದಾಳಿ ಮಾಡಿದರೆ, ಭಾರತ ಅವರನ್ನು ಬಿಡುವುದಿಲ್ಲ. ಆದ್ದರಿಂದ, ಅಂತಹ ದಾಳಿಗಳಿಗಾಗಿ ಈ ಕ್ಷಿಪಣಿ ಮಹತ್ವವೆಂದು ಪರಿಗಣಿಸಲಾಗಿದೆ.