ಬಾಂಗ್ಲಾದೇಶ: ೬ ತಿಂಗಳಲ್ಲಿ ೧೧೬ ಅಲ್ಪಸಂಖ್ಯಾತರ ಹತ್ಯೆ; ಮೃತರ ಪೈಕಿ ಹಿಂದೂಗಳ ಸಂಖ್ಯೆಯೇ ಹೆಚ್ಚು
ಈ ಹಿಂಸಾಚಾರವು ಹೀಗೆಯೇ ಮುಂದುವರಿದರೆ ಬಾಂಗ್ಲಾದೇಶದ ಸ್ಥಿರತೆ ಮತ್ತು ಸಾಮಾಜಿಕ ಏಕತೆಗೆ ದೊಡ್ಡ ಅಪಾಯ ಉಂಟಾಗಬಹುದೆಂದು ವರದಿಯು ಎಚ್ಚರಿಸಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕಳವಳ ವ್ಯಕ್ತವಾಗುತ್ತಿದ್ದು, ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕೂಗು ಕೇಳಿ ಬರುತ್ತಿದೆ.