ಕಳ್ಳತನದ ಉದ್ದೇಶದಿಂದ ಹತ್ಯೆ ನಡೆದಿದೆ ಎಂದು ಪೊಲೀಸರ ವಾದ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಚಿತ್ತಗಾಂಗ್ನ ದಾಗನಭಯಿಯಾ ಎಂಬಲ್ಲಿ ಮತಾಂಧ ಮುಸಲ್ಮಾನರು ೨೮ ವರ್ಷದ ಹಿಂದೂ ರಿಕ್ಷಾ ಚಾಲಕ ಸಮೀರ್ ಕುಮಾರ್ ದಾಸ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಅವನ ರಿಕ್ಷಾವನ್ನೂ ಕಳ್ಳತನ ಮಾಡಲಾಗಿದೆ. ಉಪ ಜಿಲ್ಲಾ ಆಸ್ಪತ್ರೆಯ ಹೊರಗೆ ಸಮೀರ ದಾಸನ ಮೃತದೇಹ ಪತ್ತೆಯಾಗಿದೆ. ಇದು ಕಳ್ಳತನದ ಉದ್ದೇಶದಿಂದ ನಡೆದ ಹತ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.
೧. ಕುಟುಂಬದವರ ಪ್ರಕಾರ, ಸಮೀರನು ಜನವರಿ ೧೧ ರಂದು ಸಂಜೆ ೭ ಗಂಟೆಗೆ ರಿಕ್ಷಾ ತೆಗೆದುಕೊಂಡು ಮನೆಯಿಂದ ಹೊರಬಂದಿದ್ದನು. ತಡರಾತ್ರಿಯಾದರೂ ಆತ ಮನೆಗೆ ಹಿಂತಿರುಗದ ಕಾರಣ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ರಾತ್ರಿ ೨ ಗಂಟೆಗೆ ಜಗತ್ಪುರ ಗ್ರಾಮದ ಹೊಲವೊಂದರಲ್ಲಿ ಸ್ಥಳೀಯರಿಗೆ ಅವನ ಮೃತದೇಹ ಪತ್ತೆಯಾಗಿದೆ.
೨. ಪೊಲೀಸರ ಪ್ರಕಾರ, ಈ ಹತ್ಯೆಯು ಪೂರ್ವಯೋಜಿತವಾಗಿ ನಡೆದಂತೆ ಕಾಣುತ್ತಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
Another Hindu murdered in Bangladesh’s Chittagong – police rush to brand it “theft.”
That’s 12 Hindu killings in one month.
When Muhammad Yunus claims this isn’t religious hatred, the state machinery follows – downplaying crimes and shielding Islamist fanaticism.
Whitewash… https://t.co/Eu530W9F7K pic.twitter.com/I4rxgUc2Vw
— Sanatan Prabhat (@SanatanPrabhat) January 13, 2026
ಒಂದು ತಿಂಗಳೊಳಗೆ ೧೨ ಹಿಂದೂಗಳ ಹತ್ಯೆ!
ಕಳೆದ ಒಂದು ತಿಂಗಳಲ್ಲಿ ಬಾಂಗ್ಲಾದೇಶದಲ್ಲಿ ೧೨ ಹಿಂದೂಗಳ ಹತ್ಯೆಯಾಗಿದೆ. ಕಳೆದ ಎರಡು ವಾರಗಳಿಂದ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ ಎಂದು ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯುನಿಟಿ ಕೌನ್ಸಿಲ್’ ಆರೋಪಿಸಿದೆ. ಒಬ್ಬ ಹಿಂದೂ ವಿಧವೆಯ ಮೇಲೆ ಅತ್ಯಾಚಾರ, ಹಿಂದೂಗಳ ಚಿನ್ನದ ಅಂಗಡಿಗಳ ಲೂಟಿ, ಕುರಿಗ್ರಾಮ್ ಜಿಲ್ಲೆಯಲ್ಲಿ ಹಿಂದೂ ಚುನಾವಣಾ ಅಧಿಕಾರಿಗೆ ಕೆಲಸ ಮಾಡದಂತೆ ತಡೆದ ಘಟನೆ ಹೀಗೆ ಸಾಲು ಸಾಲು ಘಟನೆಗಳು ಜರುಗಿವೆ.
‘ಹಿಂದೂಗಳ ಹತ್ಯೆ ಧಾರ್ಮಿಕ ದ್ವೇಷದಿಂದ ನಡೆದಿದ್ದಲ್ಲ!’ – ಮೊಹಮ್ಮದ್ ಯುನೂಸ್
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯುನೂಸ್ ನೇತೃತ್ವದ ಆಡಳಿತವು ಅಲ್ಪಸಂಖ್ಯಾತರ ಹತ್ಯೆಗಳನ್ನು ಖಂಡಿಸಿದ್ದರೂ, ಪದೇ ಪದೇ ನಡೆಯುತ್ತಿರುವ ಈ ಘಟನೆಗಳನ್ನು ‘ಧಾರ್ಮಿಕ ದ್ವೇಷ’ ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಮೃತರ ಸಂಖ್ಯೆಯಲ್ಲಾಗಿರುವ ಹೆಚ್ಚಳವು ಕೇವಲ ಒಂದು ಅಪವಾದ ಎಂದು ಅವರು ಹೇಳುತ್ತಿದ್ದಾರೆ ಎಂದು ಸಂಘಟನೆಯು ತಿಳಿಸಿದೆ.
ಸಂಪಾದಕೀಯ ನಿಲುವು
|
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ