ಬಾಂಗ್ಲಾದೇಶದ ಜನಸಂಖ್ಯೆಯಲ್ಲಿ ಹಿಂದೂಗಳು ಕೇವಲ ಶೇ.8 ರಷ್ಟಿದ್ದರೂ, ಶೇ.೫೦ ರಷ್ಪು ದಾಳಿಗಳು ಅವರ ಮೇಲೆಯೇ ಆಗುತ್ತವೆ!

ನ್ಯೂಯಾರ್ಕ್ (ಅಮೆರಿಕ) ಇಲ್ಲಿ ನಡೆದ ಪ್ರತಿಭಟನೆಯ ಸಮಯದಲ್ಲಿ ಬಾಂಗ್ಲಾದೇಶದ ಪ್ರಾ. ಚಂದನ್ ಸರಕಾರ ಅವರು ನೀಡಿದ ಮಾಹಿತಿ

ನ್ಯೂಯಾರ್ಕ್ (ಅಮೆರಿಕ) – ಬಾಂಗ್ಲಾದೇಶದ ಜನಸಂಖ್ಯೆಯ ಕೇವಲ ಶೇ. 8 ರಷ್ಟು ಹಿಂದೂಗಳಿದ್ದಾರೆ, ಆದರೂ ಶೇ. 50 ಕ್ಕಿಂತ ಹೆಚ್ಚು ದಾಳಿಗಳನ್ನು ಹಿಂದೂಗಳು ಸಹಿಸಬೇಕಾಗುತ್ತಿದೆ. ಈ ಹಿಂಸಾಚಾರ ಧಾರ್ಮಿಕ ದ್ವೇಷದಿಂದ ಆಗದೇ ಇದ್ದರೆ, ಈ ಪ್ರಕಾರದ ಈ ಅಂಕಿ-ಅಂಶಗಳು ಅಸ್ತಿತ್ವದಲ್ಲಿರುತ್ತಿರಲಿಲ್ಲ, ಎಂದು ಬಾಂಗ್ಲಾದೇಶದ ತೀವ್ರ ಹಿಂದುತ್ವನಿಷ್ಠ ಪ್ರಾ. ಚಂದನ ಸರಕಾರ ಅವರು ಮಾಹಿತಿ ನೀಡಿದರು. ಪ್ರಾ. ಸರಕಾರ ಅವರು ಇಲ್ಲಿ ಬಾಂಗ್ಲಾದೇಶಿ ಹಿಂದೂಗಳು ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿರೋಧದಲ್ಲಿ ಮಾಡಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ‘ಸರಕಾರಿ ಅಧಿಕಾರಿಗಳು ಇದನ್ನು ‘ರಾಜಕೀಯ ಹಿಂಸಾಚಾರ’ ಎಂದು ತಿರಸ್ಕರಿಸುತ್ತಾರೆ; ಆದರೆ ಇದು ಹಿಂದೂಗಳ ಮೇಲಿನ ದಾಳಿಗಳು ಎಂಬುದು ನಿರ್ವಿವಾದ ಸತ್ಯವಾಗಿದೆ. ಹಿಂದೂಗಳನ್ನು ಕೇವಲ ಅವರ ಶ್ರದ್ಧೆಯಿಂದಾಗಿ ಬಾಂಗ್ಲಾದೇಶದಲ್ಲಿ ಗುರಿಪಡಿಸಲಾಗುತ್ತಿದೆ, ಎಂದೂ ಅವರು ತಿಳಿಸಿದರು. ಪ್ರಾ. ಸರಕಾರ ಅವರು ಈ ಸಂಬಂಧ ‘ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಾ. ಸರಕಾರ ಅವರು ನೀಡಿದ ಮಾಹಿತಿ!

1. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಅವರು 1971 ರ ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಮೇಧಕ್ಕೆ ಕಾರಣರಾದ ಆಗಿನ ಪಾಕಿಸ್ತಾನಿ ರಾಷ್ಟ್ರಪತಿ ಯಾಹ್ಯಾ ಖಾನ್ ಅವರಂತೆಯೇ ಇದ್ದಾರೆ.

2. ಯೂನಸ್ ಅವರು ಅಧಿಕಾರ ವಹಿಸಿಕೊಂಡ ಕೇವಲ 4 ತಿಂಗಳಲ್ಲಿ, ಅಂದರೆ ಆಗಸ್ಟ್ 8, 2024 ರಿಂದ ಡಿಸೆಂಬರ್ 27, 2024 ರವರೆಗಿನ ಅವಧಿಯಲ್ಲಿ ಹಿಂದೂಗಳನ್ನು ಗುರಿಪಡಿಸಿ 2 ಸಾವಿರ 347 ಹಿಂಸಾತ್ಮಕ ದಾಳಿಗಳು ಆಗಿವೆ. ಇದರಲ್ಲಿ 152 ದೇವಸ್ಥಾನಗಳನ್ನು ನಾಶ ಪಡಿಸಿದಿರುವುದು, 47 ಹಿಂದೂ ಹುಡುಗಿಯರ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ, ಹಾಗೂ 200 ಅಲ್ಪಸಂಖ್ಯಾತರ ಹತ್ಯೆ ಸೇರಿವೆ.

3. ವರ್ಷ 1971 ರಲ್ಲಿ ಯಾಹ್ಯಾ ಖಾನ್ ಅವರಂತೆ, ಮಹಮ್ಮದ್ ಯೂನಸ್ ಅವರ ಆಡಳಿತವು ಉಗ್ರಗಾಮಿಗಳಿಗೆ ಮನೆಗಳನ್ನು ಸುಡಲು, ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಮತ್ತು ದೇವಸ್ಥಾನಗಳನ್ನು ಕೆಡವಲು ಅನುಮತಿ ನೀಡಿತು. ಇದನ್ನು ನೋಡಿಯೂ ಪೊಲೀಸರು ಕಣ್ಮುಚ್ಚಿ ಕುಳಿತರು.

4. ಯುವ ನಾಯಕರೊಂದಿಗೆ 17 ಹಿಂದುತ್ವನಿಷ್ಠ ದೇಶದ್ರೋಹದ ಸುಳ್ಳು ಆರೋಪಗಳ ಅಡಿಯಲ್ಲಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಅವರು ಅನ್ಯಾಯದ ವಿರುದ್ಧ ಮಾತನಾಡುವ ಧೈರ್ಯ ಮಾಡಿದ ಕಾರಣಕ್ಕೆ ಅವರನ್ನು ಸುಮ್ಮನಾಗಿಸಲಾಗಿದೆ. ಇದು ಅಶಾಂತಿಯಲ್ಲ; ಇದು ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಮೇಧವಾಗಿದೆ.

ಸಂಪಾದಕೀಯ ನಿಲುವು

  • ಕೇವಲ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ, ಭಾರತದಲ್ಲಿಯೂ ಹಿಂದೂಗಳು ಶೇ.78 ರಷ್ಟಿದ್ದರೂ ಅತ್ಯಧಿಕ ದಾಳಿಗಳು ಅವರ ಮೇಲೆಯೇ ಆಗುತ್ತವೆ ಮತ್ತು ಅವು ಕೂಡ ಮತಾಂಧ ಮುಸಲ್ಮಾನರಿಂದಲೇ ಆಗುತ್ತದೆ, ಎನ್ನುವುದು ಅಷ್ಟೇ ಸತ್ಯವಾಗಿದೆ. ಈ ಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡಿನದು!
  • ಓದಿ ಮತ್ತು ಸುಮ್ಮನೆ ಕುಳಿತುಕೊಳ್ಳಿ ಎಂದು ಈಗ ಕೇವಲ ಭಾರತದ ಹಿಂದೂಗಳಿಗೆ ಮಾತ್ರವಲ್ಲ, ಬದಲಾಗಿ ಭಾರತ ಸರಕಾರಕ್ಕೂ ಉದ್ದೇಶಿಸಿ ಹೇಳುವ ಸಮಯ ಬಂದಿದೆಯೇ? ಎಂಬ ಗಂಭೀರ ಪ್ರಶ್ನೆ ಹಿಂದೂ ಧರ್ಮಪ್ರೇಮಿಗಳಿಗೆ ಮೂಡಿದೆ!