ಫೆಬ್ರವರಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ 91 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸ್ಪರ್ಧೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯಲು ಅಲ್ಲಿನ ಹಿಂದೂಗಳು ‘ಬಾಂಗ್ಲಾದೇಶ ಮೈನಾರಿಟಿ ಜನತಾ ಪಾರ್ಟಿ’ ಎಂಬ ಹೆಸರಿನ ಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಪಕ್ಷವು ಈ ಚುನಾವಣೆಯಲ್ಲಿ 91 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ರಕ್ಷಿಸುವ ಯಾವುದೇ ಪಕ್ಷ ಅಸ್ತಿತ್ವದಲ್ಲಿಲ್ಲದ ಕಾರಣ ಹಿಂದೂಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪಕ್ಷದ ಅಧ್ಯಕ್ಷ ಸುಕೃತಿ ಕುಮಾರ್ ಮಂಡಲ್ ಅವರು, ಯಾವ ಮತಕ್ಷೇತ್ರಗಳಲ್ಲಿ ಹಿಂದೂ ಮತದಾರರ ಸಂಖ್ಯೆ ಶೇ. 20% ರಿಂದ 60% ರಷ್ಟಿದೆಯೋ, ಅಂತಹ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಆದ್ಯತೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. 300 ಸ್ಥಾನಗಳ ಪೈಕಿ 40 ರಿಂದ 45 ಸ್ಥಾನಗಳಲ್ಲಿ ಜಯಗಳಿಸಿ ಸಂಸತ್ತಿನಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಮಂಡಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ಅವರು ತಿಳಿಸಿದರು.
ಭಾರತವು ತನ್ನ ನೀತಿಯನ್ನು ಬದಲಾಯಿಸಲಿ!
ಸುಕೃತಿ ಕುಮಾರ್ ಮಂಡಲ್ ಅವರು ಮಾತನಾಡಿ, ಭಾರತವು ಈಗ ಬಾಂಗ್ಲಾದೇಶದ ಬಗ್ಗೆ ತನ್ನ ನೀತಿಯನ್ನು ಬದಲಾಯಿಸುವ ಅಗತ್ಯವಿದೆ. ಕೇವಲ ಶೇಖ್ ಹಸೀನಾ ಅವರ ಅವಾಮಿ ಲೀಗ್‌ಗೆ ಬೆಂಬಲ ನೀಡುವ ಬದಲು, ಭಾರತವು ಬಾಂಗ್ಲಾದೇಶದ ಹಿಂದೂಗಳ ವಿಷಯಕ್ಕೆ ನೇರ ಬೆಂಬಲ ನೀಡಬೇಕು. ಭಾರತವು ತನ್ನ ನಿಲುವನ್ನು ಬದಲಾಯಿಸಿದರೆ ಮಾತ್ರ ಬಾಂಗ್ಲಾದೇಶದ ಇತರ ಮುಖ್ಯವಾಹಿನಿಯ ಪಕ್ಷಗಳು ಹಿಂದೂಗಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ ಎಂದರು.
ಬಿಎನ್‌ಪಿ ಅಥವಾ ಜಮಾತ್-ಎ-ಇಸ್ಲಾಮಿ ಜೊತೆ ಮೈತ್ರಿ ಮಾಡಿಕೊಳ್ಳುವ ಆಲೋಚನೆ
ಹಿಂದೂಗಳ ಸುರಕ್ಷತೆಗಾಗಿ ‘ಬಾಂಗ್ಲಾದೇಶ ಮೈನಾರಿಟಿ ಜನತಾ ಪಾರ್ಟಿ’ಯು ಯಾವುದೇ ಮುಖ್ಯವಾಹಿನಿಯ ಪಕ್ಷದೊಂದಿಗೆ ಕೈಜೋಡಿಸಲು ಸಿದ್ಧವಾಗಿದೆ ಎಂದು ಸುಕೃತಿ ಕುಮಾರ್ ಮಂಡಲ್ ಹೇಳಿದ್ದಾರೆ. ಹಿಂದೂ ದ್ವೇಷಿ ತಾರಿಕ್ ರೆಹಮಾನ್ ಅವರ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಆಗಲಿ ಅಥವಾ ಜಮಾತ್-ಎ-ಇಸ್ಲಾಮಿ ಆಗಲಿ, ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದ್ದಾರೆ. ‘ಒಂದು ವೇಳೆ ಈ ದೊಡ್ಡ ಪಕ್ಷಗಳೊಂದಿಗೆ ನಮ್ಮ ಮೈತ್ರಿ ಏರ್ಪಟ್ಟರೆ, ಹಿಂದೂ ಮತದಾರರು ಯಾವುದೇ ಭಯವಿಲ್ಲದೆ ಮನೆಯಿಂದ ಹೊರಬಂದು ಮತ ಚಲಾಯಿಸಬಹುದು’ ಎಂದು ಮಂಡಲ್ ತಿಳಿಸಿದರು.
ಪಕ್ಷದ ಧೋರಣೆ!
‘ಬಾಂಗ್ಲಾದೇಶ ಮೈನಾರಿಟಿ ಜನತಾ ಪಾರ್ಟಿ’ಯು ಬಾಂಗ್ಲಾದೇಶವನ್ನು ಜಾತ್ಯತೀತ ದೇಶವನ್ನಾಗಿ ಮಾಡುವುದು, ದೇಶವನ್ನು 5 ಪ್ರಾಂತ್ಯಗಳಾಗಿ ವಿಭಜಿಸಿ ಒಕ್ಕೂಟ ವ್ಯವಸ್ಥೆಯನ್ನು ಜಾರಿಗೆ ತರುವುದು, ಪ್ರತಿಯೊಂದು ಪ್ರಾಂತ್ಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು, ಪಠ್ಯಪುಸ್ತಕಗಳಲ್ಲಿ ವೈಜ್ಞಾನಿಕ ಮತ್ತು ಜಾತ್ಯತೀತ ವಿಚಾರಗಳನ್ನು ಅಳವಡಿಸುವುದು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಹಕ್ಕು ಹಾಗೂ ನ್ಯಾಯ ದೊರಕಿಸಿಕೊಡುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟಿದೆ.
ಹಿಂದೂಗಳು ರಾಜಕೀಯ ಮುಖ್ಯವಾಹಿನಿಯಲ್ಲಿ ಸಕ್ರಿಯರಾಗುವುದೇ ಏಕೈಕ ಆಯ್ಕೆ!
ಮಂಡಲ್ ಅವರ ಪ್ರಕಾರ, ಬಾಂಗ್ಲಾದೇಶದಲ್ಲಿ ಅಂದಾಜು ಎರಡೂವರೆ ಕೋಟಿ ಹಿಂದೂಗಳು ವಾಸಿಸುತ್ತಿದ್ದಾರೆ. ‘ಎನಿಮಿ ಪ್ರಾಪರ್ಟಿ ಆಕ್ಟ್’ (ಶತ್ರು ಆಸ್ತಿ ಕಾಯ್ದೆ) ನಂತಹ ಕಾನೂನುಗಳಿಂದಾಗಿ ಹಿಂದೂಗಳ ಭೂಮಿಯನ್ನು ಕಸಿದುಕೊಳ್ಳಲಾಗುತ್ತಿದೆ. ಇವೆಲ್ಲವನ್ನೂ ತಡೆಯಲು ಹಿಂದೂಗಳು ರಾಜಕೀಯ ಮುಖ್ಯವಾಹಿನಿಯಲ್ಲಿ ಸಕ್ರಿಯರಾಗುವುದೇ ಏಕೈಕ ಮಾರ್ಗವಾಗಿದೆ ಎಂದು ಕರೆ ನೀಡಿದರು.
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !