ಬಾಂಗ್ಲಾದೇಶ: ಕಿರುಕ್ಕೊಳ್ಳಗಾದ ಹಿಂದೂಗಳನ್ನು ಭಾರತಕ್ಕೆ ಪ್ರವೇಶಿಸಲು ಬಿಡಿ: ಸರಕಾರಕ್ಕೆ ವಿನಂತಿ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಹಿಂದೂಗಳು ಮುಸಲ್ಮಾನರ ಹಿಂಸಾತ್ಮಕ ಗುಂಪುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಭಾರತದ ಗಡಿಗಳನ್ನು ತೆರೆಯುವಂತೆ ವಿನಂತಿಸಿದ್ದಾರೆ. ಕಟ್ಟರವಾದಿ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ಯ (ಬಿಎನ್ಪಿ) ನಾಯಕ ತಾರಿಕ್ ರೆಹಮಾನ್ ಅವರು ೧೮ ವರ್ಷಗಳ ನಂತರ ಮತ್ತೆ ಬಾಂಗ್ಲಾದೇಶಕ್ಕೆ ಮರಳಿದ ಬಳಿಕ ರೆಹಮಾನ್ ಗೆ ಬೆಂಬಲ ದೊರೆತ ನಂತರ ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣ ಹೆಚ್ಚಿಸಿದೆ.
ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಓಸ್ಮಾನ್ ಹಾದಿ ಮರಣದ ನಂತರ ಭುಗಿಲೆದ್ದ ಹಿಂಸಾಚಾರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಂಗ್ಲಾದೇಶದ ಹಿಂಸಾತ್ಮಕ ಗುಂಪು ದೀಪು ಚಂದ್ರ ದಾಸ್ ಮತ್ತು ಅಮೃತ್ ಮೊಂಡಲ್ ಎಂಬ ಇಬ್ಬರು ಹಿಂದೂ ಯುವಕರನ್ನು ಹತ್ಯೆ ಮಾಡಿದೆ. ಅಲ್ಲದೇ ಅಲ್ಲಲ್ಲಿ ಬೆಂಕಿ ಹಚ್ಚುವ ಮತ್ತು ಹಲ್ಲೆ ನಡೆಸುವ ಅಸಂಖ್ಯಾತ ಘಟನೆಗಳು ನಡೆಯುತ್ತಿವೆ. ವಿದೇಶಾಂಗ ಸಚಿವಾಲಯದ ಮುಖ್ಯ ವಕ್ತಾರ ರಣಧೀರ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕಳೆದ ಅವಧಿಯಲ್ಲಿ ೨, ೯೦೦ ಘಟನೆಗಳು ನಡೆದಿವೆ.
🇮🇳 “Open the Borders, Save Hindus!” 🇮🇳
Bangladeshi Hindu victims plead with India:
🗣️ “Open India’s borders. Let us live in safety!”⚠️ Bitter truth:
Hindus must beg for refuge in their own civilizational homeland.Illegal Muslim infiltrators cross borders freely and settle… pic.twitter.com/JoMHfnqp9Y
— Sanatan Prabhat (@SanatanPrabhat) December 27, 2025
ನಾವು ಅಪಮಾನವನ್ನು ನುಂಗಿಕೊಂಡು ಬದುಕುತ್ತಿದ್ದೇವೆ ! – ಬಾಂಗ್ಲಾದೇಶಿ ಹಿಂದೂಗಳು
ರಂಗಪುರದ ಒಬ್ಬ ವೃದ್ಧರು ಈ ಹಿಂಸೆಗಳ ಬಗ್ಗೆ ಮಾತನಾಡಿ, ನಮ್ಮ ಧಾರ್ಮಿಕ ನಂಬಿಕೆಯಿಂದಾಗಿ ನಾವು ಪದೇ ಪದೇ ಅವಮಾನವನ್ನು ಎದುರಿಸಬೇಕಾಗುತ್ತಿದೆ. ಪದೇ ಪದೇ ಇಂತಹ ಘಟನೆಗಳು ನಡೆದರೂ ನಾವು ಅದಕ್ಕೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಈ ಮೊದಲು ರಸ್ತೆಯಲ್ಲಿ ಹೋಗುವಾಗ ಹೀಯಾಳಿಸುವ ಮಾತುಗಳನ್ನು ಕೇಳಬೇಕಾಗುತ್ತಿತ್ತು, ಈಗ ಅದು ಆಕ್ರಮಣವಾಗಿ ಪರಿವರ್ತನೆಗೊಂಡಿದೆ. ನಾವು ಇಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇವೆ ಮತ್ತು ತಪ್ಪಿಸಿಕೊಳ್ಳಲು ಯಾವುದೇ ದಾರಿ ಕಾಣುತ್ತಿಲ್ಲ. ದೀಪು ಚಂದ್ರ ದಾಸ್ ಮತ್ತು ಅಮೃತ್ ಮೊಂಡಲ್ ಅವರಂತಹ ಪರಿಸ್ಥಿತಿ ನಮಗೂ ಎದುರಾಗಬಹುದು ಎಂಬ ಭಯದಿಂದ ನಾವು ಅಪಮಾನವನ್ನು ನುಂಗಿಕೊಂಡು ಬದುಕುತ್ತಿದ್ದೇವೆ, ಎಂದು ಹೇಳಿದರು.

ಬಿಎನ್ಪಿ ಅಲ್ಪಸಂಖ್ಯಾತರ ವಿರೋಧಿ ಪಕ್ಷ !
ಈ ವೃದ್ಧರು ಮುಂದೆ ಮಾತನಾಡಿ, ನಾವು ಇಂದು ಅಸಹಾಯಕರಾಗಿದ್ದೇವೆ. ಭಾರತಕ್ಕೆ ಓಡಿ ಹೋಗಬೇಕೆಂದು ಅನ್ನಿಸುತ್ತದೆ; ಆದರೆ ಅಲ್ಲಿ ಗಡಿಯಲ್ಲಿ ಬಿಗಿ ಕಾವಲಿದೆ. ಫೆಬ್ರವರಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಬಿಎನ್ಪಿಯ ರೆಹಮಾನ್ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು; ಏಕೆಂದರೆ ಬಿಎನ್ಪಿಯನ್ನು ಅಲ್ಪಸಂಖ್ಯಾತರ (ಹಿಂದೂ, ಸಿಖ್, ಕ್ರೈಸ್ತ ಇತ್ಯಾದಿ) ವಿರೋಧಿ ಪಕ್ಷವೆಂದು ಪರಿಗಣಿಸಲಾಗುತ್ತದೆ, ಎಂದರು. ಢಾಕಾದ ವ್ಯಕ್ತಿಯೊಬ್ಬರು ಈ ಕುರಿತು ಮಾತನಾಡಿ, ದೀಪು ಚಂದ್ರ ದಾಸ್ ಹತ್ಯೆಯಿಂದ ಆತಂಕ ಉಂಟಾಗಿದೆ; ಆದರೆ ಅದಕ್ಕಿಂತ ಹೆಚ್ಚಾಗಿ ಮಾಜಿ ಅಧ್ಯಕ್ಷೆ ಖಾಲಿದಾ ಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಅಧಿಕಾರಕ್ಕೆ ಬಂದರೆ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗಲಿದೆ. ಬಿಎನ್ಪಿ ಅಧಿಕಾರಕ್ಕೆ ಬಂದರೆ ನಾವು ಹೆಚ್ಚಿನ ಕಿರುಕುಳವನ್ನು ಎದುರಿಸಬೇಕಾಗಬಹುದು. ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವೊಂದೇ ನಮ್ಮನ್ನು ರಕ್ಷಿಸುತ್ತಿತ್ತು, ಎಂದು ಅವರು ತಿಳಿಸಿದರು.
ಭಾರತದ ಹಿಂದೂ ಸಂಘಟನೆಗಳು ಕೇವಲ ಮಾತುಗಳಿಗಷ್ಟೇ ಸೀಮಿತ ! – ಸನಾತನ ಜಾಗರಣ ಮಂಚ್
ಸನಾತನ ಜಾಗರಣ ಮಂಚ್ ನ ಒಬ್ಬ ಕಾರ್ಯಕರ್ತರು ಈ ಕುರಿತು ಮಾತನಾಡಿ, ಬಾಂಗ್ಲಾದೇಶದಲ್ಲಿ ೨ ಕೋಟಿ ೫೦ ಲಕ್ಷ ಹಿಂದೂಗಳಿದ್ದಾರೆ. ಈ ಸಂಖ್ಯೆ ಸಣ್ಣದಲ್ಲ. ಭಾರತದ ಹಿಂದೂ ಸಂಘಟನೆಗಳು ಕೇವಲ ಬಾಯಿ ಚಪಲ ಬಿಟ್ಟರೆ ಬೇರೇನನ್ನೂ ಮಾಡುತ್ತಿಲ್ಲ. ನಾವು ಒಂದು ದೊಡ್ಡ ಪ್ರಳಯದ ಹೊಸ್ತಿಲಲ್ಲಿ ಬಂದು ನಿಂತಿದ್ದೇವೆ, ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ