
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ದೊಡ್ಡ ಸಂಚಿನಿಂದ ಪಾರಾಗಿದ್ದಾರೆ. ಈ ಸಂಚು ಭೀಕರವಾಗಿತ್ತು ಮತ್ತು ಮತ್ತೊಮ್ಮೆ ಭಾರತದ ಪ್ರಧಾನಮಂತ್ರಿಯವರ ಜೀವಕ್ಕೆ ದೊಡ್ಡ ಸಂಕಟವು ಈ ನಿಮಿತ್ತದಿಂದ ಎದುರಾಗಿತ್ತು. ಅದರ ಕೆಲವು ಅಂಶಗಳು ಬಹಿರಂಗವಾಗುತ್ತಿದೆ. ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಒಬ್ಬ ಅಮೆರಿಕನ್ ಅಧಿಕಾರಿಯ ನಿಗೂಢ ಸಾವು ಅದಕ್ಕೆ ಕಾರಣವಾಗಿತ್ತು ! ನಿಜವೆಂದರೆ, ಟೆರೆನ್ಸ್ ಅರ್ವೆಲ್ ಜ್ಯಾಕ್ಸನ್ ಎಂಬ ಈ ಅಮೆರಿಕನ್ ಅಧಿಕಾರಿಯನ್ನು ಬಾಂಗ್ಲಾದೇಶದ ಸೈಂಟ್ ಮಾರ್ಟಿನ್ ದ್ವೀಪದ ಕುರಿತು ಬಾಂಗ್ಲಾದೇಶದ ಸೈನ್ಯಕ್ಕೆ ತರಬೇತಿ ನೀಡಲು ಕಳುಹಿಸಲಾಗಿತ್ತು. ಅದೇ ದಿನ ಪ್ರಧಾನ ಮಂತ್ರಿ ಮೋದಿಯವರು ‘ಶಾಂಘಾಯ್ ಕೋ-ಆಪರೇಷನ್ ಆರ್ಗನೈಜೇಷನ್ ಶೃಂಗಸಭೆ’ಗಾಗಿ ಚೀನಾದ ತೆಯಾನ್ಜಿನ್‌ನಲ್ಲಿದ್ದರು. ಈ ಅಧಿಕಾರಿಯು ಪ್ರಧಾನಮಂತ್ರಿ ಮೋದಿಯವರ ಜೀವಕ್ಕೆ ಅಪಾಯವನ್ನುಂಟು ಮಾಡುವ ‘ಸಿಐಎ’ ಎಂಬ ಅಮೆರಿಕಾದ ಗೂಢಚಾರ ಸಂಸ್ಥೆಯ ಒಂದು ದೊಡ್ಡ ಸಂಚಿನ ಭಾಗವಾಗಿದ್ದನು. ಈ ಸಂಚನ್ನು ನಿಜವಾಗಿ ರಷ್ಯಾದ ‘ಕೆಜಿಬಿ’ ಮತ್ತು ಭಾರತದ ‘ರಾ’ ಎಂಬ ಗೂಢಚಾರ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ಮಾಡಿ ವಿಫಲಗೊಳಿಸಿವೆ. ಅದರಲ್ಲಿ ಈ ಅಧಿಕಾರಿಯು ಸಾವನ್ನಪ್ಪಿದನು ಎಂದು ಹೇಳಲಾಗುತ್ತಿದೆ; ಏಕೆಂದರೆ ಈ ಅಧಿಕಾರಿಯ ಸಾವಿನ ಯಾವುದೇ ವರದಿಯು ಬಹಿರಂಗವಾಗಿರಲಿಲ್ಲ ಅಥವಾ ಅದರ ಕಾರಣವನ್ನು ಹುಡುಕಲಾಗಿರಲಿಲ್ಲ. ಜವಾಬ್ದಾರ ಮಾಧ್ಯಮ ಪ್ರತಿನಿಧಿಗಳು ಮತ್ತು ಮಾಧ್ಯಮಗಳು ಇದರ ಬಗ್ಗೆ ಕೆಲವು ಅಂಶ ಮೇಲ್ನೋಟಕ್ಕೆ ನೀಡುತ್ತಿದ್ದರೂ, ಸಂಬಂಧಿತ ಎಲ್ಲಾ ಅಂಶಗಳನ್ನು ಜೋಡಿಸಿದರೆ, ಖಚಿತವಾಗಿಯೂ ಇದು ಒಂದು ಸಂಚಾಗಿತ್ತು, ಎಂಬುದು ಕಾಲಾಂತರದಲ್ಲಿ ಗಮನಕ್ಕೆ ಬಂದೇ ಬರಲಿದೆ.
ಚೀನಾದಲ್ಲಿ ನಡೆದ ಶೃಂಗಸಭೆಯ ನಂತರ ಪುತಿನ್ ಅವರು ಹೋಟೆಲ್‌ನಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊರಗೆ ಬರುವುದರ ದಾರಿಯನ್ನು ಕಾಯುತ್ತಿದ್ದರು. ಕೆಲವು ನಿಮಿಷ ದಾರಿಕಾದ ನಂತರ ಅವರಿಬ್ಬರೂ ಪುತಿನ್ ಅವರದೇ ಚತುಷ್ಚಕ್ರ ವಾಹನದಲ್ಲಿ ಕುಳಿತು ತಿರುಗಾಡುತ್ತಿರುವಾಗ ಮತ್ತು ಖಾಸಗಿ ಚರ್ಚೆ ಮಾಡುವಾಗ ಅನೇಕರು ನೋಡಿದರು. ಇದು ೪೫ ನಿಮಿಷಗಳ ಚರ್ಚೆಯಾಗಿತ್ತು. ಅದಕ್ಕೂ ಮೊದಲು ಬಾಂಗ್ಲಾದೇಶದ ‘ಸಿಐಎ’ ಅದರ ಸಹಾಯಕ ಪಾಕಿಸ್ತಾನದ ಗೂಢಚಾರ ಸಂಸ್ಥೆ ‘ಐ.ಎಸ್.ಐ.’ ಮತ್ತು ಬಾಂಗ್ಲಾದೇಶದ ಸೈನ್ಯದಲ್ಲಿರುವ ಕೆಲವು ಉನ್ನತಾಧಿಕಾರಿಗಳ ಒಂದು ದೊಡ್ಡ ಸಂಚು ತಯಾರಾಗುತ್ತಿತ್ತು. ನಿಜ ಹೇಳುವುದಾದರೆ, ಈ ಸಂಚಿನ ಯೋಜನೆಯು ಅದಕ್ಕೂ ಮೊದಲು ಕೆಲವು ತಿಂಗಳುಗಳಿಂದಲೇ ನಡೆಯುತ್ತಿರಬಹುದು; ಆದರೆ ಈ ಕಾರ್ಯಚಟುವಟಿಕೆಯ ಸುಳಿವು ರಷ್ಯಾ ಮತ್ತು ಭಾರತೀಯ ಗೂಢಚಾರ ಸಂಸ್ಥೆಗಳಿಗೆ ದೊರೆಯುತ್ತಲೇ, ಒಂದು ರಾತ್ರಿಯಲ್ಲಿ ಅಲ್ಲಿ ಬಂದ ಅಮೆರಿಕಾದ ಅಧಿಕಾರಿಯನ್ನು ಮುಗಿಸಲಾಯಿತು. ಕೌಟಿಲ್ಯ ನೀತಿ ಮತ್ತು ಅಂತರರಾಷ್ಟ್ರೀಯ ಧೋರಣೆಯ ದೃಷ್ಟಿಯಿಂದ ಇದು ಒಂದು ಅಸಾಧಾರಣ ಘಟನೆಯಾಗಿದೆ.
ರಷ್ಯಾದ ಕಾರ್ಯವೈಖರಿ !
ಈ ಘಟನೆಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾತನಾಡಲಿಲ್ಲ ಅಥವಾ ಅಮೆರಿಕಾ ಸರಕಾರವು ತನ್ನ ಉನ್ನತ ಅಧಿಕಾರಿಯೊಬ್ಬರು ಬಾಂಗ್ಲಾದೇಶದಲ್ಲಿ ಹೇಗೆ ಕೊಲ್ಲಲ್ಪಟ್ಟರು ಎಂಬುದರ ಕುರಿತು ಏನನ್ನೂ ಬಹಿರಂಗಪಡಿಸಲಿಲ್ಲ ! ಈ ಘಟನೆಯಿಂದ ಯಾರು ಏನು ಪಾಠ ಕಲಿಯಬೇಕಿತ್ತೋ ಅದನ್ನು ಅವರು ಪಡೆದಿದ್ದಾರೆ. ಹೀಗಿದ್ದರೂ, ಇದು ರಹಸ್ಯವಾಗಿ ನಡೆದ ಘಟನೆಯಾಗಿದೆ. ಇಂತಹ ಗುಪ್ತ ಕಾರ್ಯಾಚರಣೆಗಳು ಕಾಲಾವಧಿಯ ಅಂತರದಲ್ಲಿ ನಡೆಯುತ್ತಿರುತ್ತವೆ ಅಥವಾ ಗೂಢಚರರ ಕೆಲಸಗಳು ನಡೆಯುತ್ತಿರುತ್ತವೆ. ಹೀಗಿದ್ದರೂ, ಭಾರತದಂತಹ ಒಂದು ಮಹಾಕಾಯ ಮತ್ತು ದೊಡ್ಡ ದೇಶದ ರಾಷ್ಟ್ರ ಪ್ರಮುಖರ ಜೀವಕ್ಕೆ ಅಪಾಯವನ್ನುಂಟು ಮಾಡುವ ಪ್ರಯತ್ನವಾದಾಗ, ಅದೊಂದು ದೊಡ್ಡ ರಾಷ್ಟ್ರೀಯ ಸಂಕಟವೇ ಆಗಿರುತ್ತದೆ. ಅಂತಹ ಸಮಯದಲ್ಲಿ ಹಾನಿ ಉಂಟುಮಾಡಲು ಪ್ರಯತ್ನಿಸುವ ವ್ಯಕ್ತಿಯೊಂದಿಗೆ ಸಂಪೂರ್ಣ ವ್ಯವಸ್ಥೆಯನ್ನೇ ನಾಶ ಮಾಡುವುದು ಆವಶ್ಯಕವಾಗಿರುತ್ತದೆ. ಸೆಪ್ಟೆಂಬರ್ ೨ ರಂದು, ಚೀನಾದ ಟಿಯಾಂಜಿನ್‌ನಿಂದ ಹಿಂದಿರುಗಿದ ಮರುದಿನ, ಪ್ರಧಾನಿ ಮೋದಿ ನವದೆಹಲಿಯಲ್ಲಿ ನಡೆದ SEMICON ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ನಾನು ಚೀನಾಕ್ಕೆ ಹೋಗಿದ್ದಕ್ಕಾಗಿ ಅಥವಾ ನಾನು ಹಿಂತಿರುಗಿದ್ದಕ್ಕಾಗಿ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ? ಎಂದು ಗೂಡಾರ್ಥವಾಗಿ ಮಾತನಾಡಿದ್ದರು. ಇದೀಗ ಹತ್ಯೆಯ ಸಂಚು ಬಯಲಾಗಿದೆ. ಅವರ ಈ ಗೂಢಾರ್ಥದ ಹೇಳಿಕೆ, ಸ್ವತಃ ರಷ್ಯಾದ ರಾಷ್ಟ್ರಾಧ್ಯಕ್ಷ ಪುತಿನ್ ಅವರು ನರೇಂದ್ರ ಮೋದಿಯವರ ದಾರಿ ಕಾಯುವುದು, ಅವರೊಂದಿಗೆ ತಮ್ಮದೇ ಕಾರಿನಲ್ಲಿ ಮಾತು ಕತೆ ನಡೆಸುವುದು, ಇದು ಯಾವುದೇ ಸಾಮಾನ್ಯ ಘಟನಾ ವಳಿಯಲ್ಲ. ಇದರಿಂದ ಮತ್ತೆ ಒಂದು ಬಾರಿ ‘ರಷ್ಯಾವೇ ಭಾರತದ ನಿಜವಾದ ಸ್ನೇಹಿತ ಮತ್ತು ಅದು ಪ್ರಧಾನಮಂತ್ರಿ ಮೋದಿಯವರ ಪ್ರಾಣವನ್ನು ಉಳಿಸಿದೆ’, ಎಂದು ಹೇಳಬಹುದು.
ಶಾಸ್ತ್ರೀಜಿಯವರ ನಿಗೂಢ ನಿಧನ !

ಜನವರಿ ೧೯೬೬ ರಲ್ಲಿ ಭಾರತದ ಪ್ರಧಾನಮಂತ್ರಿ ಲಾಲ ಬಹಾದ್ದೂರ್ ಶಾಸ್ತ್ರಿಯವರ ನಿಧನವು ಅಂದಿನ ಸೋವಿಯತ್ ಒಕ್ಕೂಟದ ತಾಷ್ಕೆಂಟ್‌ನಲ್ಲಿ ಸಂಶಯಾಸ್ಪದವಾಗಿ ಆಯಿತು. ಮುಖ್ಯವಾಗಿ ಹೇಳುವುದಾದರೆ, ವರ್ಷ ೧೯೬೫ ರಲ್ಲಿ ಭಾರತ-ಪಾಕಿಸ್ತಾನದ ನಡುವೆ ಯುದ್ಧ ನಡೆಯಿತು, ಅದರಲ್ಲಿ ಅಂದಿನ ಸೋವಿಯತ್ ಒಕ್ಕೂಟವು ಮಧ್ಯಸ್ಥಿಕೆ ವಹಿಸಿ ಒಪ್ಪಂದವನ್ನು ಏರ್ಪಡಿಸಿತು. ಆ ಕುರಿತಾದ ಒಪ್ಪಂದವನ್ನು ತಾಷ್ಕೆಂಟ್‌ನಲ್ಲಿ ಮಾಡಲಾಗಿತ್ತು. ಈ ಒಪ್ಪಂದಕ್ಕೆ ಸಹಿ ಹಾಕಿದ ಕೆಲವು ನಿಮಿಷಗಳ ನಂತರ ಮಲಗಿದ್ದ ಶಾಸ್ತ್ರೀಜಿಯವರಿಗೆ ಅಸ್ವಸ್ಥವೆನಿಸಿತು ಮತ್ತು ಅವರು ನಿಧನರಾದರು. ಶಾಸ್ತ್ರೀಜಿಯವರ ನಿಧನದ ನಿಗೂಢತೆ ಇಂದಿಗೂ ಹಾಗೆಯೇ ಉಳಿದಿದೆ. ಆಗ ಕೇವಲ ಹೃದಯಾಘಾತವೇ ಅವರ ನಿಧನಕ್ಕೆ ಕಾರಣವೆಂದು ಹೇಳಲಾಗಿತ್ತು; ಆದರೆ, ಅವರ ಶರೀರವು ಕಪ್ಪುನೀಲಿಯಾಗುವುದು, ಅವರ ಕತ್ತಿನ ಮೇಲೆ ಕೆಲವು ಗಾಯಗಳು, ಇವುಗಳ ಯಾವುದೇ ಪರಿಶೀಲನೆ ಮತ್ತು ಮುಖ್ಯವಾಗಿ ಹೇಳುವುದಾದರೆ ಶವವಿಚ್ಛೇದನೆಯೇ ಆಗಿರಲಿಲ್ಲ. ಆದ್ದರಿಂದ ನಿಧನದ ನಿಜವಾದ ಕಾರಣವು ಎದುರಿಗೆ ಬರಲೇ ಇಲ್ಲ. ‘ಇಷ್ಟು ದೊಡ್ಡ ನಾಯಕರ ನಿಧನದ ಈ ಅಧ್ಯಾಯವನ್ನೇ ಮುಚ್ಚಿಹಾಕಲಾಯಿತು’, ಎಂದು ಹೇಳಬೇಕಾಗುತ್ತದೆ; ಏಕೆಂದರೆ, ಅದರ ನಂತರ ೧೫ ದಿನಗಳಲ್ಲಿಯೇ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿ ಹುದ್ದೆಯ ಪ್ರಮಾಣ ವಚನವನ್ನು ಸ್ವೀಕರಿಸಿದರು. ಅನಂತರದ ಕಾಲದಲ್ಲಿ ಅವರ ಮರಣದ ಸುಳಿಯು ಒಂದು ಬಾರಿ ಅಮೆರಿಕಾದ ಗೂಢಚಾರ ಸಂಸ್ಥೆಯ ಕಡೆಗೆ, ಮತ್ತೊಂದು ಬಾರಿ ರಷ್ಯಾದ ಗೂಢಚಾರ ಸಂಸ್ಥೆಯ ಕಡೆಗೆ ತಿರುಗುವಂತೆ ಮಾಡಲಾಯಿತು. ಈ ಸಂಚನ್ನು ಯಾರು ಮಾಡಿದ್ದರು ? ಅದರಲ್ಲಿ ಯಾರು ಭಾಗಿಯಾಗಿದ್ದರು ? ಈ ವಿಷಯದಲ್ಲಿ ಭಾರತೀಯರು ಅಂಧಕಾರದಲ್ಲಿ ಉಳಿದರು.
ಅಮೆರಿಕಾ ಸದಾ ಶತ್ರುವೇ !
ಅಮೆರಿಕವು ಯಾವಾಗಲೂ ಅವಿಶ್ವಾಸಾರ್ಹವಾಗಿಯೇ ಉಳಿದಿದೆ. ಅದು ತನ್ನ ಸ್ನೇಹಿತರಿಗೂ ಮೋಸ ಮಾಡುತ್ತದೆ. ಅಮೆರಿಕವು ಯಾವಾಗ, ಎಲ್ಲಿ ಮತ್ತು ಯಾವ ಸಂಚು ಮಾಡುತ್ತದೆ, ಎಂಬುದಕ್ಕೆ ಯಾವುದೇ ನಿಶ್ಚಿತತೆ ಇಲ್ಲ; ಏಕೆಂದರೆ ಅದು ಮಹಾಶಕ್ತಿಯಾಗಿದೆ ! ಮಹಾಶಕ್ತಿಯ ಯಾವುದೇ ಕೃತಿಯ ಕುರಿತು ಪ್ರಶ್ನಿಸುವ ಅವಕಾಶವೂ ಇಲ್ಲ, ಮಾತನಾಡುವ ಅವಕಾಶವೂ ಇಲ್ಲ ! ಅಮೆರಿಕಾದ ಹಿತಸಂಬಂಧಗಳಿಗೆ ಅಡ್ಡಿ ಮಾಡುವ ವ್ಯಕ್ತಿ ಮತ್ತು ದೇಶಗಳ ವಿರುದ್ಧ ಸಂಚು ಮಾಡಿ ಅವರನ್ನು ಮುಗಿಸುವುದರಿಂದ ಹಿಡಿದು ದೇಶದಲ್ಲಿ ಅಧಿಕಾರದ ಬದಲಾವಣೆ ಮಾಡಿ ತಮ್ಮ ಇಷ್ಟದ ಜನರನ್ನು ಅಧಿಕಾರದ ಸ್ಥಾನಕ್ಕೆ ತರುವವರೆಗೆ ಅದರ ಮಿತಿ ಹೋಗುತ್ತದೆ. ಸದ್ಯದ ಕಾಲದ ಅತ್ಯಂತ ಇತ್ತೀಚಿನ ಉದಾಹರಣೆಯಾಗಿ ಬಾಂಗ್ಲಾದೇಶದ ಹಸೀನಾ ಅವರ ಸರಕಾರವನ್ನು ಕೆಳಗಿಳಿಸಿ ಯೂನುಸ್ ಅವರು ಅಧಿಕಾರ ಪಡೆಯುವುದು. ಅಮೆರಿಕಾದ ಮಾಜಿ ರಾಷ್ಟ್ರಾಧ್ಯಕ್ಷ ಜಾನ್ ಎಫ್. ಕೆನಡಿಯವರನ್ನು ‘ಸೈಎ’ ಹತ್ಯೆ ಮಾಡಿದೆ. ‘ಸೈಎ’ಯ ೧೯೬೦ ರ ದಶಕದ ಒಬ್ಬ ಪ್ರಮುಖ ರಾಬರ್ಟ್ ಕ್ರೌಲಿ ಅವರು ಶಾಸ್ತ್ರೀಜಿ ಸಹಿತ ಭಾರತದ ಅಣು ಕಾರ್ಯಕ್ರಮದ ಪಿತಾಮಹ ಡಾ. ಹೋಮಿ ಭಾಭಾರವರ ನಿಧನದ ಕುರಿತಾದ ಸಂಚಿಗೂ ಸಮ್ಮತಿ ನೀಡಿದ್ದಾರೆ ಎಂದು ಆರೋಪವಿದೆ. ಅಂದರೆ ಅಮೆರಿಕವು ದೂರದೂರದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಹಿತಸಂಬಂಧಗಳಿಗೆ ಎಲ್ಲಿ ಅಡ್ಡಿ ಉಂಟಾಗುತ್ತದೆಯೋ ಮತ್ತು ಯಾರೇ ಎಷ್ಟೇ ಪ್ರತಿಭಾವಂತ ವ್ಯಕ್ತಿತ್ವ ಇರಲಿ, ಅವರನ್ನು ಮುಗಿಸದೇ ಬಿಡುವುದಿಲ್ಲ, ಎಂಬುದು ಗಮನಕ್ಕೆ ಬರುತ್ತದೆ. ‘ಇದು ಅಮೆರಿಕಾದ ವಿದೇಶಾಂಗನೀತಿಯ ಒಂದು ಭಾಗವಾಗಿದೆ’, ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿ ಎನಿಲ್ಲ. ತಮ್ಮ ಅತ್ಯುನ್ನತ ಸ್ಥಾನವನ್ನು ಅಬಾಧಿತವಾಗಿರಿಸಲು ದೇಶಗಳ ನಡುವೆ ಜಗಳಗಳನ್ನು ಹಚ್ಚುವುದು, ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ನೀಡಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಮುಕ್ತ ಅವಕಾಶ ನೀಡುವುದು, ಲಾಡೆನ್‌ನಂತಹ ಭಯೋತ್ಪಾದಕನಿಗೆ ಮೊದಲು ಬೆಂಬಲ ನೀಡಿ ಮತ್ತು ದೊಡ್ಡವನನ್ನಾಗಿ ಮಾಡಿ ರಷ್ಯಾದ ವಿರುದ್ಧ ಹೋರಾಡಿಸುವುದು ಹಾಗೆಯೇ ನಂತರ ಅವನು ದೊಡ್ಡವನಾದಾಗ ಅವನನ್ನು ಕೊಲ್ಲಿಸುವುದು, ಅಂತಹ ಯಾವುದೇ ಮಟ್ಟಕ್ಕೆ ಇಳಿಯುವ ಅಮೆರಿಕವು ಭಾರತದ ಮಿತ್ರನಾಗಲು ಎಂದಾದರೂ ಸಾಧ್ಯವೇ ? ಆದ್ದರಿಂದ ಭಾರತವು ಸಾತ್ತ್ವಿಕವಾಗಿ ಮತ್ತು ಹೆಚ್ಚೆಚ್ಚು ಜಾಗರೂಕ ಇರುವುದು ಹಿತಕರ !
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
ಟೆಕ್ಸಾಸ್ (ಅಮೆರಿಕ) ನಲ್ಲಿ ಭಾರತದ ರಾಷ್ಟ್ರಧ್ವಜ ಹರಿದ ಅಮೆರಿಕನ್ ಯುವಕ
ಲೆಬನಾನ್: ಹಿಜ್ಬುಲ್ಲಾ ಮೇಲೆ ಇಸ್ರೇಲ್ ದಾಳಿ; ಟ್ರಂಪ್-ನೆತನ್ಯಾಹು ನಡುವೆ ವಾಗ್ವಾದ!
ಇರಾನ್: ಅಧ್ಯಕ್ಷರ ರಾಜೀನಾಮೆ; ವದಂತಿ ನಿರಾಕರಣೆ
ಭಾರತದಿಂದ ವಿಶ್ವದ 100 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ರಫ್ತು ! : India’s Defence Exports
ಯಾವುದೇ ಪರಿಸ್ಥಿತಿಯಲ್ಲೂ ಇರಾನ್ಗೆ ಅಣುಬಾಂಬ್ ತಯಾರಿಸಲು ಬಿಡುವುದಿಲ್ಲ! – ಡೊನಾಲ್ಡ್ ಟ್ರಂಪ್