ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ಅವರ ಆಗ್ರಹ

ಬಿಜ್ನೋರ್ (ಉತ್ತರ ಪ್ರದೇಶ) – ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ನಿರಂತರವಾಗಿ ಗುರಿ ಮಾಡಲಾಗುತ್ತಿದೆ. ಹೇಗೆ ಅಮೆರಿಕವು ವೆನೆಜುವೆಲಾದ ಅಧ್ಯಕ್ಷರನ್ನು ಎತ್ತಿಕೊಂಡು ತರುವ ಕಾರ್ಯಾಚರಣೆ ಮಾಡಿತೋ, ಅದೇ ರೀತಿ ಭಾರತವು ಸಹ ಸೈನ್ಯವನ್ನು ಕಳುಹಿಸಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಮಹಮ್ಮದ್ ಯೂನುಸ್ ಅವರನ್ನು ಹಿಡಿದು ತರಬೇಕು, ಎಂದು ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ ಡಾ. ಪ್ರವೀಣ್ ತೊಗಾಡಿಯಾ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಹಿಂದೂಗಳ ರಕ್ಷಣೆಗಾಗಿ ದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು!
ಡಾ. ತೊಗಾಡಿಯಾ ಅವರು ಮಾತು ಮುಂದುವರೆಸಿ, ೧೯೭೧ ರಲ್ಲಿ ಭಾರತದ ಸೇನೆಯು ಬಾಂಗ್ಲಾದೇಶದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಅಗತ್ಯ ಬಿದ್ದರೆ, ಮತ್ತೊಮ್ಮೆ ಹಿಂದೂಗಳ ರಕ್ಷಣೆಗಾಗಿ ದೃಢ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೇಶದಲ್ಲಿ ಹಿಂದೂಗಳು ಸುರಕ್ಷಿತವಾಗಿರಲು ಅವರು ಬಹುಸಂಖ್ಯಾತರಾಗಿರುವುದು ಅವಶ್ಯಕವಾಗಿದೆ.
ಜನಸಂಖ್ಯಾ ನಿಯಂತ್ರಣ ಕಾನೂನಿಗೆ ಬೇಡಿಕೆ!
ಉತ್ತರ ಪ್ರದೇಶದ ಬಿಜ್ನೋರ್, ರಾಂಪುರ ಮತ್ತು ಸಹಾರನ್‌ಪುರ ಜಿಲ್ಲೆಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಹಿಂದೂಗಳು ಸುರಕ್ಷಿತವಾಗಿರಬೇಕು, ಇದಕ್ಕಾಗಿ ಕಠಿಣ ಕಾನೂನು ಅವಶ್ಯಕವಾಗಿದೆ. ಮೂರಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬಗಳಿಗೆ ಸರಕಾರಿ ಶಾಲೆಗಳಲ್ಲಿ ಪ್ರವೇಶ, ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಸರಕಾರಿ ಉದ್ಯೋಗ, ಆಹಾರ ಧಾನ್ಯಗಳು ಮತ್ತು ಇತರ ಸರಕಾರಿ ಸೌಲಭ್ಯಗಳನ್ನು ನಿರಾಕರಿಸಬೇಕು. ಅಂತಹ ವ್ಯಕ್ತಿಗಳ ಮತದಾನದ ಹಕ್ಕುಗಳನ್ನು ಸಹ ಕಿತ್ತುಕೊಳ್ಳಬೇಕು, ಹೀಗೆ ಬೇಡಿಕೆಯನ್ನು ಡಾ. ತೊಗಾಡಿಯಾ ಅವರು ಮಾಡಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು