
ಢಾಕಾ (ಬಾಂಗ್ಲಾದೇಶ) – ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶ ಮೈನಾರಿಟೀಸ್’ (‘ಬಾಂಗ್ಲಾದೇಶ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಕಾಂಗ್ರೆಸ್’) ಇತ್ತೀಚೆಗೆ ಪ್ರಕಟಿಸಿದ ವರದಿಯ ಪ್ರಕಾರ, ಜೂನ್ ೬, ೨೦೨೫ ರಿಂದ ಜನವರಿ ೫, ೨೦೨೬ ರ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಒಟ್ಟು ೧೧೬ ಅಲ್ಪಸಂಖ್ಯಾತರನ್ನು ಹತ್ಯೆ ಮಾಡಲಾಗಿದೆ. ಮೃತರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿದ್ದು, ಕೆಲವು ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮದವರೂ ಸೇರಿದ್ದಾರೆ.
ಈ ವರದಿಯ ಅನ್ವಯ, ಈ ಹತ್ಯೆಗಳು ಬಾಂಗ್ಲಾದೇಶದ ಎಲ್ಲಾ ೮ ವಿಭಾಗಗಳಲ್ಲಿ ಮತ್ತು ಕನಿಷ್ಠ ೪೫ ಜಿಲ್ಲೆಗಳಲ್ಲಿ ನಡೆದಿವೆ. ಈ ೧೧೬ ಪ್ರಕರಣಗಳಲ್ಲಿ ೧೨ ಪ್ರಕರಣಗಳು ಗುಂಪು ಹಿಂಸಾಚಾರದಿಂದ ನಡೆದ ಹತ್ಯೆಗಳಾಗಿವೆ. ಇನ್ನುಳಿದವುಗಳಲ್ಲಿ ನಿರ್ದಿಷ್ಟವಾಗಿ ಗುರಿಯಾಗಿಸಿ ಮಾಡಿದ ಹತ್ಯೆಗಳು, ಪೊಲೀಸ್ ವಶದಲ್ಲಿ ಅಥವಾ ಸಂಶಯಾಸ್ಪದ ಸ್ಥಿತಿಯಲ್ಲಿ ಸಂಭವಿಸಿದ ಸಾವುಗಳು ಮತ್ತು ಧರ್ಮನಿಂದನೆಯ ಸುಳ್ಳು ಆರೋಪಗಳನ್ನು ಹೊರಿಸಿ ಮಾಡಿದ ಕೊಲೆಗಳೂ ಸೇರಿವೆ.
ಯೂನುಸ್ ಸರಕಾರದ ನಿರ್ಲಕ್ಷ್ಯ ಬಹಿರಂಗ
ಬಾಂಗ್ಲಾದೇಶದ ಸರಕಾರ, ಪೊಲೀಸ್ ಮತ್ತು ಆಡಳಿತ ವರ್ಗವು ಈ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅನೇಕ ಪ್ರಕರಣಗಳಲ್ಲಿ ದೂರುಗಳನ್ನು ದಾಖಲಿಸಿಕೊಳ್ಳಲು ವಿಳಂಬ ಮಾಡಲಾಗುತ್ತಿದೆ ಅಥವಾ ದೂರುಗಳನ್ನೇ ದಾಖಲಿಸಿಕೊಳ್ಳುತ್ತಿಲ್ಲ. ತನಿಖೆಯು ಕೇವಲ ಮೇಲ್ನೋಟಕ್ಕೆ ನಡೆಯುತ್ತಿದ್ದು, ಸಂತ್ರಸ್ತ ಕುಟುಂಬಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಆರೋಪಿಗಳ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಅಪರಾಧಿಗಳ ಧೈರ್ಯ ಹೆಚ್ಚಾಗುತ್ತಿದ್ದು, ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕುಸಿಯುತ್ತಿದೆ.
ಈ ಹಿಂಸಾಚಾರವು ಹೀಗೆಯೇ ಮುಂದುವರಿದರೆ ಬಾಂಗ್ಲಾದೇಶದ ಸ್ಥಿರತೆ ಮತ್ತು ಸಾಮಾಜಿಕ ಏಕತೆಗೆ ದೊಡ್ಡ ಅಪಾಯ ಉಂಟಾಗಬಹುದೆಂದು ವರದಿಯು ಎಚ್ಚರಿಸಿದೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲೂ ಕಳವಳ ವ್ಯಕ್ತವಾಗುತ್ತಿದ್ದು, ಅಲ್ಪಸಂಖ್ಯಾತರ ಸುರಕ್ಷತೆಗಾಗಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಕೂಗು ಕೇಳಿ ಬರುತ್ತಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !