ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಶಿರಡಿಯಲ್ಲಿ ಪ್ರತಿಭಟನಾ ಸಭೆ!

ಶಿರಡಿ, ಡಿಸೆಂಬರ್ 30 (ಸುದ್ದಿ) – ಇಂದು ಬಾಂಗ್ಲಾದೇಶದಲ್ಲಿ ಬಡ ಮತ್ತು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಮತಾಂಧರು ದೀಪು ದಾಸ್ ಎಂಬ ಹಿಂದೂವಿಗೆ ಭೀಕರ ಯಾತನೆ ನೀಡಿ ಕೊಂದಿದ್ದಾರೆ. ದೇಶ ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಎಷ್ಟಿತ್ತು ಮತ್ತು ಇಂದು ಎಷ್ಟಿದೆ? ಇದಕ್ಕೆ ವಿರುದ್ಧವಾಗಿ ವಿಭಜನೆಯ ಸಮಯದಲ್ಲಿ ಭಾರತದಲ್ಲಿ ಮುಸಲ್ಮಾನರ ಸಂಖ್ಯೆ ಅಲ್ಪವಿತ್ತು, ಅದು ಈಗ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ಇದು ಹೇಗೆ ಸಾಧ್ಯವಾಯಿತು? ಇಂದು ಇಡೀ ವಿಶ್ವವೇ ಇಸ್ಲಾಮಿಕ್ ಭಯೋತ್ಪಾದನೆಯಿಂದ ಅಶಾಂತವಾಗಿದೆ. ಇಂಗ್ಲೆಂಡ್, ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಇಂದು ಇಸ್ಲಾಮಿಕ್ ಭಯೋತ್ಪಾದನೆಯನ್ನು ಎದುರಿಸುತ್ತಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಸ್ಲಾಮಿಕ್ ಭಯೋತ್ಪಾದನೆಯನ್ನು ತಡೆಯಲು ಹಿಂದೂ ಸಮಾಜವು ಒಗ್ಗೂಡಲೇಬೇಕು ಎಂದು ಪ.ಪೂ. ರಾಮಗಿರಿ ಮಹಾರಾಜರು ಕರೆ ನೀಡಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ ಶಿರಡಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
೧. ಭಾರತದಲ್ಲಿನ ಮುಸಲ್ಮಾನರು ಗಾಜಾ ಮತ್ತು ಪ್ಯಾಲೆಸ್ತೀನ್‌ನಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯವಾದಾಗ ಪ್ರತಿಭಟನೆ ನಡೆಸುತ್ತಾರೆ, ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯವಾಗುತ್ತಿರುವಾಗ ಅವರೇಕೆ ಮೌನವಾಗಿದ್ದಾರೆ?
೨. ಗಣೇಶೋತ್ಸವ ಇರಲಿ ಅಥವಾ ನವರಾತ್ರಿ ಇರಲಿ, ಅನೇಕ ಕಡೆಗಳಲ್ಲಿ ಮತಾಂಧರಿಂದ ಕಲ್ಲು ತೂರಾಟ ನಡೆಯುತ್ತದೆ. ಎಲ್ಲಿ ಮತಾಂಧರ ಸಂಖ್ಯೆ ಹೆಚ್ಚಾಗಿದೆಯೋ, ಅಲ್ಲಿ ತೊಂದರೆಗಳು ಸೃಷ್ಟಿಯಾಗುತ್ತಿವೆ ಎಂದೇ ಹೇಳಬೇಕಾಗುತ್ತದೆ. ‘ಮುಸಲ್ಮಾನರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತಿದೆ’ ಎಂದು ಅವರು ಕೂಗಾಡುತ್ತಾರೆ. ಹಾಗಿರುವಾಗ, ನಿಜವಾದ ರಾಷ್ಟ್ರವಾದಿ ಮುಸಲ್ಮಾನರು ಭಯೋತ್ಪಾದಕ ಮುಸಲ್ಮಾನರನ್ನು ಏಕೆ ಬಹಿರಂಗವಾಗಿ ವಿರೋಧಿಸುವುದಿಲ್ಲ? ಅವರನ್ನು ಏಕೆ ಖಂಡಿಸುವುದಿಲ್ಲ?
ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗ ಅವರ ಬಾಲ್ಯದಿಂದಲೇ ಅವರ ಹಿನ್ನೆಲೆಯನ್ನು ನೋಡಿ ಆಯ್ಕೆ ಮಾಡಬೇಕು! – ಪ.ಪೂ. ರಾಮಗಿರಿ ಮಹಾರಾಜರ
ತಾಜಮಹಲನ ಮೆರುಗು ಕಡಿಮೆಯಾಗಬಾರದು ಎಂದು ಅದಕ್ಕೆ ಮುಲ್ತಾನಿ ಮಣ್ಣು ಹಚ್ಚಿ ದುರಸ್ತಿ ಮಾಡಲಾಗುತ್ತದೆ. ಸಂಭಾಜಿನಗರದಲ್ಲಿರುವ ಔರಂಗಜೇಬನ ಗೋರಿಯನ್ನು ಸರಕಾರವು ರಕ್ಷಿಸುತ್ತಿದೆ, ಅದಕ್ಕಾಗಿ ಸರಕಾರವು ನಿಧಿಯನ್ನು ನೀಡುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನ ಮಂದಿರದಲ್ಲಿ ವಿಷ್ಣುವಿನ ಮೂರ್ತಿ ಹಾಳಾದಾಗ ಸಲ್ಲಿಸಲಾದ ಅರ್ಜಿಯ ಮೇಲೆ, ಅದರ ದುರಸ್ತಿ ಬಗ್ಗೆ ಮಾತನಾಡದೆ ‘ನಿನ್ನ ವಿಷ್ಣುವಿಗೇ ಹೇಳು’ ಎಂದು ನ್ಯಾಯಾಧೀಶರು ಹೇಳುತ್ತಾರೆ. ನ್ಯಾಯವಾದಿಗಳಾದ ವಿಷ್ಣು ಶಂಕರ ಜೈನ್ ಅವರು ವಕ್ಫ್ ಕಾಯ್ದೆಯ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಹೋದಾಗ, ಅವರಿಗೆ ಮೊದಲು ಉಚ್ಚ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಲಾಗುತ್ತದೆ. ಇನ್ನೊಂದೆಡೆ ಮತಾಂಧರು ಯಾವಾಗ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತಾರೋ, ಅಂದು ಅವರ ವಿಚಾರಣೆ ತಕ್ಷಣವೇ ನಡೆಯುತ್ತದೆ. ಮತಾಂಧರಿಗೊಂದು ನ್ಯಾಯ ಮತ್ತು ಹಿಂದೂಗಳಿಗೊಂದು ನ್ಯಾಯ ಏಕೆ? ನ್ಯಾಯಾಂಗ ಕ್ಷೇತ್ರದಲ್ಲಿ ಇಂದು ಭ್ರಷ್ಟಾಚಾರ ನಡೆಯುತ್ತಿದೆ, ಸಂವಿಧಾನದ ಉಲ್ಲಂಘನೆಯಾಗುತ್ತಿದೆ. ಆದ್ದರಿಂದ ನ್ಯಾಯಾಧೀಶರನ್ನು ಆಯ್ಕೆ ಮಾಡುವಾಗ ಅವರ ಹಿನ್ನೆಲೆಯನ್ನು ಸರಿಯಾಗಿ ನೋಡಿ ಆಯ್ಕೆ ಮಾಡಬೇಕು. |
೩. ಭಾರತದಲ್ಲಿನ ಕೆಲವು ಮತಾಂಧರು ಬಾಂಗ್ಲಾದೇಶಿಗಳಿಗೆ ಮತ್ತು ರೋಹಿಂಗ್ಯಾಗಳಿಗೆ ಹೆಣ್ಣು ಮಕ್ಕಳನ್ನು ನೀಡಿದ್ದಾರೆ, ವಿವಾಹ ಮಾಡಿಕೊಟ್ಟಿದ್ದಾರೆ. ಇಂತಹವರ ವಿರುದ್ಧ ಮತ್ತು ದೇಶದಾದ್ಯಂತ ವಾಸಿಸುತ್ತಿರುವ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾಗಳನ್ನು ಭಾರತ ಸರಕಾರವು ಪತ್ತೆಹಚ್ಚಿ ದೇಶದಿಂದ ಹೊರಹಾಕಬೇಕು. ಮದರಸಾಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂಬುದನ್ನು ಸರಕಾರವು ಪರಿಶೀಲಿಸಬೇಕು. ಸಣ್ಣ ಮಕ್ಕಳ ಮನಸ್ಸಿನಲ್ಲಿ ಮತಾಂಧತೆಯನ್ನು ತುಂಬಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಿ ಸರಕಾರವು ಸೂಕ್ತ ಕ್ರಮ ಕೈಗೊಳ್ಳಬೇಕು.
೪. ಸನಾತನ ಧರ್ಮ ‘ಯಾರ ಮೇಲೂ ಅನ್ಯಾಯ ಮಾಡಬೇಡಿ’ ಎಂದು ಕಲಿಸುತ್ತದೆ; ಆದರೆ ಯಾರಾದರೂ ಅನ್ಯಾಯ ಮಾಡುತ್ತಿದ್ದರೆ ಅದನ್ನು ಸಹಿಸಬೇಡಿ ಎಂದೂ ಧರ್ಮವೇ ಕಲಿಸುತ್ತದೆ. ಆದರೆ ನಮಗೆ ಶಾಲಾ ಶಿಕ್ಷಣದಲ್ಲಿ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸಿ ಎಂಬ ತಪ್ಪು ಶಿಕ್ಷಣವನ್ನು ನೀಡಲಾಗಿದೆ.

‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !