ಕೇಂದ್ರ ಸರಕಾರ ಕುತುಬ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಕಾಂಗ್ರೆಸ್ ನಾಯಕ ಪ್ರಮೋದ್ ಕೃಷ್ಣನ ಬೇಡಿಕೆ

ಕುತುಬ ಮಿನಾರ್ ಮತ್ತು ತಾಜಮಹಲ ಸಧ್ಯಕ್ಕೆ ಭಾರತ ಸರಕಾರದ ಅಧೀನದಲ್ಲಿವೆ. ಆದ್ದರಿಂದ ಸರಕಾರ ಕುತುಬ್ ಮಿನಾರ್ ಮತ್ತು ತಾಜಮಹಲ್ ಇವುಗಳನ್ನು ಹಿಂದೂಗಳ ನಿಯಂತ್ರಣಕ್ಕೆ ನೀಡಬೇಕು ಎಂಬ ಬೇಡಿಕೆ ಕಾಂಗ್ರೆಸ್ಸಿನ ನಾಯಕ ಪ್ರಮೋದ ಕೃಷ್ಣನ್ ಇವರು ಇಟ್ಟಿದ್ದಾರೆ.

ಕೇರಳದಲ್ಲಿ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ೨೫ ಜನರಿಗೆ ಜೀವಾವಧಿ ಶಿಕ್ಷೆ

ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ಮೇ ೧೬ ರಂದು ಸತ್ರ ನ್ಯಾಯಾಲಯ ಇಂಡಿಯನ ಯೂನಿಯನ್ ಮುಸ್ಲಿಂ ಲೀಗ ನ(ಐಯುಎಂಎಲ್) ನ ೨೫ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದು ಮಸೀದಿಗಾಗಿ ದೇಣಿಗೆ ಪಡೆಯುವುದರ ಮೇಲೆ ನಡೆದಿರುವ ವಾದ-ವಿವಾದದ ನಂತರ ಇಬ್ಬರ ಹತ್ಯೆ ಮಾಡಲಾಗಿತ್ತು.

ಮೊದಲನೇ ದಿನ ಜ್ಞಾನವಾಪಿ ಮಸೀದಿಯ ಶೇ. ೪೦ರಷ್ಟು ಸಮೀಕ್ಷೆ ಪೂರ್ಣ !

ಇಲ್ಲಿನ ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ಮೇ ೧೪ರಂದು ಬೆಳಿಗ್ಗೆ ೮ ರಿಂದ ಮದ್ಯಾಹ್ನ ೧೨ರ ವರೆಗೆ ನಡೆಸಲಾಯಿತು. ಈ ಸಮೀಕ್ಷೆಯು ಶೇ. ೪೦ರಷ್ಟು ಪೂರ್ಣವಾಗಿದೆ. ಉಳಿದ ಸಮೀಕ್ಷೆಯು ಮೇ ೧೫ರಂದು ಪುನಃ ನಡೆಯಲಿದೆ. ಈ ಸಮೀಕ್ಷೆಯ ವರದಿಯನ್ನು ಮೇ ೧೭ರಂದು ನ್ಯಾಯಾಲಯದಲ್ಲಿ ಸಾದರಪಡಿಸಬೇಕಿದೆ.

ಮಥುರಾದಲ್ಲಿನ ಶಾಹಿ ಈದಗಾಹ ಮಸೀದಿಯ ಸಮೀಕ್ಷೆಗಾಗಿ ಮನವಿಯನ್ನು ಮಾಡುವ ಅರ್ಜಿಯನ್ನು ನ್ಯಾಯಾಲಯವು ಸ್ವೀಕರಿಸಿದೆ !

ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ನಂತರ ಮಥುರಾದಲ್ಲಿನ ಶ್ರೀಕೃಷ್ಣಜನ್ಮಭೂಮಿಯಲ್ಲಿರುವ ಶಾಹಿ ಈದಗಾಹ ಮಸೀದಿಯ ಸಮೀಕ್ಷೆ ಹಾಗೂ ಚಿತ್ರೀಕರಣ ಮಾಡಲು ಮನವಿ ಮಾಡುವ ಅರ್ಜಿಯನ್ನು ಇಲ್ಲಿನ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.

ಮುಸಲ್ಮಾನ ಯುವತಿಯನ್ನು ಪ್ರೀತಿಸಿದ ಹಿಂದು ಯುವಕನನ್ನು ಆಕೆಯ ಸಹೋದರನಿಂದ ಹತ್ಯೆ

ಮುಸಲ್ಮಾನ ಯುವತಿಯನ್ನು ಹಿಂದು ಯುವಕನು ಪ್ರೀತಿಸಿದ್ದರಿಂದ ಅವಳ ಸಹೋದರನು ಆ ಯುವಕನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತ ಪಟ್ಟ ಯುವಕನ ಹೆಸರು ಮಿಥುನ ಠಾಕೂರ (ವಯಸ್ಸು ೨೨) ಆಗಿದೆ. ಅವನು ಸುಮೈಯಾ ಕಾದಿಯನ್ನು ಪ್ರೀತಿಸುತ್ತಿದ್ದನು.

ಕರ್ನಾಟಕದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿದ್ದರಿಂದ ಪಾಕಿಸ್ತಾನಕ್ಕೆ ಹೊಟ್ಟೆಯುರಿ !

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ಅಜಾನ ಸಮಯದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಿರುವ ಬಗ್ಗೆ ಕಿಡಿಕಾರಿದೆ. ವಿದೇಶಾಂಗ ಸಚಿವಾಲಯದಿಂದ ಪ್ರಸಾರ ಮಾಡಲಾಗಿರುವ ಪತ್ರಿಕೆಯಲ್ಲಿ, ಈ ಘಟನೆ ಶ್ರೀರಾಮ ಸೇನೆಯ ಪ್ರಮುಖರು ಆಜಾನ್‌ನ ವಿರುದ್ಧ ಮಾಡಿರುವ ಹೇಳಿಕೆಯಿಂದ ನಡೆಯುತ್ತಿದೆ.

ತಾಜಮಹಲ ಭೂಮಿ ನಮ್ಮ ಮನತನದ ಪೂರ್ವಜರಿಗೆ ಸೇರಿದ್ದು !

ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ.

ಜ್ಞಾನವಾಪಿ ಮಸೀದಿಯ ಸಮೀಕ್ಷೆಯ ಪ್ರಕರಣದಲ್ಲಿ ಯುಕ್ತಿವಾದ ಮುಗಿದಿದೆ : ಇಂದು ತೀರ್ಪು!

ಇಲ್ಲಿನ ಜ್ಞಾನವಾಪಿ ಮಸೀದಿ ಮತ್ತು ಶೃಂಗಾರ ಗೌರಿ ದೇವಿ ದೇವಸ್ಥಾನಗಳ ಸಮೀಕ್ಷೆಯ ಸಂದರ್ಭದಲ್ಲಿ ದಿವಾನಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಯುಕ್ತಿವಾದವು ಪೂರ್ಣವಾಗಿದ್ದು, ಅದರ ಮೇಲೆ ಮೇ ೧೨ ರಂದು ಮಧ್ಯಾಹ್ನ ೧೨ ಗಂಟೆಗೆ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು.

ಮದುರೈಯ ಪಟ್ಟಿನಪ್ರವೇಶಂ ಪಲಕ್ಕಿ ಯಾತ್ರೆಗೆ ಅನುಮತಿ !

ತಮಿಳುನಾಡಿನ ಮದುರೈಯ ಧರ್ಮಪುರಂ ಅಧೀನಮ್ ಪಟ್ಟಿನಪ್ರವೇಶಂ ಎಂಬ ಪಲಕ್ಕಿ ಯಾತ್ರೆಗೆ ಅನುಮತಿ ನಿರಾಕರಿಸುವ ಆದೇಶವನ್ನು ತಮಿಳುನಾಡಿನ ದ್ರಮುಕ (ದ್ರಾವಿಡ ಮುನ್ನೇತ್ರ ಕಳಗಂ) ಸರಕಾರ ಹಿಂಪಡೆದಿದೆ. ಇದಕ್ಕೂ ಮೊದಲು ಮಹಿಲಾದೂಥರಾಯಿ ಕಂದಾಯ ಇಲಾಖೆ ಅಧಿಕಾರಿ ಜೆ ಬಾಲಾಜಿ ಇವರು ಅನುಮತಿಯನ್ನು ನಿರಾಕರಿಸಿದ್ದರು.

ಜ್ಞಾನವಾಪಿ ಮಸೀದಿಯನ್ನು ಹಿಂದೂಗಳಿಗೆ ಒಪ್ಪಿಸಬೇಕು ! – ಸೊಹೆಲದೇವ ಪಕ್ಷದಿಂದ ಮುಸಲ್ಮಾನರಿಗೆ ಕರೆ

ಹಿಂದೂಗಳ ಶ್ರದ್ಧೆಯನ್ನು ಗೌರವಿಸಿ ಶೃಂಗಾರಗೌರಿ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿಯನ್ನು ಮುಸಲ್ಮಾನರು ಹಿಂದೂಗಳಿಗೆ ಒಪ್ಪಿಸಬೇಕು. ಮುಸಲ್ಮಾನರಿಗಾಗಿ ವಾರಣಾಸಿಯಲ್ಲಿ ಅಸಂಖ್ಯ ಮಸೀದಿಗಳಿವೆ. ಜ್ಞಾನವಾಪಿ ಮಸೀದಿಯ ಬದಲಿಗೆ ಮುಸಲ್ಮಾನರಿಗೆ ಉತ್ತರಪ್ರದೇಶ ಸರಕಾರವು ಬೇರೆ ಜಾಗ ನೀಡಬೇಕು.