ತಾಜಮಹಲ ಭೂಮಿ ನಮ್ಮ ಮನತನದ ಪೂರ್ವಜರಿಗೆ ಸೇರಿದ್ದು !

ಜೈಪುರದ ರಾಜಕುಮಾರಿಯ ದಾವೆ !

ಜೈಪುರ (ರಾಜಸ್ಥಾನ) – ಭಾಜಪದ ನಾಯಕಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲ ಮತ್ತು ಜೈಪುರ ನಡುವಿನ ಸಂಬಂಧದ ಬಗ್ಗೆ ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅವರು, ತಾಜಮಹಲ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು ಎಂದಿದ್ದಾರೆ. ಈ ಭೂಮಿ ನಮ್ಮ ಪರಂಪರೆಯಾಗಿದೆ. ಆ ಜಮೀನಿಗೆ ಸಂಬಂಧಿಸಿದ ದಾಖಲೆಗಳು ನಮ್ಮ ಕುಟುಂಬದ ಬಳಿ ಇವೆ. ತಾಜಮಹಲದ ಭೂಮಿ ನಮ್ಮದಾಗಿತ್ತು; ಆದರೆ ಆಗ ರಾಜ್ಯವು ಮೊಘಲರ ಕೈಯಲ್ಲಿತ್ತು. ನಮ್ಮ ಭೂಮಿಯನ್ನು ಕಿತ್ತುಕೊಂಡು ತಾಜಮಹಲ ಕಟ್ಟಿದರು.

ಆಗ ಮೊಘಲರು ನಮ್ಮ ಭೂಮಿಯನ್ನು ಇಷ್ಟಪಟ್ಟಿರಬಹುದು.’ ಈ ಸಮಯದಲ್ಲಿ ರಾಜಕುಮಾರಿ ದಿಯಾ ಸಿಂಹ ಇವರು ತಾಜಮಹಲನಲ್ಲಿರುವ ಆ ೨೨ ಕೊಠಡಿಗಳನ್ನು ತೆರೆಯುವಂತೆ ಒತ್ತಾಯಿಸಿದರು.