ಕೇರಳದಲ್ಲಿ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ೨೫ ಜನರಿಗೆ ಜೀವಾವಧಿ ಶಿಕ್ಷೆ

ಮಸೀದಿಗಾಗಿ ದೇಣಿಗೆ ಪಡೆಯುವುದರ ಕಾರಣದಿಂದ ನಡೆದಿರುವ ವಾದ

ಪಾಲಕ್ಕಾಡ (ಕೇರಳ) : ಕೇರಳದ ಪಾಲಕ್ಕಾಡ ಜಿಲ್ಲೆಯಲ್ಲಿ ನಡೆದಿರುವ ಇಬ್ಬರು ಸಹೋದರರ ಹತ್ಯೆಯ ಪ್ರಕರಣದಲ್ಲಿ ಮೇ ೧೬ ರಂದು ಸತ್ರ ನ್ಯಾಯಾಲಯ ಇಂಡಿಯನ ಯೂನಿಯನ್ ಮುಸ್ಲಿಂ ಲೀಗ ನ(ಐಯುಎಂಎಲ್) ನ ೨೫ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಒಂದು ಮಸೀದಿಗಾಗಿ ದೇಣಿಗೆ ಪಡೆಯುವುದರ ಮೇಲೆ ನಡೆದಿರುವ ವಾದ-ವಿವಾದದ ನಂತರ ಇಬ್ಬರ ಹತ್ಯೆ ಮಾಡಲಾಗಿತ್ತು.

ವಿಶೇಷ ಸರಕಾರಿ ನ್ಯಾಯವಾದಿ ಕೃಷ್ಣನ್ ನಾರಾಯಣ ಇವರ ನೀಡಿರುವ ಮಾಹಿತಿಯ ಪ್ರಕಾರ ಎಡಪಂಥೀಯ ಸಮರ್ಥಕ ಪಕ್ಷವಾಗಿರುವ ಎಪಿ ಸುನ್ನಿಯ ಸದಸ್ಯರಾದ ನೂರುದ್ದೀನ್ ಮತ್ತು ಹಾಮಜಾ ಎಂಬ ಸಹೋದರರ ಹತ್ಯೆಗಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಜಿತ ಟಿ. ಹೆಚ್. ಇವರು ಮೇ ೧೨ ರಂದು ೨೫ ಜನರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ನ್ಯಾಯಾಲಯದಿಂದ ಅಪರಾಧಿಗಳಿಗೆ ಶಿಕ್ಷೆ ಜಾರಿ ಮಾಡಿ ದಂಡದ ಒಟ್ಟು ಮೊತ್ತ ಮೃತರ ಕುಟುಂಬಕ್ಕೆ ನೀಡಲಾಗುವುದು.

ಮೃತರ ಸಹೋದರ ಕುಂಜು ಮಹಮ್ಮದ್ ಇವನ ಮೇಲೆಯೂ ದಾಳಿ ಮಾಡಲಾಗಿತ್ತು. ಆದರೆ ಅವನು ಅದರಿಂದ ಪಾರಾಗಿದ್ದ. ಅವನೇ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ. ಈ ಪ್ರಕರಣದಲ್ಲಿ ಪೊಲೀಸರು ದಾಳಿಕೋರರಿಗೆ ಹತ್ಯೆಯ ಪ್ರಯತ್ನ ನಡೆಸಿರುವ ಆರೋಪದಡಿಯಲ್ಲಿ ತಪ್ಪಿತಸ್ಥರೆಂದು ಪ್ರತಿಯೊಬ್ಬರಿಗೆ ೩ ವರ್ಷದ ಜೈಲುವಾಸದ ಶಿಕ್ಷೆಯನ್ನೂ ನೀಡಿದ್ದಾರೆ ಎಂದು ಕೃಷ್ಣನ್ ಇವರು ಹೇಳಿದರು.