ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದ ಆಂಧ್ರಪ್ರದೇಶ ಸರಕಾರ!

ರಶಿಯಾ, ಜರ್ಮನಿ, ಫ್ರಾನ್ಸ್, ಜಪಾನ ಇತ್ಯಾದಿ ಅಭಿವೃದ್ಧಿಹೊಂದಿದ ದೇಶಗಳು ಹಾಗೂ ಚೀನಾ ಕೂಡ ಮಾತೃಭಾಷೆಯಿಂದಲೇ ಪ್ರಗತಿ ಸಾಧಿಸಿರುವಾಗ ಭಾರತಿಯರಿಗೆ ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರವೂ ಆಂಗ್ಲ ಭಾಷೆಯ ಗುಲಾಮರಾಗಬೇಕಾಗುತ್ತಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

ಕಾಶಿ ಹಿಂದೂ ವಿಶ್ವವಿದ್ಯಾಲಯದ ಅಲೋಪತಿಯ ವೈದ್ಯರಿಗೆ ಆಯುರ್ವೇದದ, ಆಯುರ್ವೇದದ ವೈದ್ಯರಿಗೆ ಅಲೋಪತಿ ಶಿಕ್ಷಣವನ್ನು ನೀಡಲಾಗುವುದು !

ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವೈದ್ಯರು ಇನ್ನು ಆಯುರ್ವೇದ ಹಾಗೂ ಬಿ.ಎ.ಎಂ.ಎಸ್. ವೈದ್ಯರು ಅಲೋಪತಿಯನ್ನು ಕಲಿಯಬಹುದು. ಅದಕ್ಕಾಗಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಹೋಲಿಸ್ಟಿಕ್ ಮೆಡಿಸಿನ್ ಪಿಜಿ ಡಿಪ್ಲೊಮಾ ಕೋರ್ಸ್’ (ಸಮಗ್ರ ಔಷಧಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್) ಅನ್ನು ಪ್ರಾರಂಭಿಸಲಿದೆ.