ಸಿಂಹಸ್ಥ ಪ್ರಾಧಿಕಾರದಲ್ಲಿ ಸಾಧು-ಮಹಂತರು ಇರುವುದಿಲ್ಲ!
ನಾಶಿಕ್ – ಉತ್ತರ ಪ್ರದೇಶ ಸರಕಾರವು ಮಹಾಕುಂಭಮೇಳಕ್ಕಾಗಿ ಯಾವ ರೀತಿಯ ಕಾನೂನನ್ನು ರೂಪಿಸಿತ್ತು, ಅದೇ ರೀತಿಯ ಕಾನೂನನ್ನು ನಾಶಿಕ್‌ನ ಸಿಂಹಸ್ಥ ಕುಂಭಮೇಳಕ್ಕಾಗಿ ರೂಪಿಸಲಾಗುವುದು. ಹಾಗೆಯೇ ಮೇಳ ಪ್ರಾಧಿಕಾರವನ್ನು ಸಹ ರಚಿಸಲಾಗುವುದು. ಸಿಂಹಸ್ಥ ಕುಂಭಮೇಳಕ್ಕಾಗಿ ನಿಧಿಯ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಾರ್ಚ್ 23 ರಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು. ಮುಖ್ಯಮಂತ್ರಿಗಳು ತ್ರಯಂಬಕೇಶ್ವರ (ಜಿಲ್ಲಾ ನಾಶಿಕ್) ದಲ್ಲಿರುವ ಜ್ಯೋತಿರ್ಲಿಂಗದ ದರ್ಶನ ಪಡೆದು ತ್ರಯಂಬಕೇಶ್ವರದ ಅಭಿವೃದ್ಧಿ ಯೋಜನೆಯ ಪರಿಶೀಲನೆ ನಡೆಸಿದರು. ನಂತರ ಅವರು ಮಾಧ್ಯಮಗಳೊಂದಿಗೆ ಸಂವಾದ ನಡೆಸುವಾಗ ಈ ಮೇಲಿನ ಮಾಹಿತಿಯನ್ನು ನೀಡಿದರು.

ಮುಖ್ಯಮಂತ್ರಿಗಳು ಮಾತು ಮುಂದುವರಿಸಿ ,
1 .ತ್ರಯಂಬಕೇಶ್ವರದ ಕುಶಾವರ್ತ ತೀರ್ಥವನ್ನು ಪರಿಶೀಲಿಸಲಾಗಿದೆ. ತ್ರಯಂಬಕೇಶ್ವರದ ಅಭಿವೃದ್ಧಿ ಯೋಜನೆಯ ಪ್ರಸ್ತುತಿಯನ್ನು ನಾನು ನೋಡಿದ್ದೇನೆ. ಕುಂಭಮೇಳದ ನಿಮಿತ್ತ ನಾಶಿಕ್ ನ ಜೊತೆಗೆ ತ್ರಯಂಬಕೇಶ್ವರವು ಸಹ ಅಭಿವೃದ್ಧಿ ಹೊಂದಬೇಕು.
2 .ತ್ರಯಂಬಕೇಶ್ವರದ ಅಭಿವೃದ್ಧಿಗಾಗಿ 1,100 ಕೋಟಿ ರೂಪಾಯಿಗಳ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ದರ್ಶನಕ್ಕಾಗಿ ಮಹಾಮಾರ್ಗ (ಕಾರಿಡಾರ್) ನಿರ್ಮಾಣ, ವಾಹನ ನಿಲುಗಡೆ ಮತ್ತು ಶೌಚಾಲಯಗಳ ವ್ಯವಸ್ಥೆ, ಅಲ್ಲಿನ ವಿವಿಧ ಕುಂಡಗಳ ಜೀರ್ಣೋದ್ಧಾರ, ಅಲ್ಲಿನ ಪ್ರಮುಖ ದೇವಾಲಯಗಳ ಜೀರ್ಣೋದ್ಧಾರ, ಪುರಾತತ್ವ ಸಮೀಕ್ಷೆ ವಿಭಾಗದ ಮಧ್ಯಸ್ಥಿಕೆಯಿಂದ ದೇವಾಲಯದಲ್ಲಿನ ಜೀರ್ಣೋದ್ಧಾರ ಮತ್ತು ಅನೇಕ ರೀತಿಯ ಸೌಲಭ್ಯಗಳನ್ನು ಸಿದ್ಧಪಡಿಸುವ ಪ್ರಯತ್ನ ಮಾಡಲಾಗುವುದು.
3 .ನಾಶಿಕ್‌ನಲ್ಲಿ ಸುಮಾರು 11 ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಗಳ ದೊಡ್ಡ ಮಾರ್ಗವನ್ನು ಸಿದ್ಧಪಡಿಸಲಾಗುತ್ತಿದೆ. ಸಾಧುಗ್ರಾಮಕ್ಕಾಗಿ ಅಲ್ಲಿನ ಎಲ್ಲಾ ಸ್ಥಳಗಳನ್ನು ಅಧೀನಕ್ಕೆ ತೆಗೆದುಕೊಂಡು ಅಭಿವೃದ್ಧಿಪಡಿಸಲಾಗುತ್ತಿದೆ.
4 .ಘಾಟ್‌ಗಳಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಕೆಲವು ಘಾಟ್‌ಗಳನ್ನು ಹೆಚ್ಚಿಸಲಾಗುತ್ತಿದೆ. ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಯನ್ನು ತಯಾರಿಸಿ ನೀರು ಶುದ್ಧವಾಗಿರುವಂತೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
5 .ಸಿಂಹಸ್ಥ ಕುಂಭಮೇಳಕ್ಕೆ ಭೇಟಿ ನೀಡುವವರ ಸಂಖ್ಯೆಯನ್ನು ಇನ್ನೂ ಅಂದಾಜಿಸಲಾಗಿಲ್ಲ. ಆದ್ದರಿಂದ ಎಲ್ಲಾ ವಿಷಯಗಳನ್ನು ಖಾತ್ರಿಪಡಿಸಿದ ನಂತರ ಅಂದಾಜು ತೆಗೆದುಕೊಳ್ಳಲಾಗುತ್ತದೆ.
6 .ಸಿಂಹಸ್ಥ ಪ್ರಾಧಿಕಾರದಲ್ಲಿ ಸಾಧು-ಮಹಂತರಿಗೆ ಅವಕಾಶ ಇರುವುದಿಲ್ಲ. ಇದು ಆಡಳಿತಾತ್ಮಕ ಪ್ರಾಧಿಕಾರವಾಗಿದೆ, ಆಧ್ಯಾತ್ಮಿಕ ಪ್ರಾಧಿಕಾರವಲ್ಲ. ಆಧ್ಯಾತ್ಮಿಕ ಭಾಗವನ್ನು ಸಾಧು-ಸಂತರು ನೋಡಿಕೊಳ್ಳುತ್ತಾರೆ, ಆದರೆ ಆಡಳಿತ ಮತ್ತು ನಿರ್ವಹಣೆಯ ಭಾಗವನ್ನು ಮೇಳ ಪ್ರಾಧಿಕಾರ ನೋಡಿಕೊಳ್ಳುತ್ತದೆ.
ಸಿಂಹಸ್ಥಕ್ಕಾಗಿ ಮೇಳ ಪ್ರಾಧಿಕಾರದ ಸ್ಥಾಪನೆ !
ಮುಖ್ಯಮಂತ್ರಿಗಳು ಉತ್ತರ ಪ್ರದೇಶದಂತೆ ಸಿಂಹಸ್ಥ ಕುಂಭಮೇಳದ ಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು” ಎಂದು ತ್ರಯಂಬಕೇಶ್ವರದ ಸಾಧು-ಮಹಂತರು ಒತ್ತಾಯಿಸಿದ್ದಾರೆ. ಇದಕ್ಕೆ ಫಡ್ನವೀಸ್ ಅವರು ಪ್ರತಿಕ್ರಿಯಿಸಿ, ಕುಂಭಮೇಳದ ಜವಾಬ್ದಾರಿಯು ಮುಖ್ಯಮಂತ್ರಿಗಳದ್ದೇ ಆಗಿರುತ್ತದೆ. ಆದರೆ ಉತ್ತರ ಪ್ರದೇಶ ಸರ್ಕಾರವು ಯಾವ ರೀತಿಯಲ್ಲಿ ಕುಂಭಮೇಳದ ಕಾನೂನು ಮತ್ತು ಮೇಳ ಪ್ರಾಧಿಕಾರವನ್ನು ಸಿದ್ಧಪಡಿಸಿತ್ತೋ, ಅದೇ ರೀತಿ ನಮ್ಮ ಕಾನೂನನ್ನು ಸಹ ನಾವು ಸಿದ್ಧಪಡಿಸುತ್ತಿದ್ದೇವೆ. ಮೇಳ ಪ್ರಾಧಿಕಾರವನ್ನು ಸಿದ್ಧಪಡಿಸಿ ಅದಕ್ಕೆ ಕಾನೂನು ಚೌಕಟ್ಟನ್ನು ನೀಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು. |