ಗುಜರಾತ್ ಗಲಭೆಯ 6 ಹಿಂದೂಗಳನ್ನು 23 ವರ್ಷಗಳ ನಂತರ ನ್ಯಾಯಾಲಯದಿಂದ ಖುಲಾಸೆ !

ನವದೆಹಲಿ – ಗೋಧ್ರಾ ಘಟನೆಯ ನಂತರ ಗುಜರಾತ್‌ನ ವಡೋದರಾ ಹಳ್ಳಿಯೊಂದರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಆರು ಹಿಂದೂಗಳನ್ನು ಖುಲಾಸೆಗೊಳಿಸಿದೆ. ಈ ತೀರ್ಪಿನಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಮನೋಜ್ ಮಿಶ್ರಾ ಅವರ ಪೀಠವು, ಅಪರಾಧ ನಡೆದ ಸ್ಥಳದಲ್ಲಿ ಕೇವಲ ಉಪಸ್ಥಿತರಿದ್ದ ಮಾತ್ರಕ್ಕೆ ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

1. 2002 ರಲ್ಲಿ ನಡೆದ ಈ ಗಲಭೆಯಲ್ಲಿ, ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಿ ವಾಹನಗಳನ್ನು ಧ್ವಂಸಗೊಳಿಸಿತು. ನಂತರ ಪೊಲೀಸರು ಗುಂಡು ಹಾರಿಸಿ 7 ಜನರನ್ನು ಬಂಧಿಸಿದ್ದರು.

2. 2005 ರಲ್ಲಿ, ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎಲ್ಲರನ್ನೂ ಖುಲಾಸೆಗೊಳಿಸಿತು; ಆದರೆ 2016 ರಲ್ಲಿ ಗುಜರಾತ ಉಚ್ಚನ್ಯಾಯಾಲಯವು ಅವರಲ್ಲಿ 6 ಜನರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿತ್ತು.

3. ಉಚ್ಚನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ಆರೋಪಿಗಳ ಬಳಿ ಗಲಭೆಯನ್ನು ಪ್ರಚೋದಿಸಲು ಬಳಸಿದ ಯಾವುದೇ ಶಸ್ತ್ರಾಸ್ತ್ರಗಳು ಅಥವಾ ಪುರಾವೆಗಳು ಕಂಡುಬಂದಿಲ್ಲ, ಎಂದು ಹೇಳಿದೆ.

4. ‘ಒಬ್ಬ ಅಮಾಯಕನ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ತಪ್ಪು’ ಎಂದು ಪೀಠ ಹೇಳಿದೆ. ಈ ತೀರ್ಪಿನಿಂದ ಅರ್ಜಿದಾರರಾದ ಧೀರೂಭಾಯಿ ಭಾಯಿ ಭೈಲಾಲಭಾಯಿ ಚೌಹಾಣ ಮತ್ತು ಇತರರಿಗೆ ಸಮಾಧಾನ ತಂದಿದೆ.