Maulana Arshad Madani Appeal To Muslims : ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮತ್ತು ಚಿರಾಗ್ ಪಾಸ್ವಾನ್ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಿ ! – ಮೌಲಾನಾ ಅರ್ಷದ್ ಮದನಿ

ಜಮಿಯತ್ ಉಲೆಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರ ಮುಸ್ಲಿಮರಿಗೆ ಕರೆ

(ಮೌಲಾನಾ ಎಂದರೆ ಇಸ್ಲಾಮಿನ ಅಭ್ಯಾಸಕ)

ನವದೆಹಲಿ – ‘ಜಮಿಯತ್ ಉಲೆಮಾ-ಎ-ಹಿಂದ್’ ಎಂಬ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರು ಇತ್ತೀಚೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಸಂಸದ ಚಿರಾಗ್ ಪಾಸ್ವಾನ್ ಅವರಂತಹ ನಾಯಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವಂತೆ ಮುಸ್ಲಿಮರಿಗೆ ಕರೆ ನೀಡಿದ್ದಾರೆ. ಈ ನಾಯಕರು ತಮ್ಮನ್ನು ತಾವು ಜಾತ್ಯತೀತರೆಂದು ಹೇಳಿಕೊಳ್ಳುತ್ತಾರೆ ಆದರೆ ಮುಸ್ಲಿಮರ ಮೇಲಿನ ದೌರ್ಜನ್ಯ ಮತ್ತು ಅನ್ಯಾಯದ ಬಗ್ಗೆ ಮೌನವಾಗಿರುತ್ತಾರೆ ಎಂದು ಮೌಲಾನಾ ಮದನಿ ಕಿಡಿ ಕಾರಿದರು. (ದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಗಲಭೆಗಳನ್ನು ಸೃಷ್ಟಿಸುತ್ತಾರೆ, ಹಿಂದೂಗಳ ಅಂಗಡಿ, ಮನೆ, ಕಾರುಗಳನ್ನು ಸುಟ್ಟುಹಾಕುತ್ತಾರೆ. ಮುಸ್ಲಿಮರು ತುಳಿತಕ್ಕೊಳಗಾಗುತ್ತಿದ್ದಾರೆ ಮತ್ತು ಅವರಿಗೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಪ್ರಚಾರ ಮಾಡುವ ಮುಸ್ಲಿಮರ ನೈಜ ಸ್ವರೂಪವನ್ನು ತೋರಿಸುತ್ತದೆ! – ಸಂಪಾದಕ).

ಈ ನಾಯಕರು ಪ್ರಸ್ತುತ ಕೇಂದ್ರದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸರಕಾರದ ಭಾಗವಾಗಿದ್ದಾರೆ. ಅಧಿಕಾರದ ಆಸೆಯಿಂದ ಮುಸ್ಲಿಮರ ವಿರುದ್ಧ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆಯ ಕುರಿತಾದ ಅವರ ನಿಲುವಿನಿಂದಾಗಿ ಅವರ ಜಾತ್ಯತೀತ ಮುಖವಾಡ ತೆಗೆದಂತಾಗಿದೆ. ದೇಶದಲ್ಲಿ ದ್ವೇಷ ಮತ್ತು ಅನ್ಯಾಯದ ವಾತಾವರಣವಿದ್ದರೂ ಈ ನಾಯಕರು ಮೌನವಾಗಿದ್ದಾರೆ ಎಂದು ಮದನಿ ಆರೋಪಿಸಿದ್ದಾರೆ.