|
ಬೆಂಗಳೂರು – ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರವರು ‘ನ್ಯೂಸ್ 18 ಇಂಡಿಯಾ’ ಈ ಸುದ್ದಿ ವಾಹಿನಿಯ ‘ಡೈಮಂಡ್ ಸ್ಟೇಟ್ಸ್ ಸಮೀಟ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅವರು ಕರ್ನಾಟಕದ ಕಾಂಗ್ರೆಸ್ ಸರಕಾರ ಜಾರಿಗೆ ತರಲಿರುವ ಮುಸಲ್ಮಾನರ ಮೀಸಲಾತಿಯ ಬಗ್ಗೆ ಮಾತನಾಡುತ್ತ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಹೇಳಿಕೆ ನೀಡಿದರು. ಇದಾದ ನಂತರ, ದೇಶಾದ್ಯಂತ ಅವರ ಮೇಲೆ ಟೀಕೆಗಳಾಗುತ್ತಿವೆ. ಸಂಸತ್ತಿನಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದಾಗ ಕೋಲಾಹಲ ಉಂಟಾಯಿತು. ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾರವರು ಮಾತನಾಡಿ, ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಸಾಧ್ಯವಿಲ್ಲವೆಂದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ; ಆದರೆ ಕಾಂಗ್ರೆಸ ಮುಸಲ್ಮಾನರಿಗೆ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸಲು ಬಯಸುತ್ತದೆ ಎಂದು ಹೇಳಿದರು
ಡಿ.ಕೆ. ಶಿವಕುಮಾರ ಅವರು ಏನು ಹೇಳಿದ್ದರು?
ಡಿ. ಕೆ. ಶಿವಕುಮಾರ ರವರಿಗೆ ಕಾರ್ಯಕ್ರಮದಲ್ಲಿ ಮುಸಲ್ಮಾನರ ಮೀಸಲಾತಿಯ ಬಗ್ಗೆ ಕೇಳಿದಾಗ, ಅವರು ಮಾತನಾಡಿ “ನೋಡೋಣ, ಕಾಯೋಣ” ಎಂದು ಹೇಳಿದರು. ನ್ಯಾಯಾಲಯದ ತೀರ್ಪು ಏನೇ ಇರಲಿ, ನಾವು ಏನನ್ನಾದರೂ ಪ್ರಾರಂಭಿಸಿದ್ದೇವೆ. (ಮುಸಲ್ಮಾನರಿಗೆ ಮೀಸಲಾತಿ ನೀಡಿದರೆ) ಎಲ್ಲರೂ ನ್ಯಾಯಾಲಯಕ್ಕೆ ಹೋಗುತ್ತಾರೆ ಎಂಬುದು ನನಗೆ ತಿಳಿದಿದೆ. ನಾವು ಒಂದು ಉತ್ತಮ ದಿನಕ್ಕಾಗಿ ಕಾಯಬೇಕು, ಆ ದಿನ ಖಂಡಿತ ಬರುತ್ತದೆ. ಅನೇಕ ಬದಲಾವಣೆಗಳು ನಡೆಯುತ್ತಿವೆ, ಸಂವಿಧಾನ ಬದಲಾಗುತ್ತಿದೆ ಮತ್ತು ಇಂತಹ ಕೆಲವು ನಿರ್ಧಾರಗಳು ಸಂವಿಧಾನವನ್ನು ಬದಲಾಯಿಸುತ್ತವೆ, ಎಂದು ಹೇಳಿದರು.
ಈ ಹೇಳಿಕೆಯ ನಂತರ, ಭಾಜಪವು ಕಾಂಗ್ರೆಸ್ಸನ್ನು ತೀವ್ರವಾಗಿ ಟೀಕಿಸಿತು. ಇದು ಓಲೈಕೆಯ ರಾಜಕಾರಣವಾಗಿದೆ ಎಂದು ಭಾಜಪ ಹೇಳಿದೆ. ಕಾಂಗ್ರೆಸ ಸಂವಿಧಾನವನ್ನು ಬದಲಾಯಿಸಿ ಮುಸಲ್ಮಾನರಿಗೆ ಮೀಸಲಾತಿ ನೀಡಲು ಬಯಸುತ್ತದೆ. ಇದು ಕಾನೂನುಬಾಹಿರ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿದೆ.
ತೋಳದ ಮುಖ ಬಯಲಾಯಿತು ! – ಕೇಂದ್ರ ಸಚಿವ ಗಿರಿರಾಜ ಸಿಂಗ
ಕೇಂದ್ರ ಸಚಿವ ಗಿರಿರಾಜ ಸಿಂಗ ರವರು ಮಾತನಾಡಿ, ತೋಳದ ನಿಜವಾದ ಮುಖ ಬಯಲಾಗಿದೆ. ಅವರು ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಬಯಸುತ್ತಾರೆ. ಅವರ ದ್ವಂದ್ವತೆ ಬಯಲಾಗಿದೆ, ಎಂದು ಹೇಳಿದರು.
ಸಂವಿಧಾನವನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ ! – ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯಸಭೆಯಲ್ಲಿ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಸಂವಿಧಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ನಾವು ಭಾರತವನ್ನು ಜೋಡಿಸಲು ಕೆಲಸ ಮಾಡುತ್ತೇವೆ. ಭಾರತವನ್ನು ಒಡೆಯಲು ಬಯಸುವವರು ನಮಗೆ ಹೇಳಬಾರದು, ಎಂದು ಹೇಳಿದರು.
ಭಾಜಪವು ನನ್ನ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡುತ್ತಿದೆ ! – ಡಿ.ಕೆ. ಶಿವಕುಮಾರ ಅವರ ಸ್ಪಷ್ಟೀಕರಣ
ಈ ಸಂಪೂರ್ಣ ವಿವಾದದ ಬಗ್ಗೆ ಡಿ.ಕೆ. ಶಿವಕುಮಾರ ರವರು ಮಾತನಾಡುತ್ತಾ, ಮಾಧ್ಯಮಗಳು ತಪ್ಪಾಗಿ ವರದಿ ಮಾಡುವುದಿಲ್ಲ; ಆದರೆ ಭಾಜಪ ತಪ್ಪು ಹೇಳಿಕೆ ನೀಡುತ್ತಿದೆ. ಅವರು ಸುಳ್ಳು ಸುದ್ದಿ ಹರಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ನಾನು, ಕೆಲವೊಮ್ಮೆ ನಿರ್ಧಾರದ ನಂತರ ಬದಲಾವಣೆಗಳಾಗಿವೆ ಎಂದು ಹೇಳಿದ್ದೇನೆ. `ನಾವು ಸಂವಿಧಾನವನ್ನು ಬದಲಾಯಿಸಲಿದ್ದೇವೆ’ ಎಂದು ಹೇಳಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಸಂವಿಧಾನ ಏನೆಂದು ನನಗೆ ತಿಳಿದಿದೆ. ನಾನು ಸಂವಿಧಾನವನ್ನು ತಿದ್ದುಪಡಿ ಮಾಡುವಾಗ ಇಂತಹ ನಿರ್ಧಾರಗಳನ್ನು ಹಲವು ಬಾರಿ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದೇನೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೂಗಳಿಗಾಗಿ ಅಲ್ಲ, ಮುಸಲ್ಮಾನರಿಗಾಗಿ ಕಾಂಗ್ರೆಸ ಈ ಹಿಂದೆಯೂ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಿದೆ. ಶಾಹಬಾನೋ ಪ್ರಕರಣ ಇದಕ್ಕೆ ಕುಖ್ಯಾತಿ ಪಡೆದಿದೆ. ಹಾಗಾಗಿ, ಕಾಂಗ್ರೆಸ್ಸಿನಿಂದ ಇಂತಹ ಸಂಗತಿಗಳು ಹೊಸತಲ್ಲ. ಅಧಿಕಾರ ಪಡೆಯಲು ಕಾಂಗ್ರೆಸ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತತೆ’ ಮತ್ತು ‘ಸಮಾಜವಾದ’ ಎಂಬ ಪದಗಳನ್ನು ಸೇರಿಸಿತು. ನಾಳೆ, ಕಾಂಗ್ರೆಸ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಮೂಲಕ ಭಾರತವನ್ನು ‘ಇಸ್ಲಾಮಿಕ್ ರಾಷ್ಟ್ರ’ ಎಂದು ಘೋಷಿಸಬಹುದು. ಆದುದರಿಂದ, ಈ ಪರಿಸ್ಥಿತಿ ಉದ್ಭವಿಸುವ ಮೊದಲೇ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಅವಶ್ಯಕವಾಗಿದೆ ! |