ಬಿಹಾರ ಶಿಕ್ಷಣ ಮಂಡಳಿಯ 5 ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಮಕ್ಕಳ ಮನಸ್ಸಿನ ಮೇಲೆ ಯೇಸು ಕ್ರಿಸ್ತನ ಪ್ರಭಾವ ಬೀರುವ ಅಧ್ಯಾಯ !

* ಬಿಹಾರದ ಸಮ್ಮಿಶ್ರ ಸರಕಾರದಲ್ಲಿರುವ ಬಿಜೆಪಿಯು ಈ ಪಾಠವನ್ನು ಕೈಬಿಡುವಂತೆ ಶಿಕ್ಷಣ ಮಂಡಳಿಗೆ ಆದೇಶಿಸಬೇಕು ಎಂದು ಹಿಂದುಗಳಿಗೆ ಅನಿಸುತ್ತದೆ ! – ಸಂಪಾದಕರು 

* ಹಿಂದುತ್ವನಿಷ್ಠರೂ ಸಹ ಈ ಪಾಠವನ್ನು ಕೈಬಿಡುವವರೆಗೂ ಬೆಂಬೆತ್ತುವಿಕೆ ಮಾಡುತ್ತಿರಬೇಕು ! – ಸಂಪಾದಕರು 

* ಮಹಾರಾಷ್ಟ್ರದಲ್ಲಿ, ಕೆಲವು ವರ್ಷಗಳ ಹಿಂದೆ, ಕುಸುಮಾಗ್ರಜ ಅವರ ‘ಸರ್ವಾತ್ಮಕ ಸರ್ವೇಶ್ವರ’ ಎಂಬ ಕವಿತೆಯನ್ನು ಮತಾಂಧರ ವಿರೋಧದಿಂದ ಶಾಲಾ ಪಠ್ಯಕ್ರಮದ ಪುಸ್ತಕದಿಂದ ಕೈಬಿಡಲಾಗಿತ್ತು, ಆದರೆ ಇತರ ಧರ್ಮಗಳ ಸಂದರ್ಭದಲ್ಲಿ ಮಾತ್ರ ಹೇಗೆ ಇಂತಹ ಪಾಠಗಳು ನಡೆಯುತ್ತವೆ ? – ಸಂಪಾದಕರು 

ಪಾಟಲಿಪುತ್ರ (ಬಿಹಾರ) – ರಾಜ್ಯದ ಶಿಕ್ಷಣ ಮಂಡಳಿಯ ‘ಸ್ಟೇಟ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಮತ್ತು ಟ್ರೈನಿಂಗ್’ (ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ) 5 ನೇ ತರಗತಿಯ ‘ಬ್ಲಾಸಮ್ ಪಾರ್ಟ್ – 4‘ ಪಠ್ಯ ಪುಸ್ತಕದಲ್ಲಿ, ಮಕ್ಕಳ ಮನಸ್ಸಿನಲ್ಲಿ ಯೇಸು ಕ್ರಿಸ್ತನ ಪ್ರಭಾವ ಬೀರುವಂತಹ ಪಠ್ಯವನ್ನು ನೀಡಲಾಗಿದೆ. ‘ಜೀಸಸ್ ಟೂ ಸೂಪರ್’ ಶೀರ್ಷಿಕೆಯಡಿಯಲ್ಲಿ ಒಂದು ಪಾಠವಿದೆ. ಇದರಲ್ಲಿ, ಒಂದು ಕುಟುಂಬವು ಯೇಸುಕ್ರಿಸ್ತನನ್ನು ಭೇಟಿಯಾಗಲು ಹೇಗೆ ಉತ್ಸುಕತೆಯಿಂದ ಇರುತ್ತದೆ, ಆ ಕುಟುಂಬವು ಯೇಸುವಿನ ಅನುಗ್ರಹವನ್ನು ಪಡೆಯಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದರ ಕುರಿತು ಒಂದು ಕಾಲ್ಪನಿಕ ಕಥೆಯನ್ನು ಬರೆಯಲಾಗಿದೆ.