ಕಲಿಯುಗದ ಮೊದಲನೇಯ ವೇದಋಷಿ ಪೂ. ಡಾ. ಶಿವಕುಮಾರ ಓಝಾ!

ಹಿಂದೂ ಧರ್ಮ, ಅಧ್ಯಾತ್ಮ, ಭಾರತೀಯ ಸಂಸ್ಕೃತಿ, ಸಂಸ್ಕೃತ ಇವುಗಳೊಂದಿಗೆ ಅನೇಕ ವಿಷಯಗಳ ಕುರಿತು ವಿಫುಲ ಬರವಣಿಗೆಯನ್ನು ಮಾಡಿದ ಕಲಿಯಗದ ಮೊದಲನೇಯ ವೇದಋಷಿ ಡಾ. ಶಿವಕುಮಾರ ಓಝಾ !
(ಪರಾತ್ಪರ ಗುರು) ಡಾ. ಆಠವಲೆ

ನಾನು ಡಾಕ್ಟರ್ ಅಂದರೆ ವಿಜ್ಞಾನ ಶಾಖೆಯ ಪದವೀಧರನಾಗಿದ್ದೇನೆ. ಆದುದರಿಂದ ನನಗೆ ಎಂದಿಗೂ ಸಂಸ್ಕೃತ, ರಾಷ್ಟ್ರಭಾಷೆ ಹಿಂದಿ ಅಥವಾ ನನ್ನ ಮಾತೃಭಾಷೆ ಮರಾಠಿ ಇವುಗಳ ಅಧ್ಯಯನ ಮಾಡಬೇಕೆಂದು ಅನಿಸಲಿಲ್ಲ. ತದ್ವಿರುದ್ಧ ಡಾ. ಶಿವಕುಮಾರ ಓಝಾ ಇವರು ವಿಜ್ಞಾನದ ಪ್ರಸಿದ್ಧ ಸಂಶೋಧಕರಾಗಿದ್ದರೂ ಅವರು ಸಂಸ್ಕೃತ, ಹಿಂದಿ, ಅಧ್ಯಾತ್ಮಶಾಸ್ತ್ರ, ಭಾರತೀಯ ಸಂಸ್ಕೃತಿ ಈ ವಿಷಯಗಳ ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಮತ್ತು ಪ್ರಕಾಶಿಸಿದ್ದಾರೆ. ಅವರ ಗ್ರಂಥಗಳಲ್ಲಿನ ಪ್ರತಿಯೊಂದು ಸಾಲು ಅತ್ಯಂತ ಮಹತ್ವದ್ದಾಗಿದೆ. ಆದುದರಿಂದ ‘ಅವರು ಕಲಿಯುಗದ ಮೊದಲನೇಯ ವೇದ ಋಷಿಗಳಾಗಿದ್ದಾರೆ’, ಎಂಬುದು ನನಗೆ ತೀವ್ರತೆಯಿಂದ ಅರಿವಾಯಿತು.’

– (ಪರಾತ್ಪರ ಗುರು) ಡಾ. ಆಠವಲೆ

(ಪೂ.) ಡಾ. ಶಿವಕುಮಾರ ಓಝಾ

ಸರ್ವೋತ್ತಮ ಶಿಕ್ಷಣ ಯಾವುದು ?

೧. ವಿಷಯ ಪ್ರವೇಶ

೧ ಅ. ‘ಭಾರತೀಯ ಸಂಸ್ಕೃತಿ’ಯು ಸರ್ವೋತ್ತಮ ಶಿಕ್ಷಣದ ಬಹುದೊಡ್ಡ ಆಧಾರವಾಗಿದೆ : ‘ಭಾರತೀಯ ಸಂಸ್ಕೃತಿ’ ಈ ಶಬ್ದದ ಅರ್ಥವು ಇಲ್ಲಿ ‘ವೈದಿಕ ಸಂಸ್ಕೃತಿ, ಹಿಂದೂ ಧರ್ಮ ಅಥವಾ ಸನಾತನ ಧರ್ಮ’, ಎಂದಾಗಿದೆ. ಇದು ಸರ್ವೋತ್ತಮ ಶಿಕ್ಷಣದ ಬಹುದೊಡ್ಡ ಆಧಾರವಾಗಿದೆ. ಅದರ ಆಧಾರವನ್ನು ಪಡೆದು ಪ್ರಸ್ತುತ ಪುಸ್ತಕದ ರಚನೆಯನ್ನು ಮಾಡಲಾಗಿದೆ. ಭಾರತೀಯ ಸಂಸ್ಕೃತಿಯಲ್ಲಿನ ಶಿಕ್ಷಣದ ಕ್ಷೇತ್ರವು ಬಹಳ ವಿಸ್ತಾರವಾಗಿದೆ ಮತ್ತು ಅದು ಉಪಯುಕ್ತವೂ ಆಗಿದೆ. ಸೃಷ್ಟಿಯ ಮೂರೂ ಭಾಗಗಳಲ್ಲಿ, ಅಂದರೆ ಆಧ್ಯಾತ್ಮಿಕ, ಆಧಿಭೌತಿಕ ಮತ್ತು ಆಧಿದೈವಿಕ ಈ ರೀತಿ ಶಿಕ್ಷಣದ ವಿಸ್ತಾರವಿದೆ. ಮನುಷ್ಯನ ಜೀವನದಲ್ಲಿ ಶಿಕ್ಷಣದ ಕೊಡುಕೊಳ್ಳುವಿಕೆಯು ಯಾವುದೇ ರೀತಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷ ರೀತಿಯಲ್ಲಿ ಅಜೀವನ ಪರ್ಯಂತ ನಡೆಯುತ್ತಿರುತ್ತದೆ. ಪ್ರಾಚೀನ ಭಾರತದಲ್ಲಿ ಶಿಕ್ಷಣವನ್ನು ನೀಡುವ ಪ್ರಕ್ರಿಯೆಯು ಮಗು ತಾಯಿಯ ಹೊಟ್ಟೆಯಲ್ಲಿ ಇರುವಾಗಲೇ ಆರಂಭವಾಗುತ್ತಿತ್ತು.

೧ ಆ. ಶಿಕ್ಷಣವನ್ನು ಗ್ರಹಿಸುವುದು ಮತ್ತು ಅದನ್ನು ಇತರರಿಗೆ ಕೊಡುವುದು, ಇವುಗಳ ಕ್ಷಮತೆ ಪ್ರತಿಯೊಬ್ಬ ಮನುಷ್ಯನಲ್ಲಿ ಬೇರೆಬೇರೆ ಆಗಿರುತ್ತದೆ, ಆದರೆ ‘ಜ್ಞಾನವೃದ್ಧಿಯನ್ನು ಮಾಡಿಕೊಳ್ಳುವುದು’ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ : ‘ಶಿಕ್ಷಣವನ್ನು ಗ್ರಹಿಸುವುದು ಅಥವಾ ಶಿಕ್ಷಣವನ್ನು ಕೊಡುವುದು’, ಇದೊಂದು ಪ್ರಕ್ರಿಯೆಯಾಗಿದೆ. ಯಾವುದೇ ಕ್ರಿಯೆಯನ್ನು ಮಾಡಲು ಮನುಷ್ಯನ ಬಳಿ ಮನಸ್ಸು, ವಾಣಿ ಮತ್ತು ಶರೀರ ಈ ಮೂರು ಸಾಧನಗಳಿರುತ್ತವೆ. ಭಾರತದಲ್ಲಿ ಅತ್ಯಂತ ಪ್ರಾಚೀನ ಕಾಲದಿಂದ ಈ ಮೂರೂ ಸಾಧನಗಳನ್ನು ಶಿಕ್ಷಣಕ್ಕಾಗಿ ಅತ್ಯಂತ ಕೌಶಲ್ಯದಿಂದ ಉಪಯೋಗಿಸಲಾಗಿದೆ. ಮಾನವನ ಜೀವನದಲ್ಲಿ ಪರಿವರ್ತನೆಯನ್ನು ಮಾಡುವ ಪ್ರಚಂಡ ಶಕ್ತಿಯು ಶಿಕ್ಷಣದಲ್ಲಿದೆ. ಒಂದು ರೀತಿಯಲ್ಲಿ ಶಿಕ್ಷಣದ ಮೂಲಕ ಮನುಷ್ಯನು ಸದಾಚಾರಿ ಮತ್ತು ಮಹಾತ್ಮನಾಗುತ್ತಾನೆ ಮತ್ತು ಇನ್ನೊಂದು ರೀತಿಯ ಶಿಕ್ಷಣದಿಂದ ಮನುಷ್ಯನು ದುರಾಚಾರಿ ಮತ್ತು ಭಯೋತ್ಪಾದಕನಾಗುತ್ತಾನೆ. ಶಿಕ್ಷಣವನ್ನು ಗ್ರಹಣ ಮಾಡುವ, ಹಾಗೆಯೇ ಶಿಕ್ಷಣವನ್ನು ನೀಡುವ ಕ್ಷಮತೆ ಮತ್ತು ಕೌಶಲ್ಯವು ಪ್ರತಿಯೊಬ್ಬ ಮನುಷ್ಯನಲ್ಲಿ ಬೇರೆಬೇರೆಯಾಗಿರುತ್ತದೆ. ‘ಜ್ಞಾನದ ವೃದ್ಧಿಯನ್ನು ಮಾಡಿಕೊಳ್ಳುವುದು’ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ. ಜೀವನದ ಬಗ್ಗೆ ನಮ್ಮ ದೃಷ್ಟಿಕೋನ ಮತ್ತು ಜೀವನದ ನಮ್ಮ ಉದ್ದೇಶ, ಇವು ಜ್ಞಾನವರ್ಧನೆಯನ್ನು ಎಲ್ಲಿಯವರೆಗೆ ಮಾಡಿಕೊಳ್ಳಬೇಕು ಮತ್ತು ಜ್ಞಾನವರ್ಧನೆಗಾಗಿ ಶಿಕ್ಷಣದ ಯಾವ ರೂಪ ಅಥವಾ ಯಾವ ಪ್ರಕಾರವು ಇರಬೇಕು ? ಎಂಬುದನ್ನು ನಿರ್ಧರಿಸುತ್ತವೆ.

೧ ಇ. ಆಧುನಿಕ ಪ್ರಚಲಿತ ಶಿಕ್ಷಣಪದ್ಧತಿಯ ದೋಷಗಳನ್ನು ದೂರಗೊಳಿಸುವುದು ಆವಶ್ಯಕವಾಗಿದೆ : ವರ್ತಮಾನಕಾಲದಲ್ಲಿ ಮನುಷ್ಯನಲ್ಲಿರುವ ಅವ್ಯವಸ್ಥಿತತನ, ಉದ್ಧಟತನ, ಅನೈತಿಕತೆ, ಚಾರಿತ್ರ್ಯದ ಅಧಃಪತನ, ತಾಯಿ-ತಂದೆ ಮತ್ತು ಗುರುಗಳ ಬಗ್ಗೆ ಶ್ರದ್ಧೆ ಇಲ್ಲದಿರುವುದು, ರಾಷ್ಟ್ರೀಯ ಭಾವನೆಯ ಅಭಾವ, ಸ್ವಾರ್ಥಾಂಧತೆ ಇತ್ಯಾದಿ ದೋಷಗಳು ಖಂಡಿತವಾಗಿಯೂ ‘ಆಧುನಿಕ ಕಾಲದ ಪ್ರಚಲಿತ ಶಿಕ್ಷಣದಲ್ಲಿನ ದೋಷಗಳಾಗಿವೆ ಮತ್ತು ಅವುಗಳನ್ನು ದೂರಗೊಳಿಸಲು ಪ್ರತಿಯೊಂದು ರಾಷ್ಟ್ರವು ಚಿಂತಿಸುವ ಅವಶ್ಯಕತೆ ಇದೆ.

೧ ಈ. ಆಧುನಿಕ ವಿದ್ಯೆಗಳು ಆದಿಭೌತಿಕವಾಗಿದ್ದು ಅವು ಅತ್ಯಂತ ಸೀಮಿತ ಮತ್ತು ಸಂಕುಚಿತ ದೃಷ್ಟಿಕೋನದ ಮೇಲಾಧಾರಿಸಿವೆ : ಶಿಕ್ಷಣವನ್ನು ನಿಶ್ಚಿತಗೊಳಿಸುವುದು ಮತ್ತು ಅದರಲ್ಲಿನ ಗುಣ-ದೋಷಗಳು ‘ನಮ್ಮ ಮನುಷ್ಯ ಜೀವನದ ಬಗ್ಗೆ ಇರುವ ನಮ್ಮ ದೃಷ್ಟಿಕೋನವು ಸಂಕುಚಿತವಾಗಿದೆಯೋ ಅಥವಾ ವ್ಯಾಪಕವಾಗಿದೆಯೋ ?’, ಇದರ ಮೇಲೆ ಅವಲಂಬಿಸಿರುತ್ತವೆ. ಸಂಕುಚಿತ ಮತ್ತು ಸೀಮಿತ ದೃಷ್ಟಿಕೋನವಿರುವುದರಿಂದ ಶಿಕ್ಷಣವು ಸಹ ಸಂಕುಚಿತ ಮತ್ತು ಸೀಮಿತವಾಗುತ್ತದೆ. ಆಧುನಿಕ ಸಮಾಜದ ಜೀವನದ ಬಗ್ಗೆ ಇರುವ ಮಾನ್ಯತೆ ಅಥವಾ ದೃಷ್ಟಿಕೋನ ಆಧುನಿಕ ಭೌತಿಕ ವಿದ್ಯೆಗಳಿಗೆ ಹಿರಿಮೆಯನ್ನು ನೀಡಿದೆ ಮತ್ತು ಭೌತಿಕ ಸ್ತರದಲ್ಲಿ ಅವುಗಳ ಸಂವರ್ಧನೆಯನ್ನು ಮಾಡಿದೆ. ಸಾಧಾರಣ ಆಧುನಿಕ ಪ್ರಚಲಿತ ಶಿಕ್ಷಣದ ಸಂಬಂಧವು ಕೇವಲ ವಿದ್ಯಾರ್ಥಿ ದೆಶೆಯವರೆಗಷ್ಟೇ ಸೀಮಿತವಾಗಿರುತ್ತದೆ. ಅನಂತರ ವಿವಿಧ ಉದ್ಯೋಗಗಳಲ್ಲಿ ಕೆಲವೊಮ್ಮೆ ಅವರಿಗೆ ಅನುಕೂಲವಾಗಿರುವ ವಿಶೇಷ ಅಧ್ಯಯನಕ್ರಮವನ್ನು (ಟ್ರೆನಿಂಗ್) ತಮ್ಮ ಕರ್ಮಚಾರಿಗಳಿಗೆ ನೀಡುವ ವ್ಯವಸ್ಥೆ ಇರುತ್ತದೆ. ಇವೆಲ್ಲ ವಿದ್ಯೆಗಳು ಭೌತಿಕವಾಗಿವೆ, ಆದಿಭೌತಿಕವಾಗಿವೆ, ಅಂದರೆ ಭೌತಿಕ ಪದಾರ್ಥಗಳಿಗೆ ಸಂಬಂಧಿಸಿವೆ. ಆಧುನಿಕ ಯುಗದಲ್ಲಿನ ಮಾನವಿ ಸಮಾಜವು ಈ ಭೌತಿಕ ವಿದ್ಯೆಗಳ ಶಿಕ್ಷಣದ ಕಡೆಗೆ ಹೆಚ್ಚು ಆಕರ್ಷಿತ ಮತ್ತು ಆಸಕ್ತಿಯನ್ನು ಹೊಂದಿದೆ. ಭೌತಿಕ ವಿದ್ಯೆಗಳ ಶಿಕ್ಷಣದಲ್ಲಿ ಹೆಚ್ಚು ದೋಷಗಳಿವೆ ಮತ್ತು ಇನ್ನೂ ಹೆಚ್ಚು ವಿಚಾರ ಮಾಡಿದರೆ, ಅವುಗಳಲ್ಲಿ ಗಂಭೀರ ದೋಷಗಳೂ ಇವೆ; ಆದರೆ ಈ ದೋಷಗಳನ್ನು ಹೇಗೆ ದೂರಗೊಳಿಸುವುದು ?’, ಈ ಕುರಿತು ಯೋಗ್ಯ ಉಪಾಯವನ್ನು ಹುಡುಕಲು ಆಧುನಿಕ ಸಮಾಜವು ಅಸಮರ್ಥವಾಗಿದೆ ಎಂಬುದು ಸಾಬೀತಾಗಿದೆ. ಆಧುನಿಕ ವಿದ್ಯೆಯು ಅತ್ಯಂತ ಸೀಮಿತ ಮತ್ತು ಸಂಕುಚಿತ ದೃಷ್ಟಿಕೋನದ ಮೇಲೆ ಆಧರಿಸಿರುವುದೇ ಇದಕ್ಕೆ ಕಾರಣವಾಗಿದೆ.

೧ ಉ. ಭೌತಿಕ ವಿದ್ಯೆಗಳಿಂದ ಭೋಗವಾದಿ ಮನುಷ್ಯನ ಸಂಸಾರದ ಇಚ್ಛೆಗಳು ಪೂರ್ಣವಾಗುವುದರಿಂದ ಅವನಿಗೆ ಉಚ್ಚ ಸ್ತರದ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಇಚ್ಛೆಯೇ ಉಳಿಯುವುದಿಲ್ಲ ಮತ್ತು ಉಚ್ಚ ಸ್ತರದ ಜ್ಞಾನವನ್ನು ಅರಿತುಕೊಳ್ಳುವುದು ಕಠಿಣವಾಗಿರುತ್ತದೆ : ಭೋಗವಾದಿ ಮನುಷ್ಯನು ಭೌತಿಕ ವಿದ್ಯೆಗಳಿಗಷ್ಟೇ ಸೀಮಿತವಾಗಿದ್ದು ಅದರಲ್ಲಿಯೇ ಆಸಕ್ತನಾಗಿದ್ದಾನೆ. ಆದುದರಿಂದ ಇತರ ವ್ಯಾಪಕ ದೃಷ್ಟಿಕೋನವನ್ನು ಅರಿತುಕೊಳ್ಳಲು ಅವನಿಗೆ ಆಸಕ್ತಿ ಇರುವುದಿಲ್ಲ ಮತ್ತು ವ್ಯಾಪಕ ದೃಷ್ಟಿಕೋನದ ಮೇಲೆ ಆಧರಿಸಿದ ವಿದ್ಯೆಯನ್ನು ಅರಿತುಕೊಳ್ಳಲು ಸಹ ಸ್ವಲ್ಪ ಕಠಿಣವಾಗಿದೆ. ಯಾವುದೇ ವ್ಯಕ್ತಿಗೆ ಕನಿಷ್ಠ ಶ್ರೇಣಿಯ (ಅಥವಾ ಇಯತ್ತೆಯ) ಸ್ವಲ್ಪ ಜ್ಞಾನ ದೊರಕಿದರೆ ಅವನಿಗೆ ಧನಸಂಪತ್ತನ್ನುಗಳಿಸಲು ಯಾವುದೇ ಅಡಚಣೆ ಬರದಿದ್ದರೆ ಮತ್ತು ಅವನ ಎಲ್ಲ ಸಾಂಸಾರಿಕ ಇಚ್ಛೆಗಳು ಪೂರ್ಣವಾಗುತ್ತಿದ್ದರೆ, ಅವನಿಗೆ ಉಚ್ಚ ಸ್ತರದ ಜ್ಞಾನವನ್ನು ಪ್ರಾಪ್ತಮಾಡಿಕೊಳ್ಳುವ ಇಚ್ಛೆಯೇ ಉಳಿಯುವುದಿಲ್ಲ ಮತ್ತು ಉಚ್ಚ ಸ್ತರದ ಜ್ಞಾನವನ್ನು ತಿಳಿದುಕೊಳ್ಳಲು ಸಹ ಅವನಿಗೆ ಕಠಿಣವಾಗುತ್ತದೆ. ಆದರೆ ಉಚ್ಚ ಸ್ತರದ ವಿದ್ಯೆಯಲ್ಲಿ ಕನಿಷ್ಠ ಸ್ತರದ ವಿದ್ಯೆಯಿಂದ ಪ್ರಾಪ್ತವಾಗದ, ಹಾಗೆಯೇ ಅನೇಕ ಪ್ರಶ್ನೆಗಳ ಉತ್ತರಗಳು ಪ್ರಾಪ್ತವಾಗದ ಅಥವಾ ಸಂದೇಹಗಳ ಸಮಾಧಾನ ಮಾಡುವ ಸಾಮಥ್ರ್ಯವಿರುತ್ತದೆ.

೧ ಊ. ಆಧುನಿಕ ಭೌತಿಕ ವಿದ್ಯೆಗಳ ನಿರ್ಮಾಣವು ಮನುಷ್ಯನ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸಲು ಇರುತ್ತವೆ : ಮನುಷ್ಯನ ನೈಸರ್ಗಿಕ ಅನುಭವವು ಆಧುನಿಕ ಭೌತಿಕ ಶಿಕ್ಷಣದ ಆಧಾರವಾಗಿವೆ. ಭೌತಿಕ ಸಂಸ್ಕೃತಿಗೆ, `ಆಹಾರ, ವಸ್ತ್ರ ಮತ್ತು ಆಶ್ರಯ ಇವು ಮನುಷ್ಯನ ಅನಿವಾರ್ಯಗಳಾಗಿವೆ’ ಎಂಬುದು ತಿಳಿಯುತ್ತದೆ. ‘ಮನುಷ್ಯನ ಆಹಾರದ ಪೂರೈಕೆ, ನಿದ್ರೆ (ವಿಶ್ರಾಂತಿ), ಭಯ ದಿಂದ ರಕ್ಷಣೆ ಸಿಗುವುದು ಮತ್ತು ಕಾಮವಾಸನೆಯನ್ನು ಪೂರೈಸಿ ಕೊಳ್ಳುವುದು’, ಇವು ಮನುಷ್ಯನ ಆವಶ್ಯಕತೆಯಾಗಿವೆ.’ ಈ ಆವಶ್ಯಕತೆಗಳನ್ನು ಪೂರ್ಣ ಮಾಡಿಕೊಳ್ಳಲು ಮತ್ತು ಅವುಗಳನ್ನು ದಿವ್ಯವಾಗಿಸಲು ಆಧುನಿಕ ಭೌತಿಕ ವಿದ್ಯೆಗಳು ನಿರ್ಮಾಣವಾಗಿವೆ. ಅದೇ ರೀತಿಯ ಶೋಧಕಾರ್ಯದ ಪ್ರಯತ್ನವಾಗಿವೆ ಮತ್ತು ಅದಕ್ಕೆ ಅನುಕೂಲವಾಗುವಂತಹ ಶಿಕ್ಷಣದ ಪ್ರಸಾರವಾಗಿದೆ.

೧ ಎ. ಭಾರತೀಯ ಸಂಸ್ಕೃತಿಯು ಮನುಷ್ಯನ ಜೀವನದ ವಾಸ್ತವಿಕೆಯ ಮೇಲೆ ಪ್ರಕಾಶವನ್ನು ಬೀರುತ್ತಿದೆ : ಭಾರತೀಯ ಸಂಸ್ಕೃತಿಯು ಈ ಭೌತಿಕ ಜೀವನದ ಮೇಲೆ ಪ್ರಶ್ನೆಚಿಹ್ನೆಯನ್ನು ಮೂಡಿಸುತ್ತದೆ. ಭಾರತೀಯ ಸಂಸ್ಕೃತಿಯು, ‘ಜೀವನದ ವಾಸ್ತವಿಕತೆ ಮತ್ತು ಪೂರ್ಣತೆಯು ಕೇವಲ ಮನುಷ್ಯನ ನೈಸರ್ಗಿಕ ಆವಶ್ಯಕತೆಗಳನ್ನು ಪೂರ್ಣಗೊಳಿಸುವುದರಲ್ಲಿಯೇ, ಹಾಗೆಯೇ ಭೌತಿಕ ಸುಖಸೌಲಭ್ಯಗಳ ಭೋಗಗಳಲ್ಲಿಯೇ ಇದೆಯೇ ? ಹಾಗಾದರೆ ಈ ಭೌತಿಕ ಜೀವನವು ಏಕೆ ಪಶುಗಳಂತೆ ಆಗುತ್ತಾ ಹೋಗುತ್ತಿದೆ ? ಈ ಭೌತಿಕ ಜೀವನಕ್ಕಾಗಿ ಸಂಘರ್ಷವು ಸಹ ಬಹಳಷ್ಟಿದೆ. ಆದರೂ ಮನುಷ್ಯನಿಗೆ ಸಮಾಧಾನವು ಏಕೆ ಸಿಗುವುದಿಲ್ಲ ? ನಮ್ಮ ಭೋಗವಾದಿ ವೃತ್ತಿ ಮತ್ತು ಇಚ್ಛೆಗಳು ಏಕೆ ಮುಗಿಯುವುದಿಲ್ಲ ? ಜೀವನದಲ್ಲಿ ಸುಖ-ದುಃಖಗಳು ಮೇಲಿಂದ ಮೇಲೆ ಏಕೆ ಬರುತ್ತಿರುತ್ತವೆ ? ನಮ್ಮ ದುಃಖವು ಏಕೆ ಕೊನೆಗೊಳ್ಳುವುದಿಲ್ಲ ? ಎಂದು ವಿಚಾರ ಮಾಡುತ್ತದೆ. ಮನುಷ್ಯನು ಆಸುರಿ ವೃತ್ತಿಯಿಂದ (ಲೋಭ, ಮೋಹ, ಕ್ರೋಧ, ಮತ್ಸರ, ದ್ವೇಷ ಇತ್ಯಾದಿಗಳಿಂದ) ಪೀಡಿತನಾಗಿದ್ದಾನೆ. ಅವನ ಬುದ್ಧಿಯು ದೋಷಯುಕ್ತ ಮತ್ತು ಸೀಮಿತವಾಗಿದೆ.

೧ ಏ. ಅಪೂರ್ಣ ಶಿಕ್ಷಣದಿಂದ ಮಾನವಿ ಸಮಸ್ಯೆಗಳು ಉದ್ಭವಿಸುವುದು : ‘ನಾನು ಯಾರು ? ನಾನು ಈ ಜಗತ್ತಿನಲ್ಲಿ ಏಕೆ  ಬಂದಿದ್ದೇನೆ ? ನಾನು ಯಾವ ಸೂಕ್ಷ್ಮ ಪ್ರಕ್ರಿಯೆಗಳ ಮೂಲಕ ಬಂದಿದ್ದೇನೆ ? ಇಲ್ಲಿ ಎಷ್ಟು ಸಮಯ ಇರಲಿದ್ದೇನೆ ?’, ಮುಂತಾದ ವಿಷಯಗಳು ಸ್ವತಃ ಮನುಷ್ಯನಿಗೇ ತಿಳಿದಿಲ್ಲ. ಆದುದರಿಂದ ಭಾರತೀಯ ಸಂಸ್ಕೃತಿಯು, ‘ಇಂತಹ ಬುದ್ಧಿಯ ಆಧಾರದಲ್ಲಿದ್ದು ‘ಜೀವನದ ಧ್ಯೇಯನಿಶ್ಚಯ, ಕರ್ತವ್ಯಕರ್ಮಗಳ ನಿಶ್ಚಯ, ಸಮಾಜದ ಕಾಯದೆಗಳನ್ನು ಮಾಡುವುದು’ ಮುಂತಾದವುಗಳನ್ನು ಯೋಗ್ಯ ರೀತಿಯಲ್ಲಿ ಖಚಿತಪಡಿಸಲು ಸಾಧ್ಯವಿದೆಯೇ ?’ ಎಂದು ಪ್ರಶ್ನೆಯನ್ನು ಕೇಳುತ್ತದೆ. ಒಂದು ವೇಳೆ ಇದರ ಉತ್ತರ ‘ಹೌದು’ ಎಂದಾಗಿದ್ದರೆ, ಈ ಅಮೂಲ್ಯ ಮಾನವಿ ಜೀವನದೊಂದಿಗೆ ಆಟವಾಡಿದಂತೆ ಆಗುವುದಿಲ್ಲವೇ ? ಶಿಕ್ಷಣದ ಪೂರ್ಣತೆಯನ್ನು ಪ್ರಾಪ್ತ ಮಾಡಿಕೊಳ್ಳಲು ಈ ಎಲ್ಲ ಪ್ರಶ್ನೆಗಳ ಉತ್ತರಗಳನ್ನು ಪಡೆದುಕೊಳ್ಳುವುದು ಆವಶ್ಯಕವಾಗಿದೆ. ಅಪೂರ್ಣ ಶಿಕ್ಷಣವು ಒಂದು ವೇಳೆ ಮಾನವಿ ಸಮಸ್ಯೆಗಳನ್ನು ನಿರ್ಮಿಸಿ ಅವುಗಳನ್ನು ಹೆಚ್ಚಿಸುತ್ತಿದ್ದರೆ, ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ.’

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಗಾಢ ಅಧ್ಯಯನಕಾರರು, ಠಾಣೆ, ಮಹಾರಾಷ್ಟ್ರ

(ಕೃಪೆ : ‘ಸರ್ವೋತ್ತಮ ಶಿಕ್ಷಣ ಯಾವುದು ?’)

 (ಮುಂದುವರಿಯುವುದು)