Peter Hurkos Predictions : ಭಾರತದಲ್ಲಿ ಮೂಲ ಸನಾತನ ಧರ್ಮದ ಶಂಖನಾದ ಆಗುತ್ತದೆ ಮತ್ತು ಆಧ್ಯಾತ್ಮದಿಂದ ಅದು ವಿಶ್ವಗುರುವಾಗುತ್ತದೆ!

ಕಳೆದ ಶತಮಾನದಲ್ಲಿ ಹಾಲೆಂಡ್‌ನ ಭವಿಷ್ಯಕಾರ ಪೀಟರ್ ಹರ್ಕೋಸ್ ಅವರು ಹೇಳಿದ ಭವಿಷ್ಯವಾಣಿ !

ನವದೆಹಲಿ – ಕಳೆದ ಶತಮಾನದಲ್ಲಿ ಹಾಲೆಂಡ್‌ನಲ್ಲಿ ವಾಸಿಸುತ್ತಿದ್ದ ಸುಪ್ರಸಿದ್ಧ ಭವಿಷ್ಯಕಾರ ಪೀಟರ್ ಹರ್ಕೋಸ್ ಅವರು ಅನೇಕ ಭವಿಷ್ಯಗಳನ್ನು ನುಡಿದರು ಮತ್ತು ಅವುಗಳಲ್ಲಿ ಅನೇಕ ಭವಿಷ್ಯಗಳು ಸತ್ಯವಾಗಿವೆ. ಅವರು ಭಾರತದ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಈ ಭವಿಷ್ಯಗಳು ನಿಜವಾಗಿವೆ. ಅವರು ಮತ್ತೊಂದು ಭವಿಷ್ಯ ನುಡಿದಿದ್ದು, ಅವರು, ಭಾರತದಲ್ಲಿ ಮೂಲ ಸನಾತನ ಧರ್ಮದ ಶಂಖನಾದ ಆಗುತ್ತದೆ. ಭಾರತ ಆಧ್ಯಾತ್ಮ ಮತ್ತು ಶಾಂತಿಯ ಕಾರಣದಿಂದ ವಿಶ್ವಗುರುವಾಗುತ್ತದೆ, ಎಂದು ಹೇಳಿದ್ದಾರೆ.

ಭಾರತದ ಬಗ್ಗೆ ಹರ್ಕೋಸ್ ಮಾಡಿದ ಭವಿಷ್ಯವಾಣಿಗಳು

1. ಭಾರತದಿಂದ ಆಧ್ಯಾತ್ಮಿಕತೆಯ ಅಲೆ ಏಳುತ್ತದೆ ಮತ್ತು ಅದು ಜಗತ್ತಿನಾದ್ಯಂತ ಹರಡುತ್ತದೆ.
2. ಭಾರತವು ಇಡೀ ವಿಶ್ವವನ್ನು ಪ್ರತಿನಿಧಿಸುತ್ತದೆ. ಭಾರತವು ಜಗತ್ತಿಗೆ ಮಾರ್ಗದರ್ಶನ ಮಾಡುತ್ತದೆ.
3. ಭಾರತದಲ್ಲಿನ ಆಧ್ಯಾತ್ಮಿಕ ವಾತಾವರಣ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಸಹಾಯವಾಗುತ್ತದೆ.

ಪೀಟರ್ ಹರ್ಕೋಸ್ ಅವರ ಪರಿಚಯ

ಪೀಟರ್ ಹರ್ಕೋಸ್ ಅವರು 21 ಮೇ 1911 ರಂದು ಹಾಲೆಂಡ್‌ನ ಡ್ರೋಡ್ರೆಕ್ಟ್ನಲ್ಲಿ ಜನಿಸಿದರು. ಯುವಕರಾಗಿದ್ದಾಗ ಹಡಗಿನಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಒಂದು ದಿನ ಅವರು 50 ಅಡಿ ಎತ್ತರದಿಂದ ಬಿದ್ದರು. ಅವರ ತಲೆಗೆ ಗಂಭೀರ ಗಾಯವಾಯಿತು. ಅಪಘಾತದ ನಂತರ ಅವರು 6 ದಿನ ‘ಕೋಮಾ’ದಲ್ಲಿದ್ದರು. ಈ ಅಪಘಾತದಿಂದ ಅವರಲ್ಲಿ ಅತೀಂದ್ರಿಯ ಜ್ಞಾನದ ಸಾಮರ್ಥ್ಯವು ವಿಕಸನಗೊಂಡಿತು. ಅವರು ವ್ಯಕ್ತಿಯ ಭೂತಕಾಲವನ್ನು ಹೇಳಲು ಪ್ರಾರಂಭಿಸಿದರು ಮತ್ತು ಭವಿಷ್ಯದ ಕೆಲವು ಘಟನೆಗಳನ್ನು ಸಹ ಹೇಳಿದರು. ಹರ್ಕೋಸ್ ಅವರು ಅನೇಕ ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪೊಲೀಸರಿಗೆ ಸಹಾಯ ಮಾಡಿದರು. ಅವರು ತಮ್ಮ ಜೀವನದ ಬಗ್ಗೆ ‘ದ ಸೈಕಿಕ್ ವರ್ಲ್ಡ್ ಆಫ್ ಪೀಟರ್ ಹರ್ಕೋಸ್’ ಎಂಬ ಪುಸ್ತಕವನ್ನು ಬರೆದರು. ಜೂನ್ 1, 1988 ರಂದು ಅಮೆರಿಕದ ವೆಸ್ಟ್ ಹಾಲಿವುಡ್, ಕ್ಯಾಲಿಫೋರ್ನಿಯಾದಲ್ಲಿ ಹರ್ಕೋಸ್ ನಿಧನರಾದರು.

ಸಂಪಾದಕೀಯ ನಿಲುವು

ಪೀಟರ್ ಹರ್ಕೋಸ್ ಅವರು ಇಂದು ಇಲ್ಲ ಇದು ಅವರ ಅದೃಷ್ಟವಾಗಿದೆ. ಇಲ್ಲದಿದ್ದರೆ ಕಾಂಗ್ರೆಸ್ಸಿಗರು ಮತ್ತು ಪ್ರಗತಿ(ಅಧೋ)ಪರರ ಗುಂಪು ಅವರನ್ನು ‘ಕಟ್ಟರ ಹಿಂದುತ್ವವಾದಿ’, ‘ಕೇಸರಿ ಭಯೋತ್ಪಾದಕ’, ‘ಅಂಧಭಕ್ತ’ ಎಂದು ನಾನಾ ರೀತಿಯಲ್ಲಿ ನಿಂದಿಸುತ್ತಿತ್ತು, ಇದು ಸತ್ಯ !