ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಪೂ. ಗೋಳವಲಕರ ಗುರೂಜಿ ಮತ್ತು ಸ್ವಾತಂತ್ರ್ಯವೀರ ಸಾವರಕರ ಅವರ ಪುಸ್ತಕಗಳ ಭಾಗಗಳನ್ನು ಕಲಿಸಲಾಗುವುದಿಲ್ಲ!

ಸಿಪಿಐ(ಎಂ) ಸರಕಾರದ ಒತ್ತಡದ ಪರಿಣಾಮ !

ಸಿಪಿಐ (ಎಂ) ಸರಕಾರದ ಹಿಂದೂದ್ವೇಷ ! ಕೇವಲ ದ್ವೇಷ ಭಾವನೆಯಿಂದ ರಾಷ್ಟ್ರಪುರುಷರ ವಿಚಾರಗಳನ್ನು ತಿರಸ್ಕರಿಸುವವರು ಎಂದಾದರೂ ಸೌಹಾರ್ದತೆ ತರಬಲ್ಲರೇನು? – ಸಂಪಾದಕರು 

ಕಣ್ಣೂರು (ಕೇರಳ) – ಸ್ನಾತಕೋತ್ತರ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳಿಗೆ ಮೂರನೇ ಸೆಮಿಸ್ಟರ್‍ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದ್ವಿತೀಯ ಸರಸಂಘಚಾಲಕ ಪೂ. ಗೋಳವಲಕರ ಗುರೂಜಿ ಮತ್ತು ಹಿಂದೂ ಮಹಾಸಭಾದ ನಾಯಕ ಸ್ವಾತಂತ್ರ್ಯವೀರ ಸಾವರಕರ ಅವರ ಪುಸ್ತಕಗಳ ಭಾಗವನ್ನು ಕಲಿಸಲಾಗುವುದಿಲ್ಲ, ಎಂದು ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿ ಗೋಪಿನಾಥ ರವೀಂದ್ರನ್ ಮಾಹಿತಿ ನೀಡಿದ್ದಾರೆ. ಮೂರನೇ ಸೆಮಿಸ್ಟರ್‍ನ ಪಠ್ಯಕ್ರಮದಲ್ಲಿ ಪೂ. ಗೋಳವಲಕರ ಗುರೂಜಿಯವರ ‘ಬಂಚ ಆಫ್ ಥಾಟ್ಸ್’ ಮತ್ತು ಸ್ವಾತಂತ್ರ್ಯವೀರ ಸಾವರಕರ ಇವರ ‘ಹಿಂದುತ್ವ : ಹು ಇಸ್ ಎ ಹಿಂದೂ ?’, ಈ ಪುಸ್ತಕದ ಆಯ್ದ ಭಾಗಗಳನ್ನು ಸೇರಿಸಲಾಗಿತ್ತು.

1. ಕುಲಪತಿ ರವೀಂದ್ರನ್ ಇವರು, ಪಠ್ಯಕ್ರಮವನ್ನು ಬದಲಾಯಿಸಿ ವಿದ್ಯಾರ್ಥಿಗಳಿಗೆ ಕಲಿಸಲಾಗುವುದು. ರಾಜ್ಯ ಸರಕಾರದಿಂದ ಸ್ಥಾಪಿಸಲಾದ 2 ಸದಸ್ಯರ ವಿಶೇಷ ಸಮಿತಿಯು ವಿಶ್ವವಿದ್ಯಾಲಯದಲ್ಲಿ ಪಠ್ಯಕ್ರಮವನ್ನು ಬದಲಿಸಲು ಸೂಚಿಸಿತ್ತು. ಈಗ ಈ ಬದಲಾವಣೆಯನ್ನು ಮಾಡಿ ಪಠ್ಯಕ್ರಮ ವಿವರಣೆ ಸಮಿತಿಗೆ ಕಳುಹಿಸಲಾಗುವುದು ಎಂದು ಹೇಳಿದರು.

2. ಕೆಲವು ವಿದ್ಯಾರ್ಥಿ ಸಂಘಟನೆಗಳು ಹೊಸ ಪಠ್ಯಕ್ರಮವನ್ನು ವಿರೋಧಿಸಿದ್ದವು. ಇದು ಕೇಸರೀಕರಣದ ಪ್ರಯತ್ನ ಎಂದು ಆರೋಪಿಸಲಾಗಿತ್ತು. (ಈ ವಿದ್ಯಾರ್ಥಿ ಸಂಘಟನೆ ಕಮ್ಯುನಿಸ್ಟರದ್ದಾಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ! – ಸಂಪಾದಕರು) ಇದರ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ‘ಯಾರು ದೇಶದ ಸ್ವಾತಂತ್ರ್ಯ ಹೋರಾಟದಿಂದ ದೂರವಿರಲು ಪ್ರಯತ್ನಿಸಿದರೋ, ಅಂತಹ ನಾಯಕ ಮತ್ತು ಅವರ ವಿಚಾರಗಳನ್ನು ಹಾಡಿಹೊಗಳುವುದಿಲ್ಲ’, ಎಂದು ಹೇಳಿದ್ದರು (ಸ್ವಾತಂತ್ರ್ಯವೀರ ಸಾವರಕರರು ತಮ್ಮ ಸಂಪೂರ್ಣ ಜೀವನವನ್ನು ರಾಷ್ಟ್ರಕಾರ್ಯಕ್ಕಾಗಿ ಮುಡಿಪಾಗಿಟ್ಟಿದ್ದರು ಮತ್ತು, ಪೂ. ಗೋಳವಲಕರ ಗುರೂಜಿ ಇವರೂ ಕೂಡ ರಾಷ್ಟ್ರದ ಉನ್ನತಿಗಾಗಿ ಕಾರ್ಯ ಮಾಡಿದ್ದರು. ಹೀಗಿರುವಾಗ ಇಂತಹ ಹೇಳಿಕೆಗಳನ್ನು ನೀಡುವವರು `ಸ್ವಾತಂತ್ರ್ಯದ ಚಳುವಳಿಯಲ್ಲಿ ಕಮ್ಯುನಿಸ್ಟರು ಯಾವ ಕೊಡುಗೆಯನ್ನು ನೀಡಿದ್ದಾರೆ ?’, ಎಂಬ ಪ್ರಶ್ನೆಗೆ ಉತ್ತರಿಸಬೇಕು ! – ಸಂಪಾದಕರು) ಆದ್ದರಿಂದ ಈ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

3. ಕಾಂಗ್ರೆಸ್ ನಾಯಕ ಶಶಿ ಥರೂರ್ ಇವರು ಕಮ್ಯುನಿಸ್ಟ್ ಸರಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಅವರು, “ಒಂದು ರಾಜಕೀಯ ಪಕ್ಷದ ರಾಜಕೀಯಕ್ಕಾಗಿ ಬೌದ್ಧಿಕ ಸ್ವಾತಂತ್ರ್ಯವನ್ನು ಬಲಿ ನೀಡಬಾರದು. ನಾನು ನನ್ನ ಪುಸ್ತಕದಲ್ಲಿ ಸ್ವಾತಂತ್ರ್ಯವೀರ ಸಾವರಕರ ಮತ್ತು ಪೂ. ಗೋಳವಲಕರ ಇವರ ಬಗ್ಗೆ ಮಾಹಿತಿ ಮತ್ತು ಅದರ ಖಂಡನೆಯನ್ನೂ ನೀಡಿದ್ದೇನೆ.”ಎಂದಿದ್ದಾರೆ. ಕೆಲವು ದಿನಗಳ ಹಿಂದೆ, ಥರೂರರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ, ನಾವು ಸಾವರಕರ ಮತ್ತು ಗೋಳವಲಕರ ಅವರ ವಿಚಾರಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ, ಅದನ್ನು ಹೇಗೆ ಖಂಡಿಸಬಹುದು ? ಎಂದು ಹೇಳಿದ್ದರು. (ಥರೂರರಂತಹ ಹಿಂದೂ ದ್ವೇಷಿಗಳನ್ನು ಎದುರಿಸಲು ಹಿಂದೂ ಧರ್ಮ ಪ್ರೇಮಿಗಳಲ್ಲಿ ಸೈದ್ಧಾಂತಿಕ ಸ್ಪಷ್ಟತೆಯು ಮೂಡುವ ಅವಶ್ಯಕತೆಯಿದೆ. ಹಿಂದೂ ಧರ್ಮದ ಜಾಜ್ವಲ್ಯ ವಿಚಾರಗಳಿಂದಲೇ ಥರೂರ ಮತ್ತು ಅವರ ಜಾತ್ಯತೀತವಾದದಿಂದ ಹೊರಹೊಮ್ಮಿರುವ ವೈಚಾರಿಕ ಭಯೋತ್ಪಾದನೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು)