ಕೇರಳದಲ್ಲಿ ಮುಸಲ್ಮಾನ ಹಾಗೂ ಕ್ರೈಸ್ತರಿಗೆ ನೀಡಿದ ಅಲ್ಪಸಂಖ್ಯಾತ ಸ್ಥಾನದ ಬಗ್ಗೆ ಮರುಪರಿಶೀಲಿಸಬೇಕು ! – ಕೇರಳ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ

ಕೇರಳದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತರಿಗೆ ನೀಡಲಾಗಿರುವ ‘ಅಲ್ಪಸಂಖ್ಯಾತ’ ಸ್ಥಾನಮಾನದ ಬಗ್ಗೆ ಮರುಪರಿಶೀಲಿಸುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ಆದೇಶ ನೀಡಬೇಕು, ಎಂದು ಅರ್ಜಿಯೊಂದನ್ನು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಪಠ್ಯಪುಸ್ತಕದಲ್ಲಿ ತಪ್ಪಾದ ಇತಿಹಾಸವನ್ನು ಬದಲಾಯಿಸುವ ಸಂಸದೀಯ ಸಮಿತಿಯು ಈ ಬಗೆಗಿನ ಸೂಚನೆಯನ್ನು ಕೋರುವ ದಿನಾಂಕವನ್ನು ಜುಲೈ ೧೫ ರ ತನಕ ಮುಂದುವರಿಸಿದೆ !

ಈ ಸಮಿತಿಯ ಅಧ್ಯಕ್ಷ ಮತ್ತು ಶಾಸಕ ವಿನಯ ಸಹಸ್ರಬುದ್ಧೆ ಇವರು ಮಾತನಾಡಿ, ಭಾರತೀಯ ಶಾಲೆಗಳ ಪಠ್ಯಪುಸ್ತಕಗಳಲ್ಲಿ ಮೊದಲು ದೇಶಕ್ಕೆ ಸ್ಥಾನವನ್ನು ನೀಡಬೇಕು. ೧೯೭೫ ರಲ್ಲಿ ತುರ್ತು ಪರಿಸ್ಥಿತಿ ಮತ್ತು ೧೯೯೮ ರಲ್ಲಿಯ ಪೋಖರಣ ಪರಮಾಣು ಪರೀಕ್ಷಣೆಗೂ ಪಠ್ಯ ಪುಸ್ತಕದಲ್ಲಿ ಸ್ಥಾನ ನೀಡಬೇಕು.

ಪದವಿಗಾಗಿ ಆಂಗ್ಲ ಭಾಷೆಯನ್ನು ಕಡ್ಡಾಯ ಮಾಡಿದ ಆಂಧ್ರಪ್ರದೇಶ ಸರಕಾರ!

ರಶಿಯಾ, ಜರ್ಮನಿ, ಫ್ರಾನ್ಸ್, ಜಪಾನ ಇತ್ಯಾದಿ ಅಭಿವೃದ್ಧಿಹೊಂದಿದ ದೇಶಗಳು ಹಾಗೂ ಚೀನಾ ಕೂಡ ಮಾತೃಭಾಷೆಯಿಂದಲೇ ಪ್ರಗತಿ ಸಾಧಿಸಿರುವಾಗ ಭಾರತಿಯರಿಗೆ ಸ್ವಾತಂತ್ರ್ಯ ಸಿಕ್ಕಿ ೭೪ ವರ್ಷಗಳ ನಂತರವೂ ಆಂಗ್ಲ ಭಾಷೆಯ ಗುಲಾಮರಾಗಬೇಕಾಗುತ್ತಿದೆ, ಇದು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರಿಗೆ ನಾಚಿಕೆಯ ಸಂಗತಿಯಾಗಿದೆ !

ಕಾಶಿ ಹಿಂದೂ ವಿಶ್ವವಿದ್ಯಾಲಯದ ಅಲೋಪತಿಯ ವೈದ್ಯರಿಗೆ ಆಯುರ್ವೇದದ, ಆಯುರ್ವೇದದ ವೈದ್ಯರಿಗೆ ಅಲೋಪತಿ ಶಿಕ್ಷಣವನ್ನು ನೀಡಲಾಗುವುದು !

ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಬಿ.ಎಸ್. ವೈದ್ಯರು ಇನ್ನು ಆಯುರ್ವೇದ ಹಾಗೂ ಬಿ.ಎ.ಎಂ.ಎಸ್. ವೈದ್ಯರು ಅಲೋಪತಿಯನ್ನು ಕಲಿಯಬಹುದು. ಅದಕ್ಕಾಗಿ ವಿಶ್ವವಿದ್ಯಾಲಯವು ಒಂದು ವರ್ಷದ ‘ಹೋಲಿಸ್ಟಿಕ್ ಮೆಡಿಸಿನ್ ಪಿಜಿ ಡಿಪ್ಲೊಮಾ ಕೋರ್ಸ್’ (ಸಮಗ್ರ ಔಷಧಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್) ಅನ್ನು ಪ್ರಾರಂಭಿಸಲಿದೆ.