Sambhal Violence Jaffar Ali Arrested : ಸಂಭಲ್ (ಉತ್ತರಪ್ರದೇಶ) ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಸೀದಿಯ ಮುಖ್ಯಸ್ಥನ ಬಂಧನ

ಸಂಭಲ್ (ಉತ್ತರಪ್ರದೇಶ) – 4 ತಿಂಗಳ ಹಿಂದೆ ಮುಸ್ಲಿಮರು ನಡೆಸಿದ ದಂಗೆಗೆ ಸಂಬಂಧಿಸಿದಂತೆ, ಪೊಲೀಸರು ಮಾರ್ಚ್ 23 ರ ಸಂಜೆ ಹಿಂದಿನ ಶ್ರೀ ಹರಿಹರ ದೇವಸ್ಥಾನವಾಗಿದ್ದ ಜಾಮಿಯಾ ಮಸೀದಿಯ ಮುಖ್ಯಸ್ಥ ಜಫರ್ ಅಲಿಯನ್ನು ಬಂಧಿಸಿದ್ದಾರೆ. ಮಧ್ಯಾಹ್ನ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. 4 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಆತನನ್ನು ಬಂಧಿಸಲಾಯಿತು. ನವೆಂಬರ್ 24, 2024 ರಂದು ಮಸೀದಿಯ ಸಮೀಕ್ಷೆಯ ಬಗ್ಗೆ ಮುಸ್ಲಿಮರು ಇಲ್ಲಿ ದಂಗೆ ಎಬ್ಬಿಸಿದ್ದರು. ಇದರಲ್ಲಿ 5 ಮಂದಿ ಮುಸ್ಲಿಮರು ಸಾವನ್ನಪ್ಪಿದ್ದರು.

1. ಪೊಲೀಸರು ಜಫರ್ ಅಲಿಯನ್ನು ವಿಚಾರಣೆಗೆ ಕರೆದೊಯ್ಯುತ್ತಿದ್ದಾಗ, “ಈ ಗಲಭೆಯಲ್ಲಿ ಮೃತಪಟ್ಟವರೆಲ್ಲರೂ ಪೊಲೀಸ ಮತ್ತು ಆಡಳಿತದಿಂದ ಹತ್ಯೆಯಾಗಿದ್ದಾರೆ. ಪೊಲೀಸರ ಬಣ್ಣ ಬಯಲು ಮಾಡಿದ್ದರಿಂದ ನನ್ನನ್ನು ಸಿಲುಕಿಸಲಾಗಿದೆ” ಎಂದು ಪತ್ರಕರ್ತರಿಗೆ ಹೇಳಲು ಪ್ರಾರಂಭಿಸಿದನು. (ಈ ಗಲಭೆಯಲ್ಲಿ ಮೃತಪಟ್ಟ 5 ಮಂದಿ ಮುಸ್ಲಿಮರು ಪೊಲೀಸ್ ಗುಂಡಿನಿಂದಲ್ಲ, ಮುಸ್ಲಿಂ ಗಲಭೆಕೋರರ ಗುಂಡಿನಿಂದ ಸಾವನ್ನಪ್ಪಿದ್ದಾರೆ. ಹೀಗಿರುವಾಗ ಗಲಭೆಕೋರ ಮುಸ್ಲಿಮರನ್ನು ಟೀಕಿಸುವ ಬದಲು ಪೊಲೀಸರನ್ನು ಬಲಿಪಶು ಮಾಡುವ ಜಫರ್ ಅಲಿಯನ್ನು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು! – ಸಂಪಾದಕರು)

2. ವಿವಾದಿತ ಸ್ಥಳದ ಸಮೀಕ್ಷೆ ನಡೆಸುತ್ತಿದ್ದಾಗ ನವೆಂಬರ್ 24, 2024 ರಂದು ಜನರು ಕಲ್ಲು ತೂರಾಟ ಮತ್ತು ಗುಂಡಿನ ದಾಳಿ ನಡೆಸಿದ್ದರು. ಈ ಸಂಬಂಧಿತ ಪ್ರಕರಣ ದಾಖಲಿಸಲಾಗಿದೆ. ಅದೇ ಪ್ರಕರಣದಲ್ಲಿ ಜಫರ್ ಅಲಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕುಮಾರ್ ಬಿಷ್ಣೋಯ್ ಹೇಳಿದರು.