ಕೇಂದ್ರ ಸರಕಾರದ ಶ್ಲಾಘನೀಯ ನಿರ್ಧಾರ !
ಇನ್ನು ಪ್ರತಿಯೊಂದು ರಾಜ್ಯದಲ್ಲಿನ ಪಠ್ಯಕ್ರಮದಲ್ಲಿ ಈ ರೀತಿಯ ಬದಲಾವಣೆಯನ್ನು ಮಾಡಲು ಬಿಜೆಪಿ ಸರಕಾರ ಇರುವ ರಾಜ್ಯಗಳು ಪ್ರಯತ್ನಿಸಬೇಕು, ಹಿಂದೂಗಳಿಗೆ ಅನಿಸುತ್ತದೆ !
ನವ ದೆಹಲಿ – ಇತಿಹಾಸದ ಪಠ್ಯಕ್ರಮದ ಹೊಸ ನೀಲನಕ್ಷೆಯನ್ನು ವಿದ್ಯಾಪೀಠ ಅನುದಾನ ಆಯೋಗ ಅಂದರೆ ‘ಯು.ಜಿ.ಸಿ.’ಯು ಸಿದ್ಧಪಡಿಸಿದೆ. ಇದರಲ್ಲಿ ಭಾರತದ ಮೇಲೆ ದಾಳಿ ಮಾಡುದ ಹಾಗೂ ಅಲ್ಲಿಯ ಅನೇಕ ವಾಸ್ತುಗಳನ್ನು ಧ್ವಂಸ ಮಾಡಿದ ಮುಸಲ್ಮಾನ ಆಕ್ರಮಣಕಾರರ ಬದಲು ಭಾರತೀಯ ರಾಜ್ಯಕರ್ತರ ಕೆಲಸ ಹಾಗೂ ಅವರ ಗೌರವಶಾಲಿ ಇತಿಹಾಸದ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ. ‘ಹಿಸ್ಟ್ರೀ ಆಫ್ ಇಂಡಿಯಾ(ವರ್ಷ ೧೨೦೬ ರಿಂದ ೧೭೦೭)’ ಅಡಿಯಲ್ಲಿ ಹೇಳಲಾಗಿರುವ ಇತಿಹಾಸಗಳಲ್ಲಿ ಇನ್ನು ಮೊಗಲರ ವಿರುದ್ಧ ಹೋರಾಡಿದ ಮಹಾರಾಣಾ ಪ್ರತಾಪ ಮತ್ತು ಹೆಮು ವಿಕ್ರಮಾದಿತ್ಯ ಈ ಹಿಂದೂ ರಾಜರ ಪರಾಕ್ರಮದ ಬಗ್ಗೆ ಬೆಳಕುಚೆಲ್ಲಲಿದೆ.
ಸೂತ್ರಗಳು ನೀಡಿದ ಮಾಹಿತಿಯ ಪ್ರಕಾರ ‘ಐಡಿಯಾ ಆಫ್ ಭಾರತ’ನಲ್ಲಿ ಭಾರತದಲ್ಲಿನ ರಾಜಕಿಯ ಅಂಶಗಳ ಬದಲಾಗಿ ಹೊಸದಾದ ಪಠ್ಯಕ್ರಮದಲ್ಲಿ ಧಾರ್ಮಿಕ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಲಾಗಿದೆ. ‘ವಸುಧೈವ ಕುಟುಂಬಕಮ್’ ಎಂಬ ಸಂಕಲ್ಪನೆಗನುಸಾರ ಹೊಸ ಪ್ರಸ್ತಾಪಿತ ಪಠ್ಯಕ್ರಮವಿರಲಿದೆ. ಪದವಿಪೂರ್ವ ವಿದ್ಯಾರ್ಥಿಗಳಿಗೆ ಧರ್ಮದ ಬಗ್ಗೆ ಜ್ಞಾನ ನೀಡಲು ಪ್ರಯತ್ನಿಸಲಾಗುವುದು. ಪ್ರಾಚೀನ ಭಾರತದಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನೂ ಈ ಪಠ್ಯಕ್ರಮದಲ್ಲಿ ಸೇರಿಸುವ ಸಾಧ್ಯತೆಗಳಿವೆ. ‘ವೈದಿಕ ಕಾಲದಲ್ಲಿ ಭಾರತ ಹೇಗಿತ್ತು ?’ ಅದೇ ರೀತಿ ವೇದ ಮತ್ತು ಉಪನಿಷತ್ತು ಇವುಗಳ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡುವ ದೃಷ್ಟಿಯಿಂದ ಪಠ್ಯಕ್ರಮದಲ್ಲಿ ಈ ಬದಲಾವಣೆ ಮಾಡಲಾಗುವುದು.
‘ಇತಿಹಾಸಕ್ಕೆ ಧಾರ್ಮಿಕ ಮತ್ತು ಜಾತಿಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ !’ (ಅಂತೆ) – ಕಾಂಗ್ರೆಸ್‍ನ ವಕ್ತಾರ ಸಚಿನ ಸಾವಂತ ಇವರ ಅಸಂಬದ್ಧ ಟೀಕೆ
ಮೊಗಲರು, ಟಿಪ್ಪು ಸುಲ್ತಾನ ಇವರ ಬಗ್ಗೆ ಪ್ರೀತಿ ಇರುವಂತಹ ಕಾಂಗ್ರೆಸ್‍ಗೆ ಹಿಂದೂ ರಾಜರ ಮತ್ತು ಹಿಂದೂ ಧರ್ಮದ ಇತಿಹಾಸವನ್ನು ಕಲಿಸುವುದು ತಪ್ಪು ಎಂದೇ ಅನಿಸುತ್ತದೆ !
ಕಾಂಗ್ರೆಸ್ ವಕ್ತಾರ ಸಚಿನ ಸಾವಂತ ಇವರು ಈ ಬಗ್ಗೆ ಟ್ವೀಟ್ ಮಾಡುತ್ತಾ, ಇತಿಹಾಸವನ್ನು ಧಾರ್ಮಿಕ ಮತ್ತು ಜಾತಿಯ ದೃಷ್ಟಿಕೋನದಿಂದ ನೋಡುವ ಮೋದಿ ಸರಕಾರವು ಭಾರತೀಯರಿಗೆ ಎಂದೂ ತುಂಬಲಾರದ ಹಾನಿ ಮಾಡುತ್ತಿದ್ದಾರೆ. ರಾ.ಸ್ವಂ. ಸಂಘದ ಸಿದ್ಧಾಂತದಿಂದ ಶಿಕ್ಷಣಕ್ಷೇತ್ರದಲ್ಲಿ ರಾಜಕಿಯ ಲಾಭಕ್ಕಾಗಿ ವಿಕೃತಿಕರಣ ಮಾಡುವ ವಿಧಾನವು ಮುಂದಿನ ಪೀಳಿಗೆಗೆ ಮಾರಕವಾಗಿದೆ. ಕಾಂಗ್ರೆಸ್ ದೇಶವನ್ನು ನಿರ್ಮಿಸಿದೆ, ಸಹಿಷ್ಣು ವೈಜ್ಞಾನಿಕ ದೃಷ್ಟಿಕೋನ ನೀಡಿದೆ. ಬಿಜೆಪಿಯು ದೇಶದ ಘನತೆಯನ್ನು ಹಾಳು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.