ನೆದರಲ್ಯಾಂಡ್ಸ್ ಸಂಸದ ಗೀರ್ಟ್ ವಿಲ್ಡರ್ಸ್ ಅವರ ಆರೋಪ
ಆಮಸ್ಟರಡ್ಯಾಮ್ (ನೆದರಲ್ಯಾಂಡ್ಸ್) – ಒಂದು ಮುಸ್ಲಿಂ ಭಯೋತ್ಪಾದಕ ದೇಶವು ಹಿಂದೂ, ಕ್ರಿಶ್ಚಿಯನ್ ಮತ್ತು ಇಸ್ಲಾಂನ ತಥಾಕಥಿತ ವಿಡಂಬನೆ ಮಾಡುವವರ ವಿರುದ್ಧ ಭಯೋತ್ಪಾದನೆ ಹರಡುತ್ತದೆ. ಮಹಮ್ಮದರ (ಪೈಗಂಬರ) ಹೆಸರಿನಲ್ಲಿ ಫತ್ವಾ ಹೊರಡಿಸುತ್ತದೆ. ಭ್ರಷ್ಟ ಸರಕಾರದ ಮೂಲಕ ನನ್ನನ್ನು ಕೊಲ್ಲಲು ಪ್ರಯತ್ನಿಸಿದ ಮೌಲ್ವಿಗಳನ್ನು ಬಂಧಿಸಲು ಸಹ ಯತ್ನಿಸದ ದೇಶವೆಂದರೆ ಪಾಕಿಸ್ತಾನ, ಎಂದು ಇಸ್ಲಾಂನ ಕಟ್ಟಾ ವಿರೋಧಿ ಮತ್ತು ನೆದರ್ಲ್ಯಾಂಡ್ಸ್ ನ ‘ಪಾರ್ಟಿ ಫಾರ್ ಫ್ರೀಡಮ್’ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸಂಸದ ಗೀರ್ಟ್ ವಿಲ್ಡರ್ಸ್ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.