ನವದೆಹಲಿ- `ಬಿ.ಎಸ್.ಎನ್.ಎಲ್.’ ನ 4 ಜಿ ನೆಟ್ವರ್ಕ್ ಅನ್ನು ಜೂನ್‌ನಿಂದ 5 ಜಿ ಅಪ್‌ಗ್ರೇಡ್ ಮಾಡಲಾಗುವುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಬಿ.ಎಸ್.ಎನ್.ಎಲ್. ಗೆ 5 ಜಿ ನೆಟ್ವರ್ಕ್ ಸೇವೆಗಳ ಕೊರತೆಯಿಂದಾಗಿ ಖಾಸಗಿ ದೂರಸಂಪರ್ಕ ಸಂಸ್ಥೆಗಳೊಂದಿಗೆ ಸ್ಪರ್ಧಿಸುವುದು ಕಷ್ಟಕರವಾಗುತ್ತಿದೆ. ಪ್ರತಿಯೊಂದು ದೂರಸಂಪರ್ಕ ಸಂಸ್ಥೆಯು ತನ್ನ ಜಾಲವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ. ಈ ಸ್ಪರ್ಧೆಯಲ್ಲಿ ಈಗ ಬಿ.ಎಸ್.ಎನ್.ಎಲ್ ಕೂಡ ವೇಗ ಪಡೆದುಕೊಂಡಿದೆ. ಬಿಎಸ್ಎನ್ಎಲ್ ತನ್ನ 4ಜಿ ನೆಟ್ವರ್ಕ್ ಗಾಗಿ ಸ್ವದೇಶಿ ತಂತ್ರಜ್ಞಾನವನ್ನು ಬಳಸಿದೆ.
1. ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿ, ಭಾರತವು ತನ್ನದೇ ಆದ 4 ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ವಿಶ್ವದ ಐದು ದೇಶಗಳಲ್ಲಿ ಒಂದಾಗಿದೆ. ಈ ಸಾಮರ್ಥ್ಯವನ್ನು 5 ಜಿ ಗೆ ವಿಸ್ತರಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಹೇಳಿದ್ದಾರೆ.
2. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬಿ.ಎಸ್.ಎನ್.ಎಲ್. ಸುಮಾರು 262 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಸುಮಾರು 17 ವರ್ಷಗಳ ನಂತರ, ಬಿಎಸ್ಎನ್ಎಲ್ ತ್ರೈಮಾಸಿಕ ಲಾಭ ಗಳಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ಬಿಎಸ್ಎನ್ಎಲ್ ಕೆಲವು ಹೊಸ ಸೇವೆಗಳನ್ನು ಪ್ರಾರಂಭಿಸಿದೆ.