ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ

(೮೭ ವರ್ಷ) ‘ಐ.ಐ.ಟಿ. ಮುಂಬಯಿಯಲ್ಲಿ ಏಯರೋಸ್ಪೇಸ್ ಇಂಜಿನೀಯರಿಂಗ್‌ನಲ್ಲಿ ಪಿ.ಎಚ್.ಡಿ. ಪಡೆದು ಪ್ರಾಧ್ಯಾಪಕರೆಂದು ಕಾರ್ಯನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯದಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ? ಈ ಗ್ರಂಥದಲ್ಲಿನ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಕನ್ನಡ ಸನಾತನ ಪ್ರಭಾತದ ೨೨/೪೯ ರಲ್ಲಿ ಪ್ರಕಟಿಸಿದ್ದ ಲೇಖನದಲ್ಲಿ ‘ಭಾರತೀಯ ಸಂಸ್ಕೃತಿ ಇದು ಸರ್ವೋತ್ತಮ ಶಿಕ್ಷಣದ ಆಧಾರಸ್ತಂಭವಾಗಿದ್ದು, ಭಾರತೀಯ ಸಂಸ್ಕೃತಿಯು ಮನುಷ್ಯ ಜೀವನದ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲುತ್ತಿದೆ, ಅರ್ಧಮಟ್ಟದ ಶಿಕ್ಷಣದಿಂದ ಮಾನವಿ ಸಮಸ್ಯೆ ನಿರ್ಮಾಣವಾಗುವುದು ಎನ್ನುವ ವಿಷಯದ ಮಾಹಿತಿಯನ್ನು ಓದಿದೆವು.  

 (ಭಾಗ ೨)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/48182.html

ವಿಷಯ ಪ್ರವೇಶ

೧ ಓ. ಮನುಷ್ಯನು ನಿರ್ಧರಿಸಿದ ಧ್ಯೇಯವನ್ನು ಪ್ರಾಪ್ತಿ ಮಾಡಿಕೊಡುವ ಶಿಕ್ಷಣವೇ ಸರ್ವೋತ್ತಮವಾಗಿರುತ್ತದೆ : ಮನುಷ್ಯನು ನಿರ್ಧರಿಸಿರುವ ಧ್ಯೇಯವನ್ನು ಕೌಶಲ್ಯದಿಂದ ಪ್ರಾಪ್ತಿ ಮಾಡಿಕೊಡಲು ಸಾಧನವಾಗುವ ಶಿಕ್ಷಣವನ್ನೇ ಸಂಪೂರ್ಣ ಹಾಗೂ ಸರ್ವೋತ್ತಮವೆಂದು ಹೇಳಬಹುದು. ‘ಮನುಷ್ಯ ತಾನು ಯಾರು ? ಅವನು ಯಾವುದಕ್ಕಾಗಿ ಇದ್ದಾನೆ ? ತಾನಿರುವ ಜಗತ್ತು ಎಂದರೇನು ಹಾಗೂ ಅದು ಏಕೆ ತಯಾರಾಗಿದೆ ?, ಇವುಗಳನ್ನು ಅವನು ಎಲ್ಲಿಯವರೆಗೆ ತಿಳಿದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಅವನಿಗೆ ಯೋಗ್ಯವಾದ ಧ್ಯೇಯವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ ಹಾಗೂ ಆ ಧ್ಯೇಯವನ್ನು ಪ್ರಾಪ್ತಿ ಮಾಡಿಕೊಡುವ ಶಿಕ್ಷಣವನ್ನು ಪಡೆಯಲು ಪ್ರಯತ್ನಿಸುವುದು ಇನ್ನೂ ಕಠಿಣವಾಗುತ್ತದೆ, ಉದಾ. ಯಾವುದಾದರೂ ಔಷಧವನ್ನು ಉಪಚಾರಕ್ಕಾಗಿ ತಯಾರಿಸುವಾಗ ಆ ಔಷಧದ ಸ್ವರೂಪ ಮತ್ತು ಗುಣವನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಅದರೊಂದಿಗೆ ಔಷಧಯಿರುವಲ್ಲಿ (ಮನುಷ್ಯನ ಶರೀರದಲ್ಲಿ ಅಥವಾ ಬೇರೆ ಎಲ್ಲಿಯಾದರೂ), ಅಲ್ಲಿನ ವಾತಾವರಣದ ಪರಸ್ಪರ (ಅಂದರೆ ಔಷಧ ಮತ್ತು ವಾತಾವರಣ ಇವುಗಳ) ಪ್ರಭಾವ ಹೇಗಿರಬಹುದು ? ಹೀಗೆ ಇವೆರಡೂ ಪ್ರಕಾರದ ವಾಸ್ತವಿಕತೆಯ ಯೋಗ್ಯ ಜ್ಞಾನವಿರುವುದು ಆವಶ್ಯಕವಾಗಿದೆ; ಏಕೆಂದರೆ ಅದರ ಜ್ಞಾನವಿಲ್ಲದೆ ಔಷಧವನ್ನು ಉಪಯೋಗಿಸುವುದು ಕೂಡ ಹಾನಿಕರವಾಗಬಹುದು, ಎಂಬುದನ್ನು ತಿಳಿದುಕೊಳ್ಳುವುದು ಕೂಡ ಅವಶ್ಯಕವಾಗಿದೆ.

೧ ಔ. ಮನುಷ್ಯರೂಪಿ ಉತ್ಪಾದನೆಯು ಯೋಗ್ಯ ರೀತಿಯಲ್ಲಿ ಉಪಯೋಗವಾಗುವ ಅವಶ್ಯಕತೆಯಿದೆ : ಜಗತ್ತಿನ ಯಾವುದೇ ಲೌಕಿಕ ಉತ್ಪಾದನೆ, ಉದಾ. ‘ಔಷಧಗಳು, ಉಪಕರಣಗಳು, ಯಂತ್ರ, ಇತ್ಯಾದಿಗಳನ್ನು ಹೇಗೆ ಉಪಯೋಗಿಸಬೇಕು ?, ಎನ್ನುವ ವಿಷಯದಲ್ಲಿ ಉತ್ಪಾದಕರು ಡಬ್ಬಿಯ ಮೇಲೆ, ಕಾಗದದಲ್ಲಿ ಅಥವಾ ಪುಸ್ತಕದಲ್ಲಿ ಸೂಚನೆಯನ್ನು ಬರೆಯುತ್ತಾರೆ. ಅದರಿಂದ ಮನುಷ್ಯ ಆ ಉತ್ಪಾದನೆಯ ಸಂಪೂರ್ಣ ಲಾಭ ಪಡೆಯಬಹುದು. ಅದೇ ರೀತಿ ಮನುಷ್ಯ ಕೂಡ ಈ ಜಗತ್ತಿನ ಒಂದು ಉತ್ಪಾದನೆಯೇ ಆಗಿದ್ದಾನೆ. ಆದ್ದರಿಂದ ಮನುಷ್ಯನು ಮನುಷ್ಯ ರೂಪಿ ಉತ್ಪಾದನೆಯನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವಂತಹ ಕೃತಿಯ ಬಗ್ಗೆ ಎಲ್ಲಿ ತೋರಿಸಲಾಗಿದೆ ? ಮನುಷ್ಯ ಸ್ವತಃ ಈ ವಿಷಯದಲ್ಲಿ ಯೋಗ್ಯವಾದ ನಿರ್ಣಯ ತೆಗೆದುಕೊಳ್ಳಲು ಸಕ್ಷಮವಾಗಿದ್ದಾನೆಯೇ ? ಎಂಬುದುನ್ನು ವಿಚಾರ ಮಾಡಬೇಕು.

೧ ಅಂ. ‘ಅನೇಕ ಅವ್ಯಕ್ತ ಘಟಕಗಳ ಮಿಶ್ರಣಗಳಿಂದ ತಯಾರಿಸಿದ ವಸ್ತುವಿನ ಎಲ್ಲಕ್ಕಿಂತ ಮಹತ್ವದ ಘಟಕ ಯಾವುದು ?, ಎಂಬುದನ್ನು ಗುರುತಿಸುವುದು ಕಠಿಣವಾಗಿರುತ್ತದೆ ಹಾಗೂ ಹಾಗೆ ‘ಮನುಷ್ಯನ ಶರೀರದಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರಮುಖ ಘಟಕ ಯಾವುದು ?, ಎಂದು ಹೇಳುವುದೂ ಕಠಿಣವಾಗುತ್ತದೆ : ‘ಮನುಷ್ಯ ಎಂದರೇನು ?, ಎನ್ನುವ ಗಂಭೀರವಾದ ಪ್ರಶ್ನೆಯ ಉತ್ತರದಲ್ಲಿ ಶಿಕ್ಷಣದೊಂದಿಗೆ ಗರಿಷ್ಠ ಹಾಗೂ ಪ್ರತ್ಯಕ್ಷ ಸಂಬಂಧವಿರುವ ವಿಷಯ ಸಮಾವೇಶವಿದೆ. ಶಾಸ್ತ್ರದಲ್ಲಿಯೂ ಈ ಪ್ರಶ್ನೆಯನ್ನು ತುಂಬಾ ಸಲ ಕೇಳಲಾಗುತ್ತದೆ. ಆದ್ದರಿಂದ ಈ ಪ್ರಶ್ನೆಗಳ ತಾತ್ಪರ್ಯ ಮತ್ತು ಉತ್ತರವನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಯಾವುದೇ ವಸ್ತುವನ್ನು ಅನೇಕ ಪದಾರ್ಥಗಳ ಮಿಶ್ರಣದಿಂದ ತಯಾರಿಸಿದ್ದಲ್ಲಿ, ಅದರಲ್ಲಿ ಅತೀ ಹೆಚ್ಚು ಮಹತ್ವದ ಘಟಕ ಯಾವುದೆಂದು ತಿಳಿದುಕೊಳ್ಳಲು ಕಠಿಣವಾಗುತ್ತದೆ. ಆ ಘಟಕಗಳಲ್ಲಿ ಕೆಲವು ಅವ್ಯಕ್ತ ಘಟಕಗಳ ಸಮಾವೇಶವಿರುವಾಗ ಈ ಅಡಚಣೆಗಳು ಇನ್ನೂ ಹೆಚ್ಚಾಗುತ್ತಾ ಹೋಗುತ್ತದೆ, ಉದಾ. ಯಾವುದೇ ಒಂದು ಸ್ಥಳದಲ್ಲಿ ಅಗ್ನಿಯನ್ನು ಪ್ರಜ್ವಲಿಸಲು ಸ್ಥಾನ, ಕಟ್ಟಿಗೆ, ತುಪ್ಪ ಅಥವಾ ಎಣ್ಣೆ, ಕಡ್ಡಿಪೆಟ್ಟಿಗೆ ಅಥವಾ ಅಗ್ನಿಯ ಕೆಂಡ, ಗಾಳಿ ಅಥವಾ ಇತರ ಅವ್ಯಕ್ತ ಪದಾರ್ಥಗಳ ಅವಶ್ಯಕತೆಯಿರುತ್ತದೆ. ‘ಈ ಎಲ್ಲ ಪದಾರ್ಥಗಳಲ್ಲಿ ಎಲ್ಲಕ್ಕಿಂತ ಮುಖ್ಯ ಪದಾರ್ಥ ಯಾವುದು ?, ಹೀಗೆ ವಿವಿಧ ವ್ಯಕ್ತಿಗಳಿಗೆ ಕೇಳಿದರೆ ಅದರ ಉತ್ತರ ಬೇರೆ ಬೇರೆ ಸಿಗುವುದು, ಇದರಲ್ಲಿ ಆಶ್ಚರ್ಯವಿಲ್ಲ. ಅದೇ ರೀತಿ ‘ಮೂಳೆ, ಮಾಂಸ, ರಕ್ತ, ನರನಾಡಿ, ಮನಸ್ಸು, ಬುದ್ಧಿ, ಇಂದ್ರಿಯಗಳು ಅಥವಾ ಇತರ ಅವ್ಯಕ್ತ ಘಟಕ ಇತ್ಯಾದಿಗಳ ಮಿಶ್ರಣದಿಂದ ತಯಾರಾಗಿರುವ ಮನುಷ್ಯನ ಶರೀರದಲ್ಲಿ ಅತೀ ಹೆಚ್ಚು ಮಹತ್ವದ ಮುಖ್ಯ ಘಟಕ ಯಾವುದು ?, ಎಂದು ಹೇಳುವುದು ಅತ್ಯಂತ ಕಠಿಣವಿದೆ, ಅಂದರೆ ಯಾವ ಪದಾರ್ಥಕ್ಕೆ ‘ನಾನು ಎಂದು ಕರೆಯಲಾಗುತ್ತದೆಯೋ ಅದರ ಬಗ್ಗೆ ಅವನಿಗೇ ಗೊತ್ತಿಲ್ಲ.

೧ ಕ. ‘ಆತ್ಮ ಮನುಷ್ಯನ ಶರೀರದಲ್ಲಿ ಅವ್ಯಕ್ತ ಹಾಗೂ ಇಂದ್ರಿಯಾತೀತ ಸ್ವರೂಪದಲ್ಲಿ ವಿರಾಜಮಾನವಾಗಿರುವುದರ ಜ್ಞಾನವು ವೇದದಿಂದ ಪ್ರಾಪ್ತಿಯಾಗುತ್ತದೆ : ಈ ತತ್ತ್ವದ ಮೊತ್ತಮೊದಲ ಜ್ಞಾನ ಹಾಗೂ ಸಾಮಾನ್ಯ ಪ್ರಮಾಣ ಮನುಷ್ಯನಿಗೆ ವೇದದಿಂದ ಪ್ರಾಪ್ತಿಯಾಗಿದೆ. ಈ ತತ್ತ್ವವನ್ನೇ ಆತ್ಮತತ್ತ್ವ (ಆತ್ಮ) ಎನ್ನಲಾಗಿದೆ. ಈ ‘ಆತ್ಮ ಮನುಷ್ಯನ ಶರೀರದಲ್ಲಿ ಅವ್ಯಕ್ತ ಹಾಗೂ ಇಂದ್ರಿಯಾತೀತ ರೂಪದಲ್ಲಿ ವಿರಾಜಮಾನವಾಗಿದೆ. ಈ ಆತ್ಮವು ಎಲ್ಲೆಡೆ, ಅಂದರೆ ವಿಶ್ವ ಅಥವಾ ಬ್ರಹ್ಮಾಂಡದ ಕಣಕಣಗಳಲ್ಲಿ (ಅಂದರೆ ಸಂಪೂರ್ಣ ವಾತಾವರಣದಲ್ಲಿ ಚರಾಚರಗಳಲ್ಲಿ) ಪರಮಾತ್ಮನ ರೂಪದಲ್ಲಿದೆ. ಹೇಗೆ ಕೊಡಪಾನದಲ್ಲಿ ತುಂಬಿದ ಸಮುದ್ರದ ನೀರು ಮತ್ತು ಸಾಗರದಲ್ಲಿರುವ ಸಮುದ್ರದ ನೀರು ಇವುಗಳಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲವೋ ಅದೇ ರೀತಿ ಆತ್ಮ ಮತ್ತು ಪರಮಾತ್ಮ ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.

೧ ಖ. ಆತ್ಮದ ಅಧಿಷ್ಠಾನದಿಂದ ಸಂಪೂರ್ಣ ಜ್ಞಾನ-ವಿಜ್ಞಾನ ಪ್ರಾಪ್ತಿಯಾಗುವುದರಿಂದ ಮನುಷ್ಯನು ಆ ಅಧಿಷ್ಠಾನವನ್ನು ಪ್ರಾಪ್ತಿ ಮಾಡಲು ಪ್ರಯತ್ನ ಮಾಡುವ ಅವಶ್ಯಕತೆಯಿದೆ : ಕೆಲವರಿಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಆತ್ಮಕ್ಕೂ ಏನು ಸಂಬಂಧ ? ಎರಡೂ ವಿಷಯ ಬೇರೆ ಬೇರೆಯಾಗಿದೆ; ಎಂದು ಸಂಶಯ ಬರಬಹುದು; ಆದರೆ ಹಾಗಿರದೆ ಶಿಕ್ಷಣ ಮತ್ತು ಆತ್ಮಕ್ಕೆ ಬಹಳ ಆಳವಾದ ಸಂಬಂಧವಿದೆ; ಏಕೆಂದರೆ ಯಾವುದರ ಶಿಕ್ಷಣ ನೀಡಲಾಗುತ್ತದೆಯೊ, ಆ ಸಂಪೂರ್ಣ ಜ್ಞಾನ-ವಿಜ್ಞಾನವು ಆತ್ಮರೂಪಿ ಸ್ರೋತದಿಂದಲೇ ಹೊರಡುತ್ತದೆ ಹಾಗೂ ಪ್ರವಹಿಸುತ್ತದೆ. ಯಾವ ಅಧಿಷ್ಠಾನದಿಂದ ಸಂಪೂರ್ಣ ಜ್ಞಾನ-ವಿಜ್ಞಾನವು ಪ್ರಾಪ್ತಿಯಾಗುತ್ತದೆಯೋ, ಅದೇ ಅಧಿಷ್ಠಾನದಿಂದ ಸಂಪೂರ್ಣ ಜ್ಞಾನ-ವಿಜ್ಞಾನ ಪ್ರಾಪ್ತಿಯಾಗುತ್ತದೆ, ಆ ಅಧಿಷ್ಠಾನವನ್ನು ಪ್ರಾಪ್ತಿ ಮಾಡುವ ಪ್ರಯತ್ನ ಮಾಡುವುದರಲ್ಲಿಯೇ ಮನುಷ್ಯನ ಬುದ್ಧಿವಂತಿಕೆ ಇದೆ.

೧ ಗ. ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಭೌತಿಕ ವಿದ್ಯೆಗಳ ಜೊತೆಗೆ ಆಧ್ಯಾತ್ಮಿಕ ವಿದ್ಯೆಗಳ ಶಿಕ್ಷಣವನ್ನು ಅತ್ಯಾವಶ್ಯಕ ಸ್ವರೂಪದಲ್ಲಿ ನೀಡುವ ಪರಿಪಾಠವಿರುವುದು : ಆತ್ಮವು ಚೇತನಾಶಕ್ತಿಯಾಗಿದೆ ಹಾಗೂ ಇತರ ಅನೇಕ ಶಕ್ತಿಗಳ ಭಂಡಾರವಾಗಿದೆ. ಆದ್ದರಿಂದ ‘ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಣದ ಸರ್ವೋಚ್ಚ ಧ್ಯೇಯ ಮನುಷ್ಯನನ್ನು ಆ ಆತ್ಮತತ್ತ್ವದೊಂದಿಗೆ (ಆತ್ಮ, ಚೇತನಾಶಕ್ತಿಯೊಂದಿಗೆ) ಜೋಡಿಸುವುದೇ (ಯೋಗ ಮಾಡುವುದು), ಆಗಿದೆ. ಇದರ ಲಾಭವೆಂದರೆ, ಮನುಷ್ಯನಲ್ಲಿ ಅಪಾರ ಬೌದ್ಧಿಕ ಹಾಗೂ ಇತರ ಶಕ್ತಿಗಳ ಸಂಚಾರವಾಗುತ್ತದೆ. ಇದು ಯಾವ ವಿದ್ಯೆಯ ಮೂಲಕ ಬರುತ್ತದೋ, ಅದಕ್ಕೆ ‘ಅಧ್ಯಾತ್ಮ ವಿದ್ಯೆ ಎಂದು ಹೇಳಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಭೌತಿಕ ವಿದ್ಯೆಗಳ ಜೊತೆಗೆ ಆಧ್ಯಾತ್ಮಿಕ ವಿದ್ಯೆಗಳ ಶಿಕ್ಷಣವನ್ನು ಅತ್ಯವಶ್ಯಕ ಸ್ವರೂಪದಲ್ಲಿ ನೀಡುವ ಪರಿಪಾಠವಿದೆ. ಆಧ್ಯಾತ್ಮಿಕ ವಿದ್ಯೆಗಳ ಸಾಮಾನ್ಯ ಶಿಕ್ಷಣದಿಂದಲೇ ಮನುಷ್ಯನಲ್ಲಿ ಸದ್ಗುಣಗಳ ವಿಕಾಸವಾಗುತ್ತದೆ ಮತ್ತು ಸದಾಚಾರವನ್ನು ಪಾಲನೆ ಮಾಡುವ ಪ್ರವೃತ್ತಿ ಬೆಳೆಯುತ್ತದೆ. ಅದಕ್ಕಾಗಿ ಪ್ರಯತ್ನಿಸಲಾಗುತ್ತದೆ.     (ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಹಾಗೂ ಭಾರತೀಯ ಸಂಸ್ಕೃತಿಯ ಅಭ್ಯಾಸಕರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)