Global Muslim Population Rise : 2060 ರ ಹೊತ್ತಿಗೆ ಮುಸ್ಲಿಮರು ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗುವುದು !

  • ಅಮೇರಿಕೆಯ ಪ್ಯೂ ಸಂಶೋಧನಾ ಕೇಂದ್ರದ ಹೇಳಿಕೆ

  • ಹೆಚ್ಚಿನ ಯುವ ಜನಸಂಖ್ಯೆ, ಹೆಚ್ಚಿನ ಸಂತಾನೋತ್ಪತ್ತಿ ದರರ ಮತ್ತು ಮತಾಂತರಗಳಿಂದಾಗಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾಗುತ್ತದೆ !

ನ್ಯೂಯಾರ್ಕ್ (ಅಮೇರಿಕಾ) – ಪ್ರಪಂಚದಾದ್ಯಂತ ಮುಸ್ಲಿಮರ ಜನಸಂಖ್ಯೆಯು ಶರವೇಗವಾಗಿ ಬೆಳೆಯುತ್ತಿದೆ. ನ್ಯೂಯಾರ್ಕ್‌ನ ಪ್ಯೂ ಸಂಶೋಧನಾ ಕೇಂದ್ರದ ಇತ್ತೀಚಿನ ಅಧ್ಯಯನದ ಪ್ರಕಾರ, ಇಸ್ಲಾಂ ಪ್ರಸ್ತುತ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಧರ್ಮವಾಗಿದೆ. 2060 ರ ವೇಳೆಗೆ ಮುಸ್ಲಿಂ ಜನಸಂಖ್ಯೆಯು ಶೇಕಡಾ 70 ರಷ್ಟು ಹೆಚ್ಚಾಗಿ ಅದು 300 ಕೋಟಿ ಗಡಿ ದಾಟಲಿದೆ. ಆದ್ದರಿಂದ, 2060 ರ ಹೊತ್ತಿಗೆ, ಮುಸ್ಲಿಮರು ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗುತ್ತಾರೆ. ಈ ಅಧ್ಯಯನದ ಪ್ರಕಾರ, ಹೆಚ್ಚಿನ ಯುವ ಜನಸಂಖ್ಯೆ, ಹೆಚ್ಚಿನ ಸಂತಾನೋತ್ಪತ್ತಿ ದರರ ಮತ್ತು ಮತಾಂತರದ ಪ್ರಮುಖ ಅಂಶಗಳಿಂದಾಗಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಾಗುತ್ತದೆ. ಪ್ರಸ್ತುತ, ಭೂಮಿಯ ಮೇಲಿನ ಅತಿದೊಡ್ಡ ಜನಸಂಖ್ಯೆ ಕ್ರೈಸ್ತರದ್ದಾಗಿದೆ.

2050 ರವರೆಗೆ ಭಾರತದ ಜನಸಂಖ್ಯೆಯ ಶೇಕಡಾ 77 ರಷ್ಟು ಜನರು ಹಿಂದೂಗಳಾಗಿರುತ್ತಾರೆ !

2011 ರಲ್ಲಿ, ಭಾರತದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು 80 ಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. ಅದಾದ ನಂತರ, 40 ವರ್ಷಗಳಲ್ಲಿ ಇದು ಶೇಕಡಾ 3 ರಷ್ಟು ಕಡಿಮೆಯಾಗುತ್ತದೆ. ಇದರರ್ಥ ಪ್ರತಿ ದಶಕದಲ್ಲಿ ಹಿಂದೂ ಜನಸಂಖ್ಯೆಯ ಶೇಕಡಾವಾರು ಪ್ರಮಾಣವು ಸುಮಾರು ಒಂದು ಶೇಕಡಾ ಕಡಿಮೆಯಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, 500 ವರ್ಷಗಳಲ್ಲಿ ಹಿಂದೂಗಳು ಭಾರತದಲ್ಲಿ ಔಷಧಿ ಖರೀದಿಸಲು ಸಹ ಸಾಧ್ಯವಾಗುವುದಿಲ್ಲ. ಇದು ನಿಮಗೆ ಆಗಬಾರದು ಎಂದಾದರೆ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಿರಿ!

ಭಾರತ ಮತ್ತು ನೇಪಾಳ ಭವಿಷ್ಯದಲ್ಲಿ ಹಿಂದೂ ಬಹುಸಂಖ್ಯಾತ ರಾಷ್ಟ್ರಗಳಾಗಿಯೇ ಉಳಿಯುತ್ತವೆ. 2010 ರಲ್ಲಿ ಭಾರತದ ಒಟ್ಟು ಜನಸಂಖ್ಯೆಯ 80 ಪ್ರತಿಶತದಷ್ಟು ಹಿಂದೂಗಳಿದ್ದರು ಮತ್ತು 2050 ರವರೆಗೆ ಅವರು ಬಹುಸಂಖ್ಯಾತರಾಗಿಯೇ ಉಳಿಯುತ್ತಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು 77 ಪ್ರತಿಶತದಷ್ಟಿರುತ್ತದೆ. 2050 ರ ವೇಳೆಗೆ ಭಾರತದ ಜನಸಂಖ್ಯೆಯು ವಿಶ್ವದ ಒಟ್ಟು ಜನಸಂಖ್ಯೆಯ 18 ಪ್ರತಿಶತದಷ್ಟಿದ್ದರೆ, ಹಿಂದೂ ಜನಸಂಖ್ಯೆಯು 15 ಪ್ರತಿಶತದಷ್ಟಿರುತ್ತದೆ. ಈ ಅಧ್ಯಯನದ ಪ್ರಕಾರ, ಮುಂದಿನ 25 ವರ್ಷಗಳಲ್ಲಿ ವಿಶ್ವಾದ್ಯಂತ ಹಿಂದೂಗಳ ಜನಸಂಖ್ಯೆಯು 100 ಕೋಟಿಯಿಂದ 140 ಕೋಟಿಗೆ ಏರುತ್ತದೆ.

ಕೆನಡಾದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲಿದೆ !

ಪ್ಯೂ ಸಂಶೋಧನಾ ಕೇಂದ್ರದ ಅಧ್ಯಯನದ ಪ್ರಕಾರ, ಕೆನಡಾದಲ್ಲಿ ಮುಸ್ಲಿಂ ಜನಸಂಖ್ಯೆಯು 2030 ರ ವೇಳೆಗೆ ಮೂರು ಪಟ್ಟು ಹೆಚ್ಚಾಗುತ್ತದೆ. 2010 ರಲ್ಲಿ ಇದು 9 ಲಕ್ಷದಷ್ಟಿತ್ತು, ಮತ್ತು 2030 ರಲ್ಲಿ ಇದು 27 ಲಕ್ಷವಾಗುವ ಸಾಧ್ಯತೆಯಿದೆ. ಇದು ಕೆನಡಾದ ಒಟ್ಟು ಜನಸಂಖ್ಯೆಯ ಮುಸ್ಲಿಮರ ಪ್ರಮಾಣವನ್ನು ಶೇಕಡಾ 6.6 ರಷ್ಟು ಹೆಚ್ಚಿಸುತ್ತದೆ.

ಅದೇ ರೀತಿ, ಅಮೇರಿಕದಲ್ಲಿ ಮುಸ್ಲಿಂ ಜನಸಂಖ್ಯೆಯು ವೇಗವಾಗಿ ಬೆಳೆಯಲಿದೆ, 2010 ರಲ್ಲಿ 0-4 ವರ್ಷ ವಯಸ್ಸಿನ ಮುಸ್ಲಿಂ ಮಕ್ಕಳ ಜನಸಂಖ್ಯೆಯು 2ಲಕ್ಷ ದಿಂದ 6ಲಕ್ಷ 50ಸಾವಿರದ ವರೆಗೆ ಏರಿಕೆಯಾಗಲಿದೆ.

ಸಂಪಾದಕೀಯ ನಿಲುವು

‘ಪ್ಯೂ ರಿಸರ್ಚ್’ ನ ಈ ಹೇಳಿಕೆ ನಿಜವಾಗಿದ್ದರೆ, ಇದು ಭವಿಷ್ಯಕ್ಕೆ ಎಚ್ಚರಿಕೆಯ ಗಂಟೆ, ಎನ್ನುವುದು ನಿಜ !