ಸರ್ವೋತ್ತಮ ಶಿಕ್ಷಣ ಯಾವುದು ?

ಪೂ. ಡಾ. ಶಿವಕುಮಾರ ಓಝಾ (೮೭ ವರ್ಷ) ‘ಐ.ಐ.ಟಿ, ಮುಂಬಯಿಯಲ್ಲಿ ಏರೋಸ್ಪೇಸ್ ಇಂಜಿನೀಯರಿಂಗ್‌ನಲ್ಲಿ ಪಿ.ಎಚ್.ಡಿ. ಪಡೆದ ಪ್ರಾಧ್ಯಾಪಕರೆಂದು ಕಾರ್ಯ ನಿರತರಾಗಿದ್ದರು. ಅವರು ಭಾರತೀಯ ಸಂಸ್ಕೃತಿ, ಅಧ್ಯಾತ್ಮ, ಸಂಸ್ಕೃತ ಭಾಷೆ ಇತ್ಯಾದಿ ವಿಷಯಗಳಲ್ಲಿ ೧೧ ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. ಅದರಲ್ಲಿ ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ? ಈ ಹಿಂದಿ ಭಾಷೆಯ ಗ್ರಂಥದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಇಷ್ಟರವರೆಗೆ ಪ್ರಕಟಿಸಲಾದ ಲೇಖನಗಳಲ್ಲಿ ‘ಭಾರತೀಯ ಸಂಸ್ಕೃತಿಯು ಸರ್ವೋತ್ತಮ ಶಿಕ್ಷಣದ ಆಧಾರಸ್ತಂಭವಾಗಿರುತ್ತದೆ, ಭಾರತೀಯ ಸಂಸ್ಕೃತಿಯು ಮನುಷ್ಯ ಜೀವನದ ವಾಸ್ತವಿಕತೆಯ ಮೇಲೆ ಬೆಳಕು ಚೆಲ್ಲುತ್ತಿದ್ದು ‘ಆತ್ಮವು ಮನುಷ್ಯನ ಶರೀರದಲ್ಲಿ ಅವ್ಯಕ್ತ ಹಾಗೂ ಇಂದ್ರಿಯಾತೀತ ರೂಪದಲ್ಲಿ ವಿರಾಜಮಾನವಾಗಿದೆ ಎಂಬ ಜ್ಞಾನವು ವೇದಗಳಿಂದ ಪ್ರಾಪ್ತವಾಗುತ್ತದೆ ಎನ್ನುವ  ಮಾಹಿತಿಯನ್ನು ಪಡೆದುಕೊಂಡೆವು. ಈ ವಾರ ಅದರ ಮುಂದಿನ ಲೇಖನವನ್ನು ನೋಡೋಣ. 

(ಭಾಗ ೩)

ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: https://sanatanprabhat.org/kannada/48986.html
ಪೂ. ಡಾ. ಶಿವಕುಮಾರ ಓಝಾ

೧. ವಿಷಯ ಪ್ರವೇಶ

೧ ಘ. ಅಂತಃಕರಣವನ್ನು ಶುದ್ಧಗೊಳಿಸುವ ಶಿಕ್ಷಣದ ಆವಶ್ಯಕತೆ !

೧ ಘ ೧. ಮನುಷ್ಯನು ಆತ್ಮದ ವಿಷಯದಲ್ಲಿ ಅಜ್ಞಾನಿಯಾಗಿದ್ದಾನೆ, ಆತ್ಮದ ಅಸ್ತಿತ್ವವನ್ನು ಅನೇಕ ಪುರಾವೆಗಳು, ತರ್ಕ, ಉದಾಹರಣೆಗಳು ಇತ್ಯಾದಿಗಳ ಮೂಲಕ ಪ್ರಮಾಣಸಹಿತ ಸಿದ್ಧಪಡಿಸಲು ಸಾಧ್ಯವಿದೆ ಹಾಗೂ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಆಧಾತ್ಮಿಕ ವಿದ್ಯೆಗಳಲ್ಲಿ ಆತ್ಮತತ್ತ್ವದ ಸ್ಥೂಲದ ಅನುಭೂತಿಗಳು ಬರಲು ಅನೇಕ ಉಪಾಯಗಳಿರುವೆವು : ಹೆಚ್ಚಿನ ಸಮಾಜದಲ್ಲಿ ಅಧ್ಯಾತ್ಮ ವಿಷಯದ ಅಜ್ಞಾನ ಹಾಗೂ ಆ ವಿಷಯವನ್ನು ತಿಳಿದುಕೊಳ್ಳುವ ಜಿಜ್ಞಾಸೆಯ ಅಭಾವ, ಇದೇ ಆಧುನಿಕ ಯುಗದ ಎಲ್ಲಕ್ಕಿಂತ ದೊಡ್ಡ ಸಮಸ್ಯೆಯಾಗಿದೆ. ಕಣ್ಣುಗಳು ಮನುಷ್ಯನ ಅತೀ ಸಮೀಪವಿರುತ್ತವೆ. ಕಣ್ಣುಗಳು ಅತ್ಯಂತ ಆವಶ್ಯಕ ಹಾಗೂ ಉಪಯುಕ್ತ ಅವಯವವಾಗಿದೆ; ಆದರೆ ಎಲ್ಲಿಯವರೆಗೆ ಕಣ್ಣುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲವೋ, ಅಲ್ಲಿಯವರೆಗೆ ಅನೇಕ ವಾರ ಅಥವಾ ಅನೇಕ ತಿಂಗಳು ಇವುಗಳ ಕಡೆಗೆ ಮನುಷ್ಯನ ಗಮನವೂ ಇರುವುದಿಲ್ಲ. ಅದೇ ರೀತಿ ಮನುಷ್ಯನು ಆತ್ಮದ ವಿಷಯದಲ್ಲಿಯೂ ಅಜ್ಞಾನಿಯಾಗಿರುತ್ತಾನೆ. ಆತ್ಮವನ್ನು ಮನುಷ್ಯನು ಯಾವತ್ತೂ ನೋಡಿರುವುದಿಲ್ಲ ಅಥವಾ ಅದರ ಅನುಭವವನ್ನೂ ಅವನು ಪಡೆದಿರುವುದಿಲ್ಲ. ಹೀಗಿರುವಾಗ ‘ಅದರ ವಿಷಯದಲ್ಲಿ ಯಾವುದೇ ಜ್ಞಾನವಿಲ್ಲದಿರುವುದು, ಇದರಲ್ಲಿ ಯಾವುದೇ ಆಶ್ಚರ್ಯದ ಸಂಗತಿ ಇಲ್ಲ. ಈ ‘ಆಶ್ಚರ್ಯಜನಕವಲ್ಲದ ವಿಷಯವನ್ನು ವಿಜ್ಞಾನಿಗಳು ಅತೀ ದೊಡ್ಡ ಆಶ್ಚರ್ಯವೆಂದು ಪರಿಗಣಿಸಿದ್ದಾರೆ. ಮನುಷ್ಯನು ಯಾವುದೇ ಒಂದು ವಿಶಿಷ್ಟವಾದ ಪದಾರ್ಥವನ್ನು ನೋಡಿಲ್ಲದಿದ್ದರೆ ಅಥವಾ ಅವನಿಗೆ ಅದರ ಬಗ್ಗೆ ಮಾಹಿತಿಯೇ ಇಲ್ಲದಿದ್ದರೆ, ಅದರ ಅರ್ಥ ‘ಆ ಪದಾರ್ಥವು ಅಸ್ತಿತ್ವದಲ್ಲಿಯೇ ಇಲ್ಲ, ಎಂದಾಗುವುದಿಲ್ಲ. ಆತ್ಮದ ಅಸ್ತಿತ್ವವನ್ನು ಅನೇಕ ಪುರಾವೆ, ತರ್ಕ, ಉದಾಹರಣೆಗಳು ಇತ್ಯಾದಿಗಳ ಮೂಲಕ ಪ್ರಮಾಣಸಹಿತ ಸಿದ್ಧಪಡಿಸಬಹುದು. ಭಾರತೀಯ ಸಂಸ್ಕೃತಿಯಲ್ಲಿ ಸಮಾವೇಶವಿರುವ ಆಧ್ಯಾತ್ಮಿಕ ವಿದ್ಯೆಗಳಲ್ಲಿ ಸ್ಥೂಲದಿಂದ ಆತ್ಮತತ್ತ್ವದ ಅನುಭೂತಿ ಪಡೆಯುವ ಅನೇಕ ಉಪಾಯಗಳಿವೆ. ಇದರ ಬಗ್ಗೆ ಪ್ರಸ್ತುತ ಗ್ರಂಥದಲ್ಲಿ ವಿಚಾರವಿಮರ್ಶೆ ಮಾಡಲಾಗಿದೆ.

೧ ಘ ೨. ಮನುಷ್ಯನ ಬುದ್ಧಿಯಲ್ಲಿ ಯೋಗ್ಯ ರೀತಿಯಲ್ಲಿ ಮಾಹಿತಿಯನ್ನು ಹಾಕಬಹುದು ಹಾಗೂ ಈ ಮಾಹಿತಿಯ ಆಧಾರದಲ್ಲಿ ಮನುಷ್ಯನು ತರ್ಕ-ವಿತರ್ಕದ ಮೂಲಕ ಸಂಶೋಧನೆ ಮಾಡಿ ಜ್ಞಾನ ಪ್ರಾಪ್ತಿ ಮಾಡಬಹುದು : ‘ಮನುಷ್ಯನು ಬುದ್ಧಿಯ ಮೂಲಕ ಜ್ಞಾನವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುತ್ತಾನೆ ? ಅಂದರೆ ಬುದ್ಧಿಯ ಮೂಲಕ ಜ್ಞಾನವನ್ನು ಗ್ರಹಣ ಮಾಡುವ ಪ್ರಕ್ರಿಯೆ ಹೇಗಿರುತ್ತದೆ ?, ಎನ್ನುವ ಪ್ರಶ್ನೆ ಕೂಡ ಉತ್ಪನ್ನವಾಗುತ್ತದೆ. ಭೌತಿಕ ಶಿಕ್ಷಣತಜ್ಞರ ಅಭಿಪ್ರಾಯ ಹೇಗಿದೆಯೆಂದರೆ, ಹೇಗೆ ಖಾಲಿ ಕೊಡಪಾನದಲ್ಲಿ ನೀರನ್ನು ತುಂಬಿಸಲಾಗುತ್ತದೆ, ಅದೇ ರೀತಿ ಮನುಷ್ಯನ ಬುದ್ಧಿಯಲ್ಲಿಯೂ ಯೋಗ್ಯವಾದ ಮಾಹಿತಿಯನ್ನು ಹಾಕಬಹುದು. ಇದೇ ಮಾಹಿತಿಯ ಆಧಾರದಲ್ಲಿ ಮನುಷ್ಯ ತರ್ಕ-ವಿತರ್ಕದ ಮೂಲಕ ಸಂಶೋಧನೆ ಮಾಡಿ ಜ್ಞಾನವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು.

೧ ಘ ೩. ಭಾರತೀಯ ಸಂಸ್ಕೃತಿಯು ಅಂತಃಕರಣವನ್ನು ಶುದ್ಧೀಕರಿಸುವ ಈ ಶಿಕ್ಷಣಕ್ಕೆ ಒತ್ತು ಕೊಡುತ್ತಿರುತ್ತದೆ : ಈ ಮೇಲಿನ ಪ್ರಶ್ನೆಗಳ ಉತ್ತರವನ್ನು ಭಾರತೀಯ ಸಂಸ್ಕೃತಿಯು ಬೇರೆಯೇ ಪದ್ಧತಿಯಲ್ಲಿ ಹಾಗೂ ವಿಲಕ್ಷಣ ರೀತಿಯಲ್ಲಿ ಕೊಡುತ್ತದೆ. ಭಾರತೀಯ ಸಂಸ್ಕೃತಿಗನುಸಾರ  ಜ್ಞಾನೇಂದ್ರಿಯಗಳ ಮೂಲಕ (ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳ ಮೂಲಕ) ಎದುರಿಗಿರುವ ಪದಾರ್ಥದ ಅಂತಃಪ್ರೇರಣೆ (ವೃತ್ತಿ) ಬುದ್ಧಿಯಲ್ಲಿ ನಿರ್ಮಾಣವಾಗುತ್ತದೆ. ಅನಂತರ ಈ ಅಂತಃಪ್ರೇರಣೆಯ ಮೇಲೆ ಆತ್ಮದ ಪ್ರತಿಬಿಂಬ (ಪ್ರಕಾಶ ಅಥವಾ ಪ್ರಭಾವ) ಬೀಳುತ್ತದೆ. ಅದರಿಂದ ಪ್ರತ್ಯಕ್ಷ ಜ್ಞಾನ ಪ್ರಾಪ್ತಿಯಾಗುತ್ತದೆ. ಅದರಿಂದ ಸಮಸ್ತ ಬೌದ್ಧಿಕ ಜ್ಞಾನ ಅಂದರೆ ಆತ್ಮದ ಪ್ರಕಾಶವಾಗಿದೆ, ಅದು ಬುದ್ಧಿಯ ಮೂಲಕ ಪ್ರತಿಬಿಂಬಿಸುತ್ತದೆ. ಮನುಷ್ಯನು ಅದನ್ನು ‘ಜ್ಞಾನಪ್ರಾಪ್ತಿ ಎಂದು ಹೇಳುತ್ತಾನೆ. ಪ್ರಕೃತಿಯ ಸತ್ತ್ವಗುಣಗಳ ಅಂಶವು ಅಂತಃಕರಣದಲ್ಲಿ (ಬುದ್ಧಿಯಲ್ಲಿ) ಹೆಚ್ಚು ಪ್ರಮಾಣದಲ್ಲಿರುವುದರಿಂದ ಬುದ್ಧಿಯಲ್ಲಿ ಅಂತಃಪ್ರೇರಣೆ ನಿರ್ಮಾಣವಾಗುವ ಕ್ಷಮತೆ ಇರುತ್ತದೆ. ಬೇರೆ ಯಾವುದರಲ್ಲಿಯೂ ಈ ಕ್ಷಮತೆ ಇರುವುದಿಲ್ಲ. ಹೇಗೆ ಹೊಳೆಯುವ ಸ್ವಚ್ಛ ಕನ್ನಡಿಯಲ್ಲಿಯೇ ಸೂರ್ಯಪ್ರಕಾಶವನ್ನು ಪ್ರತಿಬಿಂಬಿಸುವ ಕ್ಷಮತೆ ಇರುತ್ತದೆಯೋ, ಹಾಗೆಯೇ ಇದು ಕೂಡ ಆಗಿದೆ. ಅಂತಃಕರಣ ಎಷ್ಟು ಶುದ್ಧವಿರುವುದೋ, ಅಷ್ಟೇ ಆತ್ಮತತ್ತ್ವದ (ಚೇತನಾಶಕ್ತಿಯ) ಪ್ರಭಾವ ಅದರ ಮೇಲೆ ಹೆಚ್ಚಾಗುವುದರಿಂದ ಬುದ್ಧಿಯ ಕ್ಷಮತೆ ಹೆಚ್ಚಾಗುವುದು, ಬುದ್ಧಿಯ ದಿವ್ಯ ಶಕ್ತಿ ಜಾಗೃತವಾಗುವುದು ಹಾಗೂ ಅಪರೋಕ್ಷ ಜ್ಞಾನದ ಅನೇಕ ಸಾಮರ್ಥ್ಯಗಳು ಬೆಳಕಿಗೆ ಬರುವವು. ಅದಕ್ಕಾಗಿ ಭಾರತೀಯ ಸಂಸ್ಕೃತಿ ಅಂತಃಕರಣ ಶುದ್ಧಿ ಮಾಡುವ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತದೆ ಹಾಗೂ ಅದರ ಬಗ್ಗೆ ವಿವಿಧ ಉಪಾಯಗಳನ್ನೂ ಹೇಳುತ್ತದೆ.

೧ ಚ. ಶಿಕ್ಷಣದ ವ್ಯಾಪಕ ದೃಷ್ಟಿಕೋನ

೧ ಚ ೧. ಮಾನವೀ ಬುದ್ಧಿಯ ದೋಷವನ್ನು ದೂರಗೊಳಿಸಿ ಗುಣವನ್ನು ಹೆಚ್ಚಿಸುವ ಶಿಕ್ಷಣ ಬೇಕಾಗಿದೆ ! : ಯಾವಾಗ ನಮ್ಮ ಜೀವನದ ಕುರಿತಾದ ದೃಷ್ಟಿಕೋನವು ವ್ಯಾಪಕವಾಗುವುದೋ ಹಾಗೂ ಶಿಕ್ಷಣದಲ್ಲಿ ಈ ವ್ಯಾಪಕತೆಯು ಸ್ಪಷ್ಟವಾಗಿ ಹೊಳೆಯುವುದೋ, ಆಗ ಶಿಕ್ಷಣವು ಸಾರ್ಥಕ, ಭವ್ಯ-ದಿವ್ಯ, ಮನೋರಂಜಕ ಹಾಗೂ ಶ್ರೇಷ್ಠವಾಗಬಹುದು. ವ್ಯಾಪಕ ದೃಷ್ಟಿಕೋನದ ಅಂತರ್ಗತ ವಿವಿಧ ವಿಚಾರಗಳ ಸಮಾವೇಶವೂ ಇದೆ. ‘ಜ್ಞಾನ ಕೇವಲ ಪ್ರತ್ಯಕ್ಷ (ಜ್ಞಾನೇಂದ್ರಿಯಗಳ ಮೂಲಕ ಲಭಿಸಿರುವುದು) ಹಾಗೂ ಪರೋಕ್ಷವೇ (ಪುಸ್ತಕ ಓದಿ ಅಥವಾ ಕೇಳಿ ಪಡೆದಿರುವ) ಆಗಿರುತ್ತದೆ ಅಥವಾ ಬೇರೆ ವಿಧದಲ್ಲಿಯೂ ಪ್ರಾಪ್ತಿಯಾಗುತ್ತದೆ, ಎಂಬುದನ್ನು ಶಿಕ್ಷಣಕ್ಕಾಗಿ ತಿಳಿದುಕೊಳ್ಳುವ ಅವಶ್ಯಕತೆಯಿದೆ. ಮನುಷ್ಯನಿಗೆ ನಿಸರ್ಗದತ್ತ ಜೀವ ಎಂದು ಹೇಳಲಾಗುತ್ತದೆ. ಅದರ ತಾತ್ಪರ್ಯವೆಂದರೆ, ‘ಪ್ರಕೃತಿ ಹೇಗಿರುತ್ತದೆ ? ಪ್ರಕೃತಿಯ ಗುಣ ಯಾವುದು ? ಅದು (ಗುಣ) ಮನುಷ್ಯನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ?, ಎಂಬುದನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ; ಮತ್ತು ಅದಕ್ಕನುಸಾರ ಶಿಕ್ಷಣ ನೀಡಬೇಕು. ‘ಪುನರ್‌ಜನ್ಮ ಆಗುತ್ತದೆಯೋ ಇಲ್ಲವೋ ?, ಎಂಬುದನ್ನು ಅರಿತುಕೊಳ್ಳುವುದು ಆವಶ್ಯಕವಾಗಿದೆ; ಏಕೆಂದರೆ ಪುನರ್ಜನ್ಮದ ಸತ್ಯವನ್ನು ಒಪ್ಪಿಕೊಳ್ಳುವುದರಿಂದ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಯಾಗುತ್ತದೆ. ಸುಖ-ದುಃಖದ ಸವಿಸ್ತಾರವಾದ ವಿಶ್ಲೇಷಣೆಯಾಗಬೇಕು ಹಾಗೂ ‘ಸುಖ-ದುಃಖವು ಸ್ವಾಭಾವಿಕವಾಗಿದೆಯೇ ಅಥವಾ ಅಸ್ವಾಭಾವಿಕವೇ ?, ಎಂಬುದನ್ನು ತಿಳಿದುಕೊಳ್ಳಬೇಕು. ಒಂದು ವೇಳೆ ಸುಖ-ದುಃಖಗಳು ಅಸ್ವಾಭಾವಿಕವಾಗಿದ್ದರೆ, ‘ಯಾವ ವಿಧದ ಶಿಕ್ಷಣದ ಮೂಲಕ ದುಃಖದಿಂದ ಸಂಪೂರ್ಣ ನಿವಾರಿಸಿಕೊಳ್ಳಬಹುದು ?, ಎಂಬುದನ್ನು ತಿಳಿದುಕೊಳ್ಳಬೇಕು. ‘ಮಾನವೀ ಬುದ್ಧಿಯ ಗುಣ-ದೋಷಗಳು ಯಾವುವು ಹಾಗೂ ಯಾವ ವಿಧದ ಶಿಕ್ಷಣದ ಮೂಲಕ ಬುದ್ಧಿಯ ದೋಷವನ್ನು ಕ್ಷೀಣಿಸಬಹುದು ಮತ್ತು ಗುಣಗಳನ್ನು ವೃದ್ಧಿಸಬಹುದು ?, ಎನ್ನುವ ಮಹತ್ವದ ವಿಷಯವನ್ನು ತಿಳಿದುಕೊಳ್ಳುವ ಅವಶ್ಯಕತೆಯಿದೆ.

೧ ಚ ೨. ಮಾನವೀ ಜೀವನದ ಬಂಧನದಿಂದ ಮುಕ್ತಿ ಪಡೆಯಲು ಶಿಕ್ಷಣ ಬೇಕಾಗುತ್ತದೆ ! : ಮನುಷ್ಯನ ಶರೀರದಲ್ಲಿ ಅಥವಾ ವಿಶ್ವದಲ್ಲಿ ಈ ಅವ್ಯಕ್ತ ಹಾಗೂ ಅತೀಂದ್ರಿಯ ಶಕ್ತಿಯು ವಿರಾಜಮಾನವಾಗಿದೆಯೋ ಇಲ್ಲವೋ ? ಇದ್ದರೆ, ಯಾವ ರೀತಿಯ ಶಿಕ್ಷಣದಿಂದ ಅವುಗಳ ಉಪಯೋಗವನ್ನು ಸಿದ್ಧಪಡಿಸಬಹುದು ?, ಎಂಬುದರ ಜ್ಞಾನವಿರುವುದು ಆವಶ್ಯಕವಾಗಿದೆ. ಮಾನವೀ ಜೀವನದ ಬಂಧನಗಳು ಯಾವುವು ? ಈ ಬಂಧನಗಳ ಜ್ಞಾನವಾದ ನಂತರ ಅವುಗಳಿಂದ ಮುಕ್ತಿ ಪಡೆಯಲು ಶಿಕ್ಷಣವನ್ನು ಪಡೆಯಬೇಕು. ಜಗತ್ತಿನಲ್ಲಿ ಭಿನ್ನ-ಭಿನ್ನ ಗುಣಗಳ ಜನರು ಇರುತ್ತಾರೆ, ಕೆಲವರು ವಿದ್ವಾಂಸರು ಮತ್ತು ಕೆಲವರು ಶೂರವೀರರಿರುತ್ತಾರೆ ಮತ್ತು ಕೆಲವರು ಮಂದ ಬುದ್ಧಿಯವರು ಹಾಗೂ ದುರ್ಬಲವಾಗಿರುತ್ತಾರೆ; ಆದ್ದರಿಂದ ಶಿಕ್ಷಣವೆಂದರೆ ನಿಜವಾದ ಕಾರಣಗಳ ಜ್ಞಾನವನ್ನು ಮಾಡಿಕೊಟ್ಟು ಮನುಷ್ಯನನ್ನು ನಿಜವಾಗಿಯೂ ವಿದ್ವಾಂಸ ಮತ್ತು ಶೂರವೀರನನ್ನಾಗಿ ಮಾಡುವ ಹಾಗಿರಬೇಕು. ಇವೆಲ್ಲ ವಿಚಾರಗಳು ವ್ಯಾಪಕ ದೃಷ್ಟಿಕೋನವನ್ನು ಪ್ರದರ್ಶಿಸುತ್ತವೆ. ವ್ಯಾಪಕ ದೃಷ್ಟಿಕೋನವನ್ನು ಅಂಗೀಕರಿಸಿದಾಗ ಶಿಕ್ಷಣದ ಸ್ವರೂಪ ಬದಲಾಗುತ್ತದೆ. ಅದರ ದಿಶಾದರ್ಶವನ್ನು ಪ್ರಸ್ತುತ ಗ್ರಂಥದಲ್ಲಿ ಮಾಡಲಾಗಿದೆ.

೧ ಛ. ಆಧುನಿಕ ಶಿಕ್ಷಣಪದ್ಧತಿಯಲ್ಲಿ ಗುಣ-ದೋಷಗಳನ್ನು ತಿಳಿದುಕೊಂಡು ಶಿಕ್ಷಣದಲ್ಲಿ ಸುಧಾರಣೆ ಮಾಡುವ ಅವಶ್ಯಕತೆಯಿದೆ : ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಯಾವಾಗಲೂ ಯಾತ್ರೆಯನ್ನು ಆರಂಭಿಸಬೇಕು. ನಮಗೆ ಎಲ್ಲಿಗೆ ತಲುಪಲಿಕ್ಕಿದೆಯೋ, ಆ ದಿಕ್ಕಿನಿಂದ ಎಂದಿಗೂ ಯಾತ್ರೆ ಆರಂಭವಾಗುವುದಿಲ್ಲ. ಆದ್ದರಿಂದ ಶಿಕ್ಷಣದಲ್ಲಿ ಸುಧಾರಣೆ ಮಾಡಲು ಮೊಟ್ಟಮೊದಲು ಆಧುನಿಕ ಶಿಕ್ಷಣದ ಗುಣ-ದೋಷಗಳನ್ನು ತಿಳಿದುಕೊಳ್ಳಬೇಕು. ಈ ಗುಣ-ದೋಷಗಳ ಮಿತಿ ಮತ್ತು ಅವುಗಳ ಕಾರಣಗಳನ್ನು ಕೂಡ ತಿಳಿದುಕೊಳ್ಳಬೇಕು. ಪ್ರಸ್ತುತ ಗ್ರಂಥದಲ್ಲಿ ನಾವು ಪ್ರಶ್ನಿಸಿದ್ದೇವೆ, ‘ಯಾವ ಶಿಕ್ಷಣ ಇರಬೇಕು ?, ಎಂಬುದನ್ನು ಮನುಷ್ಯನ ಬುದ್ಧಿಯಿಂದ ನಿರ್ಣಯಿಸಲು ಸಾಧ್ಯವಿದೆಯೇ ? ಈ ಪ್ರಶ್ನೆಯು ಆಧುನಿಕ ಭೌತಿಕವಾದಿವಾದಿಗಳಿಗೆ ವಿಚಿತ್ರವೆಂದು ಅನಿಸಬಹುದು. ಈ ಪ್ರಶ್ನೆಗಳ ಉತ್ತರವನ್ನೂ ಪ್ರಸ್ತುತ ಗ್ರಂಥದಲ್ಲಿ ನೀಡಲಾಗಿದೆ. ಶಿಕ್ಷಣದ ನಿಲುವುಗಳು ಪುರಾವೆಯನ್ನು ಆಧರಿಸಿರಬೇಕಾಗುತ್ತದೆ ಹಾಗೂ ಆ ಶಿಕ್ಷಣದ ಉದ್ದೇಶ ಮತ್ತು ಆ ಶಿಕ್ಷಣವನ್ನು ಪಡೆಯುವ ಉಪಾಯಗಳ ಸ್ಪಷ್ಟವಾದ ವ್ಯಾಖ್ಯೆ ಇರಬೇಕು. ಪ್ರಸ್ತುತ ಗ್ರಂಥದಲ್ಲಿ ಆಧುನಿಕತೆಗೆ ತುತ್ತಾದ ಯುವಕರ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡಲಾಗಿದೆ ಹಾಗೂ ಗ್ರಂಥದ ಕೊನೆಯ ಖಂಡದಲ್ಲಿ ಆಧುನಿಕ ವಿದ್ಯಾರ್ಥಿಗಳ ಅಜ್ಞಾನವನ್ನು ನಿವಾರಿಸಲಾಗಿದೆ.

೧ ಜ. ಗ್ರಂಥದಲ್ಲಿನ ಪ್ರಕರಣಗಳ ಆಯ್ಕೆ : ಪ್ರಸ್ತುತ ಗ್ರಂಥದ ಶೀರ್ಷಿಕೆಯನ್ನು ಅರ್ಥಪೂರ್ಣಗೊಳಿಸುವಾಗ ಈ ಮುಂದಿನಂತೆ ಪ್ರಕರಣಗಳನ್ನು ಆಯ್ಕೆ ಮಾಡಲಾಗಿದೆ. ಆಧುನಿಕ ಸಮಾಜವು ಮಾನ್ಯತೆ ಪಡೆದ ಸಭ್ಯತೆಯ ಸಂಕಲ್ಪನೆಯೇ ಆಧುನಿಕ ಶಿಕ್ಷಣದಲ್ಲಿನ ದೋಷಗಳಿಗೆ ಕಾರಣವಾಗಿದೆ. ಅವುಗಳ ವರ್ಣನೆ ಮುಂದಿನ ‘ಪ್ರಕರಣ ೨ ರಲ್ಲಿದೆ. ಶಿಕ್ಷಣದ ದೋಷಗಳ ವರ್ಣನೆಯುನ್ನು ಪ್ರಾಮುಖ್ಯವಾಗಿ ‘ಪ್ರಕರಣ ೩ ರಲ್ಲಿ ಮಾಡಲಾಗಿದೆ. ‘ವ್ಯಾವಹಾರಿಕ ಬುದ್ಧಿಯನ್ನೇ ಶಿಕ್ಷಣಕ್ಕೆ ಉಪಯುಕ್ತವೆಂದು ತಿಳಿಯಲಾಗುತ್ತದೆ (ಪ್ರಕರಣ ೪ ಮತ್ತು ೫), ಈ ನಿರ್ಣಯ ಕೂಡ ಆಧುನಿಕ ಶಿಕ್ಷಣದ ದೋಷವೆಂದೆ ಹೇಳಬೇಕು.

ಯಾವುದರಲ್ಲಿ ಪುರಾವೆಯ ಆಧಾರವಿರುವುದೋ ಅದನ್ನೇ ಸರ್ವೋತ್ತಮ ಶಿಕ್ಷಣವೆನ್ನಲಾಗುವುದು (ಪ್ರಕರಣ ೬), ವ್ಯಾಪಕ ದೃಷ್ಟಿಕೋನವಿರುವುದು (ಪ್ರಕರಣ ೭), ಶಿಕ್ಷಣದ ಉದ್ದೇಶ ಯೋಗ್ಯ ಹಾಗೂ ಸ್ಪಷ್ಟವಾಗಿ ನಿರ್ಧರಿಸಲಾಗಿರುವುದು (ಪ್ರಕರಣ ೮) ಮತ್ತು ಈ ಉದ್ದೇಶಗಳ ಪೂರ್ತಿಗಾಗಿ ವ್ಯಾವಹಾರಿಕ ಉಪಾಯವನ್ನು ಹೇಳಿದ್ದರೆ (ಪ್ರಕರಣ ೯),ಯಾವುದರಿಂದ ಸಾಮಾಜಿಕ ಹಾಗೂ ವೈಯಕ್ತಿಕ ಲಾಭವಾಗಬೇಕೆಂದು (ಪ್ರಕರಣ ೧೦), ಸರ್ವೋತ್ತಮ ಶಿಕ್ಷಣದ ಗುಣವೂ ಇರಬೇಕು. ಆಧುನಿಕತೆಗೆ ತುತ್ತಾಗಿರುವ ಯುವಕರ ಪ್ರಶ್ನೆಗಳಿಗೆ ಯೋಗ್ಯವಾದ ಉತ್ತರವನ್ನು ಕೊಡಬಹುದು (ಪ್ರಕರಣ ೧೧) ಮತ್ತು ಸ್ವಾರ್ಥಾಂಧತೆಯಿಂದ ವಿದ್ಯಾರ್ಥಿಗಳಲ್ಲಿ ಉತ್ಪನ್ನವಾಗಿರುವ ಅಜ್ಞಾನವನ್ನು ನಿವಾರಣೆ ಮಾಡುವುದು (ಪ್ರಕರಣ ೧೨).

(ಮುಂದುವರಿಯುವುದು)

– (ಪೂ.) ಡಾ. ಶಿವಕುಮಾರ ಓಝಾ, ಹಿರಿಯ ಸಂಶೋಧಕರು ಮತ್ತು ಭಾರತೀಯ ಸಂಸ್ಕೃತಿಯ ಅಭ್ಯಾಸಕರು

(ಆಧಾರ : ‘ಸರ್ವೋತ್ತಮ ಶಿಕ್ಷಾ ಕ್ಯಾ ಹೈ ?)