Karnataka Muslim Quota Bill : ರಾಜ್ಯದ ಕಾಂಗ್ರೆಸ್ ಸರಕಾರದಿಂದ ಮುಸಲ್ಮಾನರಿಗೆ ಮೀಸಲಾತಿ ನೀಡಿದ ಪ್ರಕರಣ; ಸಂಸತ್ತಿನಲ್ಲಿ ಕೋಲಾಹಲ !

ನವದೆಹಲಿ – ರಾಜ್ಯದ ಕಾಂಗ್ರೆಸ್ ಸರಕಾರವು ಸರಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡಿದ ಕುರಿತು ಮಾರ್ಚ್ 24 ರಂದು ರಾಜ್ಯಸಭೆಯಲ್ಲಿ ಭಾರಿ ಕೋಲಾಹಲ ಉಂಟಾಯಿತು. ಸಭಾಂಗಣದಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು ಮತ್ತು ಜೆ.ಪಿ. ನಡ್ಡಾ ಅವರು ಕಾಂಗ್ರೆಸ್ ಮೇಲೆ ಒಂದರ ನಂತರ ಒಂದರಂತೆ ಆರೋಪಗಳನ್ನು ಮಾಡಿದರು. ಈ ಆರೋಪಗಳಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉತ್ತರಿಸಲು ಪ್ರಯತ್ನಿಸಿದರು; ಆದರೆ ಅದಾಗ್ಯೂ ಸಂಸತ್ತಿನಲ್ಲಿ ಗೊಂದಲ ಮುಂದುವರೆಯಿತು. ನಂತರ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು.

1. ಸಭಾಂಗಣದ ಕಲಾಪ ಪ್ರಾರಂಭವಾಗುತ್ತಿದ್ದಂತೆ ಸಭಾಪತಿ ಜಗದೀಪ್ ಧನಖಡ ಅವರು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರಿಗೆ ಮಾತನಾಡಲು ಅವಕಾಶ ನೀಡಿದರು. ಸಂವಿಧಾನಾತ್ಮಕ ಹುದ್ದೆಯನ್ನು ಹೊಂದಿರುವ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಮುಸಲ್ಮಾನರಿಗೆ ಮೀಸಲಾತಿ ನೀಡಲು ಪಕ್ಷವು ಸಂವಿಧಾನವನ್ನು ತಿದ್ದುಪಡಿ ಮಾಡಲಿದೆ, ಎಂದು ಹೇಳಿದ್ದಾರೆ, ಎಂದು ರಿಜಿಜು ಹೇಳಿದರು. ಧರ್ಮ ಆಧಾರಿತ ಮೀಸಲಾತಿ ನೀಡಲು ಸಂವಿಧಾನವನ್ನು ಬದಲಾಯಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

2. ಸದನದ ನಾಯಕ ಮತ್ತು ಕೇಂದ್ರ ಸಚಿವ ಜಗತ ಪ್ರಕಾಶ ನಡ್ಡಾ ಅವರು ಕಾಂಗ್ರೆಸ ಸಂವಿಧಾನವನ್ನು ತುಂಡು ಮಾಡುತ್ತಿದೆ ಎಂದು ಆರೋಪಿಸಿದರು. ಭಾರತೀಯ ಸಂವಿಧಾನವನ್ನು ರಚಿಸುವಾಗ ಡಾ. ಅಂಬೇಡ್ಕರ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದು ಭಾರತೀಯ ಸಂವಿಧಾನದ ಅಂಗೀಕೃತ ತತ್ವವಾಗಿದೆ.

3. ಕರ್ನಾಟಕ ಸರಕಾರವು ಸಾರ್ವಜನಿಕ ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ನೀಡಿದೆ.

ಸಂಪಾದಕೀಯ ನಿಲುವು

ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲದಿದ್ದರೂ, ಬಹುಮತದ ಲಾಭವನ್ನು ಪಡೆದು ಸಂವಿಧಾನವನ್ನು ಕಡೆಗಣಿಸಿರುವ ಕಾಂಗ್ರೆಸ್ ದೇಶಕ್ಕೆ ಎಂದಾದರೂ ಕಾನೂನಿನ ಆಡಳಿತವನ್ನು ನೀಡುತ್ತದೆಯೇ?