ಅಖಿಲ ಭಾರತೀಯ ಇಮಾಮ ಅಸೋಸಿಯೇಷನ್‌ನ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರ ಅಸಮಾಧಾನಕಾರಕ ಹೇಳಿಕೆ!
ನವದೆಹಲಿ – ಛತ್ರಪತಿ ಶಿವಾಜಿ ಮಹಾರಾಜರು ಮರಾಠರ ಅನೇಕ ರಾಜರನ್ನು ಕೊಂದಿದ್ದರು ಮತ್ತು ಅವರ ರಾಜ್ಯಗಳನ್ನು ವಶಪಡಿಸಿಕೊಂಡಿದ್ದರು. (ಸ್ವರಾಜ್ಯ ದ್ರೋಹಿಗಳಿಗೆ ಶಿವಾಜಿ ಮಹಾರಾಜರು ತಕ್ಕ ಪಾಠ ಕಲಿಸಿದ್ದರು ಎಂಬುದನ್ನು ರಶೀದಿ ಉದ್ದೇಶಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ! – ಸಂಪಾದಕರು) ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಗಳ ಬಗ್ಗೆ ಮಾತನಾಡುವಷ್ಟು ದೊಡ್ಡ ಯಶಸ್ಸನ್ನು ಅವರು ಸಾಧಿಸಲಿಲ್ಲ ಎಂದು ಅಖಿಲ ಭಾರತೀಯ ಇಮಾಮ್ ಅಸೋಸಿಯೇಷನ್‌ನ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅಸಮಾಧಾನಕಾರಕ ಹೇಳಿಕೆ ನೀಡಿದ್ದಾರೆ. ಮೌಲಾನಾ ಸಾಜಿದ್ ರಶೀದಿ ಅವರು ಮೇವಾಡದ ರಾಜ ಮಹಾರಾಣಾ ಸಾಂಗಾ ಅವರ ಬಗ್ಗೆಯೂ ಅಸಮಾಧಾನಕಾರಕ ಹೇಳಿಕೆ ನೀಡಿದ್ದಾರೆ. ಮೊಘಲ್ ಬಾದಶಾಹ ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಮಹಾರಾಣಾ ಸಾಂಗಾ. ಮಹಾರಾಣಾ ಸಾಂಗಾ ಅನೇಕ ರಜಪೂತ ರಾಜರನ್ನು ಕೊಂದಿದ್ದರು ಎಂದು ಸಾಜಿದ್ ರಶೀದಿ ಹೇಳಿದರು.
‘ಮಹಾರಾಣಾ ಸಾಂಗಾ ಬಾಬರ್‌ನನ್ನು ಭಾರತಕ್ಕೆ ಕರೆತಂದರು!’ – ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿ ಲಾಲ್ ಸುಮನ್ಮೌಲಾನಾ ರಶೀದಿ ಅವರಿಗೂ ಮುನ್ನ ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿ ಲಾಲ್ ಸುಮನ್ ಕೂಡ ರಾಜ್ಯಸಭೆಯಲ್ಲಿ ಮಹಾರಾಣಾ ಸಾಂಗಾ ಅವರ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿದ್ದರು. ‘ಬಿಜೆಪಿ ಜನರು ‘ಮುಸ್ಲಿಮರಲ್ಲಿ ಬಾಬರ್‌ನ ಡಿಎನ್‌ಎ ಇದೆ’ ಎಂದು ಹೇಳುತ್ತಾರೆ; ಆದರೆ ಆ ಬಾಬರ್‌ನನ್ನು ಭಾರತಕ್ಕೆ ಕರೆತಂದವರು ಯಾರು ಎಂದು ನಾನು ತಿಳಿಯಲು ಬಯಸುತ್ತೇನೆ. ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಇಬ್ರಾಹಿಂ ಲೋದಿಯನ್ನು ಸೋಲಿಸಲು ರಾಣಾ ಸಾಂಗಾ ಬಾಬರ್‌ನನ್ನು ಕರೆತಂದರು. (ಅಬ್ದಾಲಿ ಅವರನ್ನು ಭಾರತಕ್ಕೆ ಯಾರು ಕರೆದರು ಎಂದು ಸುಮನ್ ಏಕೆ ಹೇಳಲಿಲ್ಲ? – ಸಂಪಾದಕರು) ಮುಸ್ಲಿಮರು ಬಾಬರ್‌ನ ವಂಶಸ್ಥರಾಗಿದ್ದರೆ, ನೀವು ಆ ದೇಶದ್ರೋಹಿ ರಾಣಾ ಸಾಂಗಾ ಅವರ ವಂಶಸ್ಥರು’ ಎಂದು ಸುಮನ್ ಕಿಡಿ ಕಾರಿದರು. ಸಂಸದ ಸುಮನ್ ಅವರ ಹೇಳಿಕೆಯನ್ನು ಅನೇಕ ಇತಿಹಾಸಕಾರರು ತಿರಸ್ಕರಿಸಿದ್ದಾರೆ. ಸುಮನ್ ಅವರ ಹೇಳಿಕೆ ಸುಳ್ಳು ಎಂದು ಇತಿಹಾಸಕಾರರು ಸ್ಪಷ್ಟಪಡಿಸಿದ್ದಾರೆ. |
ಸಂಪಾದಕೀಯ ನಿಲುವು
|