ಚಾಮರಾಜನಗರದ ಒಂದು ಖಾಸಗಿ ಶಾಲೆಯಲ್ಲಿ ವಿಜ್ಞಾನ ಯೋಜನೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರ ಯೋಜನೆಯ ಮೂಲಕ ದಾವೆ
ಚಾಮರಾಜನಗರ – ಇಲ್ಲಿಯ ಒಂದು ಖಾಸಗಿ ಶಾಲೆಯಲ್ಲಿ ವಿಜ್ಞಾನ ಯೋಜನೆಯಲ್ಲಿ ಅಪ್ರಾಪ್ತ ಮುಸಲ್ಮಾನ ವಿದ್ಯಾರ್ಥಿನಿಯರು ೨ ಗೋರಿಗಳು ಮತ್ತು ಅದರಲ್ಲಿ ೨ ಶವ ಪೆಟ್ಟಿಗೆಗಳನ್ನು ತೋರಿಸಿದ್ದರು. ಅದರಲ್ಲಿ ೨ ಗೊಂಬೆಗಳು ಇದ್ದವು. ಒಂದು ಗೊಂಬೆಗೆ ಬುರ್ಖ ಹಾಕಲಾಗಿತ್ತು, ಹಾಗೂ ಇನ್ನೊಂದು ಗೊಂಬೆಗೆ ತುಂಡು ಬಟ್ಟೆ ಹಾಕಲಾಗಿತ್ತು. ಬುರ್ಖಾ ಹಾಕಿರುವ ಗೊಂಬೆಗೆ ಹೂವಿನಿಂದ ಅಲಂಕರಿಸಿ ಶವಪೆಟ್ಟಿಗೆಯಲ್ಲಿ ಇಡಲಾಗಿತ್ತು. ಇನ್ನೊಂದು ಗೊಂಬೆ ಹಾವು ಮತ್ತು ಚೇಳಿನಿಂದ ತುಂಬಿರುವ ಶವಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಮಾತನಾಡಿ, ನೀವು ಬುರ್ಖಾ ಧರಿಸಿದರೆ, ಸಾವಿನ ನಂತರ ದೇಹಕ್ಕೆ ಏನು ಆಗುವುದಿಲ್ಲ; ಆದರೆ ನೀವು ತುಂಡು ಬಟ್ಟೆ ಧರಿಸಿದರೆ, ನೀವು ನರಕಕ್ಕೆ ಹೋಗುವಿರಿ ಮತ್ತು ಹಾವು ಚೇಳು ನಿಮ್ಮ ದೇಹವನ್ನು ತಿನ್ನುತ್ತವೆ, ಎಂದು ಹೇಳಿದ್ದಾರೆ. ಅದರ ನಂತರ ಶಿಕ್ಷಣ ಇಲಾಖೆಯೂ ವಿಚಾರಣೆಯ ಆದೇಶ ನೀಡಿದೆ.
೧. ಇಸ್ಲಾಮಿ ಪುಸ್ತಕದ ಆಧಾರ ನೀಡುತ್ತಾ, ಈ ವಿದ್ಯಾರ್ಥಿನಿ ಮಾತು ಮುಂದುವರೆಸಿ, ಯಾವ ಪುರುಷನು ಸ್ವಂತ ಪತ್ನಿಯನ್ನು ಬುರ್ಖಾ ಇಲ್ಲದೆ ಮನೆಯಲ್ಲಿ ಓಡಾಡಲು ಬಿಡುತ್ತಾನೆ, ಅವನು ವ್ಯಭಿಚಾರಿಯಾಗಿದ್ದಾನೆ.
೨. ವಿದ್ಯಾರ್ಥಿಯು ಮಾಡಿರುವ ಈ ಟಿಪ್ಪಣಿಯ ಬಗ್ಗೆ ಎಲ್ಲೆಡೆ ಖಂಡನೆ ಆಗುತ್ತಿದೆ. ‘ಇಂತಹ ಶಿಕ್ಷಣ ವ್ಯವಸ್ಥೆಯಲ್ಲಿ ಈ ರೀತಿಯ ಹೇಳಿಕೆ ಹೇಗೆ ನೀಡಲು ಸಾಧ್ಯ ?’ ಎಂದು ಅನೇಕರು ಪ್ರಶ್ನಿಸಿದ್ದಾರೆ.
೩. ಸಾಮಾಜಿಕ ಜಾಲತಾಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇವರನ್ನು ಪ್ರಶ್ನಿಸಲಾಗುತ್ತಿದೆ. ಈ ಪ್ರಕರಣದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಮತ್ತು ವಿಚಾರಣೆ ನಡೆಸಲು ಆಗ್ರಹಿಸಲಾಗುತ್ತಿದೆ.
೪. ಚಾಮರಾಜನಗರದ ಸಾರ್ವಜನಿಕ ಸೂಚನಾ ಉಪ ಸಂಚಾಲಕ ರಾಜೇಂದ್ರ ರಾಜೆ ಉರ್ಸ್ ಇವರು ಪ್ರಸಾರ ವಾಗುತ್ತಿರುವ ವಿಡಿಯೋದ ಸತ್ಯಾಸತ್ಯ ಬಗ್ಗೆ ಅನುಮೋದಿಸುತ್ತಾ ಅಧಿಕಾರಿಗಳು ಈ ಪ್ರಕರಣದ ಕುರಿತು ವಿಚಾರ ಮಾಡುತ್ತಿದ್ದಾರೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು
|