ಶಾಲೆಯಲ್ಲಿ ಶಿಸ್ತು ಬೇಕಿದ್ದರೆ ಶಿಕ್ಷಕರ ಕೈಯಲ್ಲಿ ಕೋಲು ಇರಬೇಕು ! – ಕೇರಳ ಉಚ್ಚ ನ್ಯಾಯಾಲಯ

ಕೇರಳ ಉಚ್ಚ ನ್ಯಾಯಾಲಯದ ಆದೇಶ

ತಿರುವನಂತಪುರಂ (ಕೇರಳ) – ಶಿಕ್ಷಕರಿಗೆ ಕೋಲು ಇಟ್ಟುಕೊಳ್ಳಲು ಅನುಮತಿ ಇರಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಇರುತ್ತದೆ, ಹೀಗೆ ಇದ್ದರು ಕೂಡ ಅವರು ಕೋಲಿನ ಉಪಯೋಗ ಮಾಡುವುದು ಯೋಗ್ಯವಲ್ಲ. ಶಾಲೆಯಲ್ಲಿ ಶಿಸ್ತು ಇರಬೇಕು ಎಂದು ಕೋಲು ಸಾಕು, ಎಂದು ಕೇರಳ ಉಚ್ಚ ನ್ಯಾಯಾಲಯವು ಒಂದು ಪ್ರಕರಣದಲ್ಲಿ ಆದೇಶ ನೀಡಿದೆ. ಇದರಲ್ಲಿ ವಿದ್ಯಾರ್ಥಿಗೆ ಕೋಲಿನಿಂದ ಹೊಡೆದಿರುವ ಆರೋಪ ಶಿಕ್ಷಕನ ಮೇಲೆ ಇತ್ತು. ‘ವಿದ್ಯಾರ್ಥಿಯು ಅಭ್ಯಾಸದ ಕುರಿತು ಗಂಭೀರವಾಗಬೇಕು ಎಂಬ ಉದ್ದೇಶವಾಗಿತ್ತು, ಎಂದು ಈ ಶಿಕ್ಷಕರು ವಿಚಾರಣೆಯ ಸಮಯದಲ್ಲಿ ಹೇಳಿದರು. ನ್ಯಾಯಾಲಯವು ಕೇರಳದ ಪೊಲೀಸ ಅಧಿಕಾರಿಗಳಿಗೆ ಇದಕ್ಕೆ ಸಂಬಂಧಿತ ಸುತ್ತೋಲೆ ಹೊರಡಿಸುವ ಆದೇಶ ನೀಡಿದೆ. ಇದು ಒಂದು ತಿಂಗಳ ಜಾರಿಗೊಳಿಸಲು ಕೂಡ ಆದೇಶಿಸಲಾಗಿದೆ. ಉಚ್ಚ ನ್ಯಾಯಾಲಯವು, ಯಾವುದಾದರೂ ಶಿಕ್ಷಕರು ವಿದ್ಯಾರ್ಥಿಗೆ ಹೊಡೆದರೆ ಅಥವಾ ತಳ್ಳಿದರೆ, ಆಗ ಅದರಲ್ಲಿ ತಪ್ಪು ಉದ್ದೇಶ ಇಲ್ಲವಾದರೆ ಅದು ಅಪರಾಧದ ಪ್ರಕರಣವಾಗುವುದಿಲ್ಲ. ಅದನ್ನು ಅಪರಾಧ ಎಂದು ನಿಶ್ಚಯಿಸಬಾರದು. ಇಲ್ಲವಾದರೆ ಶಿಕ್ಷಕರು ಅವರ ಜವಾಬ್ದಾರಿ ವ್ಯವಸ್ಥಿವಾಗಿ ವಹಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಕರ ವಿರುದ್ಧ ದೂರು ನೀಡಿದರೆ ಮೊದಲು ಈ ಪ್ರಕರಣವನ್ನು ವ್ಯವಸ್ಥಿತವಾಗಿ ವಿಚಾರಣೆ ನಡೆಸಬೇಕು. ಆಗ ಮಾತ್ರ ಪ್ರಕರಣ ದಾಖಲಿಸಲು ದೃಢವಾದ ಆಧಾರ ಇದೆ ಅಥವಾ ಇಲ್ಲ, ಇದನ್ನು ಪರಿಶೀಲಿಸಬೇಕು.

ಸಂಪಾದಕೀಯ ನಿಲುವು

ಕೇವಲ ಶಾಲೆಯಲ್ಲಿ ಅಷ್ಟೇ ಅಲ್ಲದೆ, ಸಂಸತ್ತಿನಲ್ಲಿ ಮತ್ತು ಸಚಿವ ಸಂಪುಟದಲ್ಲಿ ಕೂಡ ಅಧ್ಯಕ್ಷರು ಮತ್ತು ಸಭಾಪತಿಗಳು ಕೋಲು ಕೈಗೆತ್ತಿಕೊಳ್ಳಲು ಅನುಮತಿ ನೀಡಬೇಕು. ಅದರಿಂದ ಅಶಿಸ್ತ ರಂಪಾಟ ನಡೆಸುವ ಜನ ಪ್ರತಿನಿಧಿಗಳನ್ನು ಸರಿದಾರಿಗೆ ತರಬಹುದು !