|
ಪುಣೆ – ಇಲ್ಲಿನ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಬಾಲಕಿಯರ ಹಾಸ್ಟೆಲ್‌ನಲ್ಲಿ 4 ವಿದ್ಯಾರ್ಥಿನಿಯರು ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹಾಸ್ಟೆಲ್‌ನ ಕೋಣೆಯೊಂದರಲ್ಲಿ ಮದ್ಯದ ಬಾಟಲಿಗಳು ಮತ್ತು ನೂರಾರು ಸಿಗರೇಟ್ ಪ್ಯಾಕೆಟ್‌ಗಳು ಪತ್ತೆಯಾಗಿವೆ. ಆ ಕೋಣೆಯಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಫೋಟೋಗಳು ಮತ್ತು ವಿಡಿಯೋಗಳ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಸಂಬಂಧಪಟ್ಟ ವಿದ್ಯಾರ್ಥಿನಿ ಈ ಮಾಹಿತಿಯನ್ನು ಹಾಸ್ಟೆಲ್ ಮಹಿಳಾ ಅಧಿಕಾರಿಗೆ ಹಲವು ಬಾರಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ವಿದ್ಯಾರ್ಥಿನಿ ಕುಲಸಚಿವರು ಮತ್ತು ಉಪಕುಲಪತಿಗಳಿಗೆ ಪತ್ರ ಬರೆದು 4 ವಿದ್ಯಾರ್ಥಿನಿಯರು ತನ್ನ ಕೋಣೆಯಲ್ಲಿ ಮದ್ಯಪಾನ ಮಾಡಿ ಸಿಗರೇಟ್ ಸೇದುತ್ತಿದ್ದಾರೆ ಎಂದು ಅರ್ಜಿಯ ಮೂಲಕ ತಿಳಿಸಿದ್ದಾಳೆ; ಆದರೆ ಹಾಸ್ಟೆಲ್ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾಳೆ. ಮದ್ಯಪಾನ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ಕೊನೆಯ 2 ತಿಂಗಳು ಬಾಕಿ ಇದೆ ಎಂದು ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಪ್ಪಿಸಲಾಗಿದೆ ಎಂದು ದೂರಿನ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಪ್ರಕರಣದಲ್ಲಿ 2 ದೊಡ್ಡ ಬ್ಯಾಗ್‌ಗಳಲ್ಲಿ ತುಂಬಿದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.
‘ನನಗೆ ಗೊತ್ತಿಲ್ಲ!'(ಅಂತೆ) – ಉಪಕುಲಪತಿಗಳ ಸ್ಪಷ್ಟನೆ
ಉಪಕುಲಪತಿ ಡಾ. ಸುರೇಶ್ ಗೋಸಾವಿ ಇವರು, “ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಷಯದ ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು” ಎಂದು ಹೇಳಿದರು.
ಸಂಪಾದಕೀಯ ನಿಲುವುವಿದ್ಯಾರ್ಥಿನಿ ಹಲವು ಬಾರಿ ದೂರು ನೀಡಿದರೂ ತನಗೆ ತಿಳಿದಿಲ್ಲ ಎಂದು ಉಪಕುಲಪತಿಗಳು ಹೇಗೆ ಹೇಳುತ್ತಾರೆ? |
ಕ್ರಮ ಕೈಗೊಳ್ಳದಿದ್ದರೆ ಎಬಿವಿಪಿಯಿಂದ ಪ್ರತಿಭಟನೆ ಎಚ್ಚರಿಕೆ!
ಈ ಪ್ರಕರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ, “ಹಾಸ್ಟೆಲ್‌ನ ಪ್ರವೇಶ ದ್ವಾರದಲ್ಲಿ ಬಯೋಮೆಟ್ರಿಕ್ ಇದ್ದರೂ ಮಾದಕ ವಸ್ತುಗಳು ಒಳಗೆ ಹೇಗೆ ಬರುತ್ತವೆ? ಸಿಬ್ಬಂದಿಯೇ ಈ ವಸ್ತುಗಳನ್ನು ಪೂರೈಸುತ್ತಾರೆಯೇ? ಎಂಬುದರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಸಂಬಂಧಪಟ್ಟ ವಿದ್ಯಾರ್ಥಿನಿಯ ದೂರಿನ ಬಗ್ಗೆ ಗಮನ ಹರಿಸದೆ ಆಕೆಯ ಮೇಲೆ ಒತ್ತಡ ಹೇರಲಾಗಿದೆ. ಈ ಪ್ರಕರಣದ ತನಿಖೆಯಾಗಬೇಕು. ಹಾಗೂ ವಿದ್ಯಾರ್ಥಿನಿಯ ಮೇಲೆ ಒತ್ತಡ ಹೇರಿದವರನ್ನು ಅಮಾನತುಗೊಳಿಸಬೇಕು. ಪುರುಷ ಪ್ರಾಧ್ಯಾಪಕರೊಬ್ಬರು ಅನುಮತಿಯಿಲ್ಲದೆ ಬಾಲಕಿಯರ ಹಾಸ್ಟೆಲ್‌ಗೆ ಹೋಗಿರುವುದು ಕೂಡ ಬೆಳಕಿಗೆ ಬಂದಿದೆ. ಅವರನ್ನೂ ವಿಚಾರಣೆಗೊಳಪಡಿಸಬೇಕು. ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮತ್ತು ವಿಶ್ವವಿದ್ಯಾಲಯದ ಆವರಣವನ್ನು ಮಾದಕ ದ್ರವ್ಯ ಮುಕ್ತವಾಗಿಸಲು ವಿಶ್ವವಿದ್ಯಾಲಯದ ಆಡಳಿತವು ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು”, ಎಂದು ಹೇಳಲಾಗಿದೆ.
ಸಂಪಾದಕೀಯ ನಿಲುವುವಿದ್ಯೆಯ ತವರೂರಾದ ಪುಣೆಯಲ್ಲಿ, ಅದರಲ್ಲೂ ಪುಣೆ ವಿಶ್ವವಿದ್ಯಾಲಯದಲ್ಲಿ ಇಂತಹ ಘಟನೆಗಳು ನಡೆಯುವುದು ಪುಣೆ ನಿವಾಸಿಗಳಿಗೆ ನಾಚಿಕೆಗೇಡಿನ ಸಂಗತಿ! ಮದ್ಯಪಾನವನ್ನು ತಡೆಯುವಲ್ಲಿ ಹಾಸ್ಟೆಲ್ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಇಂತಹ ಗಂಭೀರ ಪ್ರಕರಣದ ಬಗ್ಗೆ ಪದೇ ಪದೇ ದೂರು ನೀಡಿದರೂ ಕ್ರಮ ಕೈಗೊಳ್ಳದ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳನ್ನು ವಜಾಗೊಳಿಸಬೇಕು! |