ಅಕೋಲಾದಲ್ಲಿ 10 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಶಾಲಾ ನೌಕರನ ಬಂಧನ!

ನೌಕರನನ್ನು ಶಾಲೆಯಿಂದ ಅಮಾನತ್ತು ಮಾಡಿದ ಆಡಳಿತ ಮಂಡಳಿ

ಅಕೋಲಾ – ಇಲ್ಲಿನ ಮರಾಠಿ ಮಾಧ್ಯಮ ಶಾಲೆಯ ನೌಕರ ಹೇಮಂತ್ ವಿಠ್ಠಲ್ ಚಾಂದೇಕರ್ (ವಯಸ್ಸು 43 ವರ್ಷ) 10 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಪ್ರಕರಣದಲ್ಲಿ ಜಿಲ್ಲಾ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಅಧಿಕಾರಿ ಕಚೇರಿಯ ಅಡಿಯಲ್ಲಿನ ‘ಚೈಲ್ಡ್ ಹೆಲ್ಪ್ಲೈನ್’ನ ಮಹಿಳಾ ಸಂಯೋಜಕರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಶಾಲೆಯ ಕೆಲವು ಶಿಕ್ಷಕಿಯರು ತರಬೇತಿಗಾಗಿ ಮಾರ್ಚ್ 5 ರಿಂದ ಪಟ್ಟಣದಿಂದ ಹೊರಗೆ ಹೋಗಿದ್ದರು. ಹೀಗಾಗಿ ಶಾಲೆಯ ಜವಾಬ್ದಾರಿ ಪುರುಷ ಸಿಬ್ಬಂದಿಯ ಮೇಲೆ ಇತ್ತು. ಈ ಪರಿಸ್ಥಿತಿಯ ಲಾಭ ಪಡೆದ ಆರೋಪಿ ನಾಲ್ಕನೇ ತರಗತಿ ಮತ್ತು ಏಳನೇ ತರಗತಿಯಲ್ಲಿ ಓದುತ್ತಿದ್ದ 10 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಶಿಕ್ಷಕಿಯರು ತರಬೇತಿ ಮುಗಿಸಿ ಶಾಲೆಗೆ ಮರಳಿದ ನಂತರ ಕೆಲವು ವಿದ್ಯಾರ್ಥಿನಿಯರು ತಮಗೆ ನಡೆದ ಎಲ್ಲ ವಿಷಯವನ್ನು ತಿಳಿಸಿದ್ದಾರೆ. ಈ ಬಗ್ಗೆ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳು ಮಾರ್ಚ್ 8 ರಿಂದ ಆತನನ್ನು ಶಾಲೆಯಿಂದ ತೆಗೆದುಹಾಕಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಕಾಮುಕ ಶಾಲಾ ನೌಕರರು ಇರುವುದು ಶೈಕ್ಷಣಿಕ ಕ್ಷೇತ್ರಕ್ಕೆ ಕಳಂಕವೇ ಹೌದು. ಇಂತಹ ಕಾಮುಕರನ್ನು ಕೂಡಲೇ ಜೈಲಿಗೆ ಹಾಕಬೇಕು!