ಮಕ್ಕಳ ಶಾಲಾ ಬ್ಯಾಗಿನಲ್ಲಿ ಚಾಕು, ಕಾಂಡೋಮ್ ಮತ್ತು ತಂಬಾಕು ಪತ್ತೆ

ವಿಚಿತ್ರವಾದ ಕೇಶವಿನ್ಯಾಸ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಕೂದಲನ್ನು ಉಪಮುಖ್ಯೋಪಾಧ್ಯಾಯರು ಕತ್ತರಿಸಿದರು

ನಾಸಿಕ – ಇಲ್ಲಿನ ಇಗತಪುರಿ ಪ್ರದೇಶದ ಘೋಟಿಯ ಒಂದು ಖಾಸಗಿ ಶಾಲೆಯಲ್ಲಿ 9 ನೇ ತರಗತಿಯ 5-6 ವಿದ್ಯಾರ್ಥಿಗಳ ಪುಸ್ತಕ ಚೀಲಗಳಲ್ಲಿ ಚಾಕು, ಸೈಕಲ್ ಚೈನ, ಕಬ್ಬಿಣದ ಕಡಗ, ಕಾಂಡೋಮ್ ಮತ್ತು ತಂಬಾಕುಗಳು ಕಂಡುಬಂದಿವೆ. ಉಪಮುಖ್ಯೋಪಾಧ್ಯಾಯರು ಇದ್ದಕ್ಕಿದ್ದಂತೆ ಪುಸ್ತಕ ಚೀಲಗಳನ್ನು ಪರಿಶೀಲಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿತು. ನಂತರ ಪೋಷಕರನ್ನು ಕರೆಸಿ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಲಾಯಿತು. ಕೆಲವು ವಿದ್ಯಾರ್ಥಿಗಳು ವಿಚಿತ್ರವಾದ ಕೇಶವಿನ್ಯಾಸ ಮಾಡಿಕೊಂಡಿದ್ದರು. ಉಪಮುಖ್ಯೋಪಾಧ್ಯಾಯರು ಈ ವಿದ್ಯಾರ್ಥಿಗಳ ಕೂದಲನ್ನು ಕತ್ತರಿಸಿದರು. ವಿದ್ಯಾರ್ಥಿಗಳಿಗೆ ಶಿಸ್ತು ಬರಬೇಕು ಎಂಬ ಕಾರಣಕ್ಕೆ ಮುಂದೆಯೂ ಪ್ರತಿದಿನ ಇದೇ ರೀತಿ ಪರಿಶೀಲನೆ ಮುಂದುವರಿಯಲಿದೆ ಎಂದು ಉಪಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಭಾವಿಪೀಳಿಗೆ ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವ ಬದಲು, ಅಧೋಗತಿಗೆ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ಸಂಸ್ಕಾರವನ್ನು ನೀಡಲು ಪೋಷಕರು, ಶಿಕ್ಷಕರು ಮತ್ತು ಸರಕಾರ ಪ್ರಯತ್ನಿಸಬೇಕು!
  • ಸಧ್ಯದ ಕ್ಲಿಷ್ಟ ಪರಿಸ್ಥಿತಿಯನ್ನು ಗಮನಿಸಿದರೆ, ಎಲ್ಲಾ ವಿದ್ಯಾರ್ಥಿಗಳ ಪುಸ್ತಕ ಚೀಲಗಳನ್ನು ಪರಿಶೀಲಿಸಬೇಕೇ? ಎನ್ನುವುದನ್ನು ಶಾಲೆಗಳು ಸಕಾಲದಲ್ಲಿ ನಿರ್ಧರಿಸಬೇಕು!