ಪ್ರಧಾನಮಂತ್ರಿ ಕಾರ್ಯಾಲಯವು ಶ್ರೀರಾಮಮಂದಿರ ದೇಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೇಳಿದೆ

ಅಯೋಧ್ಯೆಯ ಶ್ರೀರಾಮಮಂದಿರದ ದೇಣಿಗೆಯಿಂದ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮಾಡಿರುವ ಆರೋಪವನ್ನು ಪ್ರಧಾನಮಂತ್ರಿ ಕಾರ್ಯಾಲಯವು ಗಮನಕ್ಕೆ ತೆಗೆದುಕೊಂಡು ‘ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್’ನಿಂದ ವರದಿ ಕೇಳಿದೆ.

ಅಮೆರಿಕದ ‘ಬ್ಲೂಮ್‌ ಬರ್ಗ್’ ಸುದ್ದಿ ಸಂಸ್ಥೆಯು ತನ್ನ ಭಾರತ ವಿರೋಧಿ ಲೇಖನ ಹಿಂಪಡೆಯಿತು!

ಇಂತಹ ವೃತ್ತಪತ್ರಿಕೆಗಳ ಭಾರತೀಯ ಆವೃತ್ತಿಗಳು ಹಾಗೂ ಅವುಗಳ ಜಾಲತಾಣಗಳ ಮೇಲೆ ಸರಕಾರವು ತಕ್ಷಣವೇ ನಿಷೇಧ ಹೇರಬೇಕು, ಆಗ ಮಾತ್ರ ಭವಿಷ್ಯದಲ್ಲಿ ಇಂತಹ ಕೃತ್ಯವನ್ನು ಮಾಡಲು ಯಾರೂ ಧೈರ್ಯಮಾಡುವುದಿಲ್ಲ!

ಪ್ರಧಾನಿ ಮೋದಿ ನನಗೆ ತುಂಬಾ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ! : Donald Trump

ಹಲವು ವರ್ಷಗಳ ಕಾಲ ಭಾರತವು ಅಮೆರಿಕದ ದುರುಪಯೋಗ ಪಡೆದುಕೊಂಡಿತು. ಅವರು ನಮ್ಮ ಮೇಲೆ ಭಾರಿ ಆಮದು ಸುಂಕವನ್ನು ಹೇರಿದರು ಮತ್ತು ಸ್ವತಃ ಮಾತ್ರ ಏನನ್ನೂ ನೀಡಲಿಲ್ಲ ಎಂದು ಟ್ರಂಪ್ ಆರೋಪಿಸಿದರು. ‘ಹಾರ್ಲೆ ಡೇವಿಡ್ಸನ್’ ಸಂಸ್ಥೆಗೆ ಭಾರತಕ್ಕೆ ಬರಲು ಬಿಡುತ್ತಿರಲಿಲ್ಲ.

ಸಿಂಹಸ್ಥ ಕುಂಭಮೇಳ; ಪ್ರತಿ ಅಖಾಡಕ್ಕೆ 5 ಕೋಟಿ ರೂಪಾಯಿ ನಿಧಿ ಘೋಷಣೆ! – ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್

ಮುಖ್ಯಮಂತ್ರಿ ಮುಂದೆ ಮಾತನಾಡಿ, “ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ನಾಶಿಕ್‌ನಲ್ಲಿರುವ ಕುಂಡ (ಕಲ್ಯಾಣಿ), ರಾಮಕಾಲ್ ಪಥ, ದೇವಸ್ಥಾನ ಮತ್ತು ಗುಹೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಅಮೆರಿಕದ ಅಪ್ರಾಮಾಣಿಕತೆಯೇ ಯುದ್ಧದ ಅಂತ್ಯಕ್ಕೆ ಅತಿದೊಡ್ಡ ಅಡ್ಡಿ! – ಇರಾನ್

ಅಮೆರಿಕದ ಅಪ್ರಾಮಾಣಿಕತೆಯೇ ಈ ಯುದ್ಧದ ಅಂತ್ಯಕ್ಕೆ ಅತಿದೊಡ್ಡ ಅಡ್ಡಿಯಾಗುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಚಿ ಅವರು ಅಮೆರಿಕವನ್ನು ಟೀಕಿಸುತ್ತಾ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನಿ ಶಿಯಾ ಮುಸ್ಲಿಂ ಕಾರ್ಮಿಕರಿಗೆ ದೇಶ ತೊರೆಯುವಂತೆ ಸಂಯುಕ್ತ ಅರಬ್ ಎಮಿರೇಟ್ಸ್ (UAE) ಆದೇಶ !

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎಂದರೆ, ಸಂಯುಕ್ತ ಅರಬ್ ಎಮಿರೇಟ್ಸ್ ಪಾಕಿಸ್ತಾನಕ್ಕೆ ನೀಡಿದ್ದ 3.5 ಬಿಲಿಯನ್ ಡಾಲರ್ ಸಾಲವನ್ನು ತಕ್ಷಣವೇ ಮರುಪಾವತಿಸುವಂತೆ ಕೇಳಿದೆ ಎಂದು ವರದಿಯಾಗಿದೆ.

ನಾಗ್ಪುರದಲ್ಲಿ ಸೈಬರ್ ಅಪರಾಧ ಕುರಿತು ಹಿರಿಯ ಅಧಿಕಾರಿಗಳಿಗೆ ಸುಳ್ಳು ವರದಿ ನೀಡಿದ ೯ ಪೊಲೀಸರ ಅಮಾನತು!

ಪುಣೆಯಲ್ಲಿ ಈ ತಂಡವು ಶಂಕಿತ ಆರೋಪಿ ಏಕಾಂಶ್ ಜೈನ್‌ನನ್ನು ಭೇಟಿ ಮಾಡಿ ನೋಟಿಸ್ ನೀಡಿತ್ತು; ಆದರೆ ನಾಗ್ಪುರಕ್ಕೆ ಮರಳಿದ ನಂತರ ತಂಡವು ‘ಆರೋಪಿ ಸಿಕ್ಕಿಲ್ಲ,’ ಎಂದು ಹಿರಿಯರಿಗೆ ಸುಳ್ಳು ವರದಿ ಸಲ್ಲಿಸಿತು. ತನಿಖೆಯ ಹೆಸರಿನಲ್ಲಿ ಆರೋಪಿಯಿಂದ ದೊಡ್ಡ ಮಟ್ಟದ ಹಣ ವಸೂಲಿ ಮಾಡಲಾಗಿದೆ ಎಂಬ ಚರ್ಚೆಯೂ ನಡೆದಿದೆ.

ಆರ್ಥಿಕ ದಿವಾಳಿತನದತ್ತ ಸಾಗುತ್ತಿರುವ ಪಾಕಿಸ್ತಾನ ಮತ್ತೆ ಮದ್ಯ ಮಾರಾಟ ಮಾಡಲು ಆರಂಭಿಸಿದೆ!

ಪಾಕಿಸ್ತಾನದಲ್ಲಿ ಮುಸ್ಲಿಂ ಜನಸಂಖ್ಯೆಗಾಗಿ 50 ವರ್ಷಗಳ ಹಿಂದೆ ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ ಮುಸ್ಲಿಮೇತರರಿಗೆ ಕೆಲವು ವಿನಾಯಿತಿಗಳಿವೆ.

ಪಾಕಿಸ್ತಾನದಲ್ಲಿ ಬಲೂನ್ ಅನಿಲದ ಮೂಲಕ ಅಡುಗೆ!

ಅನಿಲ ತುಂಬಿದ ಪ್ಲಾಸ್ಟಿಕ್ ಬಲೂನ್‌ಗಳು ಘರ್ಷಣೆ, ಶಾಖ ಅಥವಾ ಸಣ್ಣ ಕಿಡಿಯಿಂದಲೂ ಯಾವುದೇ ಕ್ಷಣದಲ್ಲಿ ದೊಡ್ಡ ಸ್ಫೋಟಗೊಳ್ಳಬಹುದು ಎಂದು ಭದ್ರತಾ ವಿಶ್ಲೇಷಕರು ಹೇಳಿದ್ದಾರೆ.

ವಿಶಾಖಪಟ್ಟಣಂನಲ್ಲಿ ೧ ಲಕ್ಷ ಕೋಟಿ ರೂಪಾಯಿಗಳ ಅತೀ ಮಹತ್ವಾಕಾಂಕ್ಷೆಯ ‘ಅದಾನಿ ಕನೆಕ್ಸ್’ ಯೋಜನೆಯ ಭೂಮಿಪೂಜೆ!

ಈ ಅಭಿವೃದ್ಧಿ ಯೋಜನೆಯು ಅದಾನಿ ಸಮೂಹದ ವಿಶಾಲ ಬದ್ಧತೆಯ ಒಂದು ಭಾಗವಾಗಿದೆ, ಇದರ ಅಡಿಯಲ್ಲಿ ಸಮೂಹವು ಮುಂದಿನ ದಶಕದಲ್ಲಿ ಭಾರತದ ಎಐ, ಇಂಧನ ಮತ್ತು ಡಿಜಿಟಲ್ ಮೂಲಸೌಕರ್ಯಗಳನ್ನು ಬಲವಾಗಿ ನಿರ್ಮಿಸಲು ೧೦೦ ಬಿಲಿಯನ್ ಡಾಲರ್ ಗಳ (೧೦ ಲಕ್ಷ ಕೋಟಿ ರೂಪಾಯಿಗಳ) ಹೂಡಿಕೆಯನ್ನು ಮಾಡಲಿದೆ.