ತ್ರ್ಯಂಬಕೇಶ್ವರದಲ್ಲಿ ಸಿಂಹಸ್ಥಪರ್ವದ ಮೊದಲನೇ ರಾಜಯೋಗಿ ಸ್ನಾನ ಆಗಸ್ಟ್ ೨, ೨೦೨೭ ರಂದು ನಡೆಯುವುದು !

ಶ್ರೀ ಪಂಚಶಂಭೂ ದಶನಾಮ ಜುನಾ ಆಖಾಡ್ ದ ಹರಿಗಿರಿ ಮಹಾರಾಜ ಇವರ ಉಪಸ್ಥಿತಿಯಲ್ಲಿ ಜುನಾ ಅಖಾಡಾದ ಸಾಧು ಮಹಂತರ ಬೈಠಕ್ ನಡೆಯಿತು. ಈ ಬೈಠಕಿನಲ್ಲಿ ವಿವಿಧ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

ಹರಿದ್ವಾರ ಕುಂಭಮೇಳದಲ್ಲಿನ ನಕಲಿ ಕೊರೊನಾ ಪರೀಕ್ಷಣೆ ಪ್ರಕರಣದಲ್ಲಿ ಈಡಿಯಿಂದ ೪ ರಾಜ್ಯಗಳಲ್ಲಿ ಮುತ್ತಿಗೆ

ಉತ್ತರಾಖಂಡದ ಹರಿದ್ವಾರದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಕುಂಭಮೇಳದ ಆಯೋಜನೆಯ ಸಮಯದಲ್ಲಿ ಕೊರೋನಾ ಪರೀಕ್ಷಣೆಯ ಬಗ್ಗೆ ನಡೆದ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರ್ಯನಿರ್ವಾಹಕ ನಿರ್ದೇಶನಾಲಯವು ಇಲ್ಲಿಯ ಕೆಲವು ಪೆಥಾಲಾಜಿ ಪ್ರಯೋಗಶಾಲೆಗಳ ಮೇಲೆ ದಾಳಿ ನಡೆಸಿದೆ.

ನಿಜವಾದ ‘ಜಾಗರಣೆ !

‘ದೇಶದಲ್ಲಿ ಕೊರೊನಾದ ೨ ನೇ ಅಲೆಯಿರುವಾಗ ಕುಂಭಮೇಳದ ಆಯೋಜನೆಯನ್ನು ಮಾಡಬೇಕಾಗಿತ್ತೇ ?, ‘ಅದನ್ನು ಸಾಂಕೇತಿಕವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲವೇ ?, ಎಂದು ಕೆಲವು ಪ್ರಗತಿಪರ ಹಿಂದೂಗಳು ಪ್ರಶ್ನಿಸಿದ್ದರು. ‘ಕುಂಭಮೇಳದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕುಂಭಮೇಳವನ್ನು ಸಾಂಕೇತಿಕವಾಗಿ ಆಚರಿಸಬೇಕು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಮನವಿ ಮಾಡಿದ್ದರು.

೯ ಲಕ್ಷ ಪರೀಕ್ಷೆಗಳಲ್ಲಿ ಕೇವಲ ಶೇ. ೦.೨ ರಷ್ಟು ವರದಿಗಳು ಮಾತ್ರ ಪಾಸಿಟಿವ್ ! – ಪೊಲೀಸ್ ಇನ್ಸ್‌ಪೆಕ್ಟರ್‌ರ ಮಾಹಿತಿ

ಇಲ್ಲಿ ಕೊರೊನಾದ ವಿಷಯದಲ್ಲಿ ಜನವರಿ ೧ ರಿಂದ ಏಪ್ರಿಲ್ ೩೦ ರವರೆಗೆ ಒಟ್ಟು ೮ ಲಕ್ಷದ ೯೧ ಸಾವಿರದ ಆರ್.ಟಿ.ಪಿ.ಸಿ.ಆರ್.ಗಳ ಪರೀಕ್ಷಣೆ ಮಾಡಲಾಗಿತ್ತು. ಈ ಪೈಕಿ ೧೯೫೪ ಪರೀಕ್ಷೆಗಳು (ಶೇ ೦.೨) ಪಾಸಿಟಿವ್ ಬಂದಿದೆ. ಕುಂಭಮೇಳಕ್ಕೆ ೧೬೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ಏಪ್ರಿಲ್ ೩೦ ರ ಹೊತ್ತಿಗೆ, ಅವರಲ್ಲಿ ಕೇವಲ ೮೮ ಅಂದರೆ ಶೇಕಡಾ ೦.೫ ರಷ್ಟು ಮಾತ್ರ ಪೊಲೀಸರಿಗೆ ಕೊರೊನಾದ ಸೋಂಕು ತಗಲಿತ್ತು.