
ದುಬೈ (ಸಂಯುಕ್ತ ಅರಬ್ ಎಮಿರೇಟ್ಸ್) / ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವಿನ ಸಂಬಂಧದಲ್ಲಿ ದೊಡ್ಡ ಬಿರುಕು ಉಂಟಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಪಾಕಿಸ್ತಾನ ವಹಿಸಿದ ಮಧ್ಯಸ್ಥಿಕೆಯ ಪಾತ್ರ ಹಾಗೂ ಎಮಿರೇಟ್ಸ್ ಮೇಲೆ ನಡೆದ ಇರಾನ್ ದಾಳಿಗಳನ್ನು ಪಾಕಿಸ್ತಾನ ಬಹಿರಂಗವಾಗಿ ಖಂಡಿಸದ ಕಾರಣ ಎಮಿರೇಟ್ಸ್ ಸಿಟ್ಟಿಗೆದ್ದಿದೆ. ಇದರ ಗಂಭೀರ ಪರಿಣಾಮಗಳನ್ನು ಅಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನಿ ನಾಗರಿಕರು ಅನುಭವಿಸಬೇಕಾಗಿದೆ. ದೊಡ್ಡ ಸಂಖ್ಯೆಯ ಪಾಕಿಸ್ತಾನಿ ಶಿಯಾ ಮುಸ್ಲಿಂ ಕಾರ್ಮಿಕರನ್ನು ದೇಶ ಬಿಟ್ಟು ಹೋಗುವಂತೆ ಎಮಿರೇಟ್ಸ್ ಒತ್ತಾಯಿಸಿದೆ. ಸುರಕ್ಷತೆಯ ಕಾರಣಗಳು ಮತ್ತು ರಾಜಕೀಯ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತ ಮಂಡಳಿಯು ಅನೇಕ ಪಾಕಿಸ್ತಾನಿ ನಾಗರಿಕರ ‘ವೀಸಾ’ ನವೀಕರಣ ಮತ್ತು ಹೊಸ ಉದ್ಯೋಗಗಳ ಮೇಲೆ ನಿಷೇಧ ಹೇರಿದೆ.
ಪಾಕಿಸ್ತಾನದ ಆರ್ಥಿಕತೆಯ ಮೇಲೆ ಭಾರಿ ಪರಿಣಾಮ
ಸಂಯುಕ್ತ ಅರಬ್ ಎಮಿರೇಟ್ಸ್ ಪಾಕಿಸ್ತಾನಿ ವಲಸೆ ಕಾರ್ಮಿಕರಿಗೆ ಅತಿ ದೊಡ್ಡ ಉದ್ಯೋಗ ಕೇಂದ್ರವಾಗಿದೆ. ಯುಎಇ ಅಲ್ಲಿ 20 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ನಾಗರಿಕರು ವಾಸಿಸುತ್ತಿದ್ದಾರೆ. ಕಳೆದ ವರ್ಷ ಈ ಕಾರ್ಮಿಕರು ಪಾಕಿಸ್ತಾನಕ್ಕೆ 8 ಬಿಲಿಯನ್ ಡಾಲರ್ (2 ಲಕ್ಷ 22 ಸಾವಿರ ಕೋಟಿ ಪಾಕಿಸ್ತಾನಿ ರೂಪಾಯಿ) ಗಿಂತ ಹೆಚ್ಚಿನ ಹಣವನ್ನು ಕಳುಹಿಸಿದ್ದರು. ಒಂದು ವೇಳೆ ಎಮಿರೇಟ್ಸ್ ಈ ಕಾರ್ಮಿಕರನ್ನು ಹೊರಹಾಕಿದರೆ, ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಮತ್ತು ಈಗಾಗಲೇ ದುರ್ಬಲವಾಗಿರುವ ಆರ್ಥಿಕತೆಯು ಸಂಪೂರ್ಣವಾಗಿ ಕುಸಿಯಲಿದೆ.
3.5 ಬಿಲಿಯನ್ ಡಾಲರ್ (97 ಸಾವಿರದ 285 ಕೋಟಿ ಪಾಕಿಸ್ತಾನಿ ರೂಪಾಯಿ) ಸಾಲ ಮರುಪಾವತಿಗೆ ಎಮಿರೇಟ್ಸ್ ಆಗ್ರಹ
ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಎಂದರೆ, ಸಂಯುಕ್ತ ಅರಬ್ ಎಮಿರೇಟ್ಸ್ ಪಾಕಿಸ್ತಾನಕ್ಕೆ ನೀಡಿದ್ದ 3.5 ಬಿಲಿಯನ್ ಡಾಲರ್ ಸಾಲವನ್ನು ತಕ್ಷಣವೇ ಮರುಪಾವತಿಸುವಂತೆ ಕೇಳಿದೆ ಎಂದು ವರದಿಯಾಗಿದೆ. ಈ ಮೊತ್ತವು ಪಾಕಿಸ್ತಾನದ ಒಟ್ಟು ವಿದೇಶಿ ವಿನಿಮಯ ಮೀಸಲಿನ ಸುಮಾರು ಶೇಕಡಾ 20% ರಷ್ಟಿದೆ. ಪಾಕಿಸ್ತಾನವು ಈ ಮೊತ್ತವನ್ನು ತಕ್ಷಣವೇ ಹಿಂತಿರುಗಿಸಬೇಕಾಗಿ ಬಂದರೆ, ಅದರ ಆರ್ಥಿಕತೆಯು ಸಂಪೂರ್ಣವಾಗಿ ನೆಲಕಚ್ಚುವ ಭೀತಿ ವ್ಯಕ್ತವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation