ಅನಿಲದ ತೀವ್ರ ಅಭಾವದ ಕಾರಣ ಅಡುಗೆ ಅನಿಲವನ್ನು ಬಲೂನ್‌ಗಳಲ್ಲಿ ಸಂಗ್ರಹಿಸುತ್ತಿರುವ ಜನರು!

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ತಲೆದೋರಿರುವ ತೀವ್ರ ಅನಿಲ (ಗ್ಯಾಸ್) ಅಭಾವದಿಂದಾಗಿ, ಜನರು ಈಗ ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅನಿಲವನ್ನು ತುಂಬಿಸಿ ಅದನ್ನು ಅಡುಗೆಗಾಗಿ ಬಳಸುತ್ತಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಅಪಾಯಕಾರಿ ಪದ್ಧತಿಯು ಕರಾಚಿಯ ಓರಂಗಿ ಟೌನ್ ಪ್ರದೇಶ ಹಾಗೂ ಮೊಮಿನಾಬಾದ್‌ನಲ್ಲಿ ಕಂಡುಬಂದಿದೆ. ಅನಿಲ ಪೂರೈಕೆಯು ಅನಿಯಮಿತವಾಗಿರುವುದರಿಂದ ತಮ್ಮ ಮುಂದೆ ಬೇರೆ ದಾರಿಯೇ ಇಲ್ಲ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಮನೆಯ ಪೈಪ್‌ಗಳ ಮೂಲಕ ಸ್ವಲ್ಪ ಸಮಯದವರೆಗೆ ಅನಿಲ ಪೂರೈಕೆಯಾದಾಗ, ಜನರು ವಿಶೇಷ ರೀತಿಯ ಪ್ಲಾಸ್ಟಿಕ್ ಬಲೂನ್‌ಗಳಲ್ಲಿ ಅನಿಲವನ್ನು ಸಂಗ್ರಹಿಸುತ್ತಾರೆ. ನಂತರ ಆ ಅನಿಲವನ್ನು ಪೈಪ್ ಮೂಲಕ ಒಲೆಗೆ ಸಂಪರ್ಕಿಸಿ ಅದರ ಮೂಲಕ ಅಡುಗೆ ಮಾಡುತ್ತಾರೆ. ಈ ಬಲೂನ್‌ಗಳ ಬೆಲೆ ಒಂದರಿಂದ ಒಂದೂವರೆ ಸಾವಿರ ಪಾಕಿಸ್ತಾನಿ ರೂಪಾಯಿಗಳಷ್ಟಿದೆ.
ಇದು ಚಲಿಸುವ ಬಾಂಬ್! – ತಜ್ಞರ ಎಚ್ಚರಿಕೆ
ಈ ವಿಚಾರದ ಬಗ್ಗೆ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಚಲಿಸುವ ಬಾಂಬ್ ಎಂದು ಎಚ್ಚರಿಸಿದ್ದಾರೆ. ಅನಿಲ ತುಂಬಿದ ಪ್ಲಾಸ್ಟಿಕ್ ಬಲೂನ್‌ಗಳು ಘರ್ಷಣೆ, ಶಾಖ ಅಥವಾ ಸಣ್ಣ ಕಿಡಿಯಿಂದಲೂ ಯಾವುದೇ ಕ್ಷಣದಲ್ಲಿ ದೊಡ್ಡ ಸ್ಫೋಟಗೊಳ್ಳಬಹುದು ಎಂದು ಭದ್ರತಾ ವಿಶ್ಲೇಷಕರು ಹೇಳಿದ್ದಾರೆ. ಮನೆಗಳಲ್ಲಿ ಇಂತಹ ಅನಿಲ ತುಂಬಿದ ಬಲೂನ್‌ಗಳನ್ನು ಇಡುವುದರಿಂದ ಬೆಂಕಿ ಅನಾಹುತ ಸಂಭವಿಸುವ ಅಪಾಯವಿದ್ದು, ಜನನಿಬಿಡ ಪ್ರದೇಶಗಳಲ್ಲಿ ಇದು ಗಂಭೀರ ಪರಿಣಾಮಗಳನ್ನು ಬೀರಬಹುದು.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ