50 ವರ್ಷಗಳ ಹಿಂದೆ ಇಸ್ಲಾಂ ಉಲ್ಲೇಖಿಸಿ ನಿಷೇಧ ಹೇರಲಾಗಿತ್ತು!

ಇಸ್ಲಾಮಾಬಾದ್ (ಪಾಕಿಸ್ತಾನ) – ಆರ್ಥಿಕ ದಿವಾಳಿತನದ ಅಂಚಿನಲ್ಲಿರುವ ‘ಭಯೋತ್ಪಾದಕ ದೇಶ’ ಪಾಕಿಸ್ತಾನವು ಸುಮಾರು 50 ವರ್ಷಗಳ ನಂತರ ಮತ್ತೆ ಮದ್ಯ ರಫ್ತು ಆರಂಭಿಸಿದೆ. ದೇಶದ ಏಕೈಕ ಸ್ಥಳೀಯ ಸಂಸ್ಥೆಯಾದ ‘ಮರ್ರಿ ಬ್ರೂವರಿ’ ಏಪ್ರಿಲ್ 2026 ರಲ್ಲಿ ಬ್ರಿಟನ್, ಜಪಾನ್, ಪೋರ್ಚುಗಲ್ ಮತ್ತು ಥೈಲ್ಯಾಂಡ್ ದೇಶಗಳಿಗೆ ಬಿಯರ್ ಮತ್ತು ವಿವಿಧ ರೀತಿಯ ಮದ್ಯಗಳನ್ನು ರಫ್ತು ಮಾಡಿದೆ. ಸಂಸ್ಥೆಯ ರಫ್ತು ವ್ಯವಸ್ಥಾಪಕ ರಮೀಜ್ ಶಾ ಅವರ ಪ್ರಕಾರ, ಪ್ರಸ್ತುತ ವಿದೇಶಗಳಲ್ಲಿ ಜಾಲವನ್ನು ನಿರ್ಮಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯಿದೆ.
ಪಾಕಿಸ್ತಾನದಲ್ಲಿ ಮುಸ್ಲಿಂ ಜನಸಂಖ್ಯೆಗಾಗಿ 50 ವರ್ಷಗಳ ಹಿಂದೆ ಇಸ್ಲಾಮಿಕ್ ನಿಯಮಗಳನ್ನು ಉಲ್ಲೇಖಿಸಿ ಮದ್ಯದ ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ ಮುಸ್ಲಿಮೇತರರಿಗೆ ಕೆಲವು ವಿನಾಯಿತಿಗಳಿವೆ.
ಈಗ ಸರಕಾರವು ಮದ್ಯ ರಫ್ತಿಗೆ ಅನುಮತಿ ನೀಡಿದೆ. ಇದರಿಂದಾಗಿ ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ (ಇಸ್ಲಾಮಿಕ್ ದೇಶಗಳ ಸಂಘಟನೆ) ಭಾಗವಾಗಿಲ್ಲದ ದೇಶಗಳಿಗೆ ಮದ್ಯ ಪೂರೈಕೆಯನ್ನು ಪ್ರಾರಂಭಿಸಲಾಗಿದೆ. 2021 ರಲ್ಲಿ ಪಾಕಿಸ್ತಾನವು ಬಲೂಚಿಸ್ತಾನದಲ್ಲಿರುವ ಚೀನೀ ಸಂಸ್ಥೆಯೊಂದಕ್ಕೂ ಮದ್ಯ ತಯಾರಿಸಲು ಅನುಮತಿ ನೀಡಿತ್ತು, ಇದರಿಂದಾಗಿ ಅಲ್ಲಿ ಕೆಲಸ ಮಾಡುವ ಚೀನೀ ನಾಗರಿಕರ ಅಗತ್ಯಗಳನ್ನು ಪೂರೈಸಬಹುದು.
ಪಾಕಿಸ್ತಾನದ ಮೇಲೆ 138 ಬಿಲಿಯನ್ ಡಾಲರ್ ವಿದೇಶಿ ಸಾಲ
ಪಾಕಿಸ್ತಾನ ಸರಕಾರದ ಆದಾಯ ಮತ್ತು ವೆಚ್ಚಗಳ ನಡುವೆ ದೊಡ್ಡ ಅಂತರವಿದೆ. 2026 ರ ಆರ್ಥಿಕ ವರ್ಷದಲ್ಲಿ ಸರಕಾರದ ನೈಜ ಆದಾಯವು ಅಂದಾಜು 11 ಸಾವಿರದ 72 ಬಿಲಿಯನ್ ಪಾಕಿಸ್ತಾನಿ ರೂಪಾಯಿ (40 ಬಿಲಿಯನ್ ಡಾಲರ್) ಆಗಿದೆ, ಆದರೆ ವೆಚ್ಚವು 16 ಸಾವಿರದ 286 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳವರೆಗೆ (58 ಬಿಲಿಯನ್ ಡಾಲರ್) ತಲುಪಿದೆ. ಇವುಗಳಲ್ಲಿ ಸುಮಾರು 8 ಸಾವಿರದ 200 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು (30 ಬಿಲಿಯನ್ ಡಾಲರ್) ಕೇವಲ ಸಾಲದ ಬಡ್ಡಿಯನ್ನು ತೀರಿಸಲು ಖರ್ಚು ಮಾಡಲಾಗುತ್ತಿದೆ.
ಪಾಕಿಸ್ತಾನದ ಮೇಲೆ ಪ್ರಸ್ತುತ ಸುಮಾರು 38 ಸಾವಿರದ 640 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳ (138 ಬಿಲಿಯನ್ ಡಾಲರ್) ವಿದೇಶಿ ಸಾಲವಿದೆ. ಇದರಲ್ಲಿ ಸರಕಾರಿ ಸಾಲದ ಹೊರತಾಗಿ ಖಾಸಗಿ ವಲಯ, ಬ್ಯಾಂಕುಗಳು ಮತ್ತು ಸಂಸ್ಥೆಗಳ ಬಾಕಿಗಳೂ ಸೇರಿವೆ. ಈ ಪೈಕಿ ಸುಮಾರು 25 ಸಾವಿರದ 760 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳು (92 ಬಿಲಿಯನ್ ಡಾಲರ್) ಸರಕಾರಿ ಸಾಲವಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation