ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಮತ್ತೊಮ್ಮೆ ಹೇಳಿಕೆ

ವಾಷಿಂಗ್ಟನ್ (ಅಮೆರಿಕ) – ನನಗೆ ನಿಮ್ಮ ಪ್ರಧಾನಿ ತುಂಬಾ ಇಷ್ಟ. ಅವರು ನನ್ನ ಒಳ್ಳೆಯ ಸ್ನೇಹಿತ ಮತ್ತು ನಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆಯಿದೆ. ನಮ್ಮ ಸಂಬಂಧಗಳು ತುಂಬಾ ಚೆನ್ನಾಗಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಟ್ ಹೌಸ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಹೇಳಿದರು.
ಭಾರತ ಮತ್ತು ಅಮೆರಿಕ ನಡುವೆ ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ಏರ್ಪಡಲಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಭಾರತವು ಅಮೆರಿಕದ ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪ !
ಹಲವು ವರ್ಷಗಳ ಕಾಲ ಭಾರತವು ಅಮೆರಿಕದ ದುರುಪಯೋಗ ಪಡೆದುಕೊಂಡಿತು. ಅವರು ನಮ್ಮ ಮೇಲೆ ಭಾರಿ ಆಮದು ಸುಂಕವನ್ನು ಹೇರಿದರು ಮತ್ತು ಸ್ವತಃ ಮಾತ್ರ ಏನನ್ನೂ ನೀಡಲಿಲ್ಲ ಎಂದು ಟ್ರಂಪ್ ಆರೋಪಿಸಿದರು. ‘ಹಾರ್ಲೆ ಡೇವಿಡ್ಸನ್’ ಸಂಸ್ಥೆಗೆ ಭಾರತಕ್ಕೆ ಬರಲು ಬಿಡುತ್ತಿರಲಿಲ್ಲ. ಅವರು ಅದರ ಮೇಲೆ 200 ಪ್ರತಿಶತ ತೆರಿಗೆಯನ್ನು ವಿಧಿಸಿದ್ದರು. ದುರದೃಷ್ಟವಶಾತ್ ಇದು ನನ್ನ ಅಧಿಕಾರಾವಧಿಗಿಂತ ಮುಂಚೆ ನಡೆದಿತ್ತು. ಅವರಿಗೆ ತಮ್ಮ ಮೋಟಾರ್ ಸೈಕಲ್‌ಗಳನ್ನು ಇಲ್ಲಿ (ಅಮೆರಿಕದಲ್ಲಿ) ಮಾರಾಟ ಮಾಡಬೇಕಿತ್ತು ಮತ್ತು ನಾವು ಅವರಿಂದ ಯಾವುದೇ ತೆರಿಗೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ; ಆದರೆ ಕಳೆದ ಕೆಲವು ವರ್ಷಗಳಲ್ಲಿ ಈ ವ್ಯಾಪಾರ ಸಂಬಂಧಗಳ ಸ್ವರೂಪ ಬದಲಾಗಿದೆ. ಈಗ ಭಾರತದೊಂದಿಗಿನ ಆರ್ಥಿಕ ಸಂಬಂಧಗಳಿಂದ ಅಮೆರಿಕಕ್ಕೆ ಹೆಚ್ಚಿನ ಲಾಭವಾಗುತ್ತಿದೆ ಎಂದೂ ಟ್ರಂಪ್ ಮಾಧ್ಯಮಗಳೊಂದಿಗೆ ಮಾತನಾಡುವಾಗ ತಿಳಿಸಿದರು.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು